ಬೆಂಗಳೂರು: ಡಿ.19: ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದಿಠ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಾಗೂ ಪ್ರತಿಕೃತಿ ದಹನ ಮತ್ತು ಅಮಿತ್ ಶಾ ಭಾವಚಿತ್ರಕ್ಕೆ ಚಪ್ಪಳಿಯಲ್ಲಿ ಹೊಡೆಯುವುದರ ಮೂಲಕ ತೀವ್ರವಾಗಿ ಖಂಡಿಸಲಾಯಿತು.
ಇದೇ ವೇಳೆ ವಿಶ್ವವಿದ್ಯಾಲಯದ ಕುಲಪತಿಗಳ ಅನುಪಸ್ಥಿತಿಯಲ್ಲಿ ಕುಲಸಚಿವ ಶೇಕ್ ಲತೀಫ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಕುಲಪತಿಗಳ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸಲ್ಲಿಸುತ್ತಿರುವ ದೂರಿನ ಮನವಿ ಪತ್ರವನ್ನು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಮೂಲಕ ನೀಡಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಅತಿಥಿ ಉಪನ್ಯಾಸಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಈ ಹೋರಾಟದ ನೇತೃತ್ವ ವಹಿಸಿದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಗೌರವ ಅಧ್ಯಕ್ಷರು ಚಂದ್ರು ಪೆರಿಯಾರ್, ಒಕ್ಕೂಟದ ಅಧ್ಯಕ್ಷ ಸತೀಶ್ ಜಿ.ಕೆ , ಯಲ್ಲಪ್ಪ ಅಜೀವ, ಈಶ್ವರ್ ಸಿರಿಗೇರಿ, ಲಿಂಗರಾಜು ಎಸ್.ಎಠ, ಅಶೋಕ್ ವಿ, ಸುಗುಣ, ಪ್ರಶಾಂತ ಟಿ.ಎಂ, ಮತೀತರ ವಿದ್ಯಾರ್ಥಿ ಮುಖಂಡರು ನೇತೃತ್ವ ವಹಿಸಿದರು .