ಬಾಗಲಕೋಟೆ೨೯ : ನಗರದ ಸೆ್ಟೀಶನ್ ರಸ್ತೆಯಲ್ಲಿರುವ ದುಗರ್ಾವಿಹಾರ ವೈದ್ಯಕೀಯ ಕೇಂದ್ರದಲ್ಲಿ ಇಂದು ನಡೆದ ಬೃಹತ್ ಪ್ರಮಾಣದ ಆರೋಗ್ಯ ಶಿಬಿರದಲ್ಲಿ 65 ಹೃದಯ ರೋಗಿಗಳು, 25 ಕ್ಕೂ ಹೆಚ್ಚು ಸ್ತ್ರೀ ರೋಗ ಸಂಬಂಧಿತ ಕಾಯಿಲೆಗಳಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ಹಾಗೂ ಮಾರ್ಗದರ್ಶನ ಮಾಡಲಾಯಿತು.
ನಗರದ ಖ್ಯಾತ ಹೃದಯ ರೋಗ ತಜ್ಞ ಡಾ. ಸಮೀರರಾವ್ ಕುಲಕಣರ್ಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ಸಹನಾರಾವ್ ಅವರು ತಮ್ಮ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಉಚಿತ ತಪಾಸಣೆ ನಡೆಸಿದರು. ಸುಮಾರು 65 ಹೃದಯ ರೋಗಿಗಳಿಗೆ ಇಸಿಜಿ, ಮಧುಮೇಹ, ರಕ್ತ ತಪಾಸಣೆ ನಡೆಸಿ ಸಲಹೆ ನೀಡಲಾಯಿತಲ್ಲದೇ ಉಚಿತ ಮಾತ್ರೆಗಳನ್ನು ನೀಡಲಾಯಿತು.
ಡಾ. ಸಹನಾರಾವ್ ಅವರು 25 ಕ್ಕೂ ಹೆಚ್ಚು ಸ್ತ್ರೀ ರೋಗಿಗಳ ಕಾಯಿಲೆ ಪರೀಕ್ಷಿಸಿ ಸಲಹೆ ನೀಡಿದರು.
ಒತ್ತಡದ ಬದುಕಿನಲ್ಲಿ ದೈನಂದಿನ ಬದುಕು, ಆಹಾರ ಪದ್ಧತಿ ಬಗ್ಗೆ ಉಭಯ ವೈದ್ಯರು ರೋಗಿಗಳಿಗೆ ಮಾರ್ಗದರ್ಶನ ಮಾಡಿದರು. ಆಸ್ಪತ್ರೆಯ ಸಂಚಾಲಕ ಕೆ. ರಾಘವೇಂದ್ರರಾವ್ ಉಪಸ್ಥಿತರಿದ್ದರು.
ಡಾ. ಪ್ರಶಾಂತ ಚಿಂಚೊಳ್ಳಿ, ಸಂಜೀವ ಗುಡಿ, ರಾಘು ಗುಮಾಸ್ತೆ, ಪವನ ಸೀಮಿಕೇರಿ, ಭಾಸ್ಕರ ಮನಗೂಳಿ, ಸಂತೋಷ ಚಾವರೆ, ಆದರ್ಶ ಗಲಗಲಿ, ಸಂಜೀವ ಜೋಶಿ, ಅನೀಲ ಮುಳಗುಂದ ಮತ್ತಿತರರು ಆರೋಗ್ಯ ಶಿಬಿರದಲ್ಲಿ ನೆರವಾದರು.