ಜನಾಕರ್ಷಿಸಿದ ಶೋಭಾ ಯಾತ್ರೆ ಮೆರವಣಿಗೆ

ಲೋಕದರ್ಶನವರದಿ

ರಾಣೇಬೆನ್ನೂರು21: ಗಣೇಶೋತ್ಸವದ ಅಂಗವಾಗಿ ಇಲ್ಲಿನ ಸಂಗಮ ವೃತ್ತದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಪ್ರತಿಷ್ಠಾಪಿಸಲಾಗಿದ್ದ  ಗಣೇಶ ಮೂತರ್ಿ ವಿಸರ್ಜನೆ ಶೋಭಾಯಾತ್ರೆಯ ಮೆರವಣಿಗೆಯು ಶುಕ್ರವಾರ ರಾತ್ರಿಭಕ್ತ ಸಾಗರದ ಮಧ್ಯ ಅದ್ದೂರಿಯಾಗಿ ನೆರವೇರಿತು. 

   ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಹಿಳೆಯರು ಅಂಗಳಕ್ಕೆ ನೀರು ಹಾಕಿ ರಂಗೋಲಿ ಬಿಡಿಸಿಯಾತ್ರೆಯನ್ನು  ಭವ್ಯವಾಗಿ ಸ್ವಾಗತಿಸಿದರು. ಜೈ ಆಂಜನೇಯ, ಚಿತ್ರದುರ್ಗ ಜಿಲ್ಲೆಯ ಸಿಂಗಾಪುರದ ದುರ್ಗದ ಸಿರಿ ಸಾಂಸ್ಕೃತಿಕ ಜನಪದ ಕಲಾ ಸಂಘ ಜಾಂಜಮೇಳ, ದಾವಣಗೆರೆ ನಾಸಿಕ್ ಡೋಲ್ ಹಾಗೂ ವಿವಿಧ ಪ್ರಾಣಿಗಳ ಮುಖವಾಡ ಧರಿಸಿದ ಸ್ಥಬ್ದ ಗೊಂಬೆಗಳು ಮೆರವಣಿಗೆಯಲ್ಲಿ ಮೆರಗು ನೀಡಿದವು. 

    ಮೆರವಣಿಗೆಯು ಸಂಗಮ ವೃತ್ತದಿಂದ ಪ್ರಾರಂಭವಾಗಿ ರಂಗನಾಥ ನಗರದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. 

 ಸಹಸ್ರಾರು ಯುವಕರು ಡಿಜೆ ಹಾಡಿಗೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಮೆರವಣಿಗೆಯು ಮಧ್ಯರಾತ್ರಿಯವರೆಗೂ ಸಾಗಿತು. ಡಿವೈಎಸ್ಪಿ ಟಿ.ವಿ.ಸುರೇಶ ನೇತೃತ್ವದಲ್ಲಿ  ಮುಂಜಾಗೃತಾ ಕ್ರಮವಾಗಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.