ಕೌಶಲ್ಯಾಭಿವೃದ್ಧಿಗೆ ಬೃಹತ್ ಸಮಾಲೋಚನೆ ಜಾಗೃತಿ ಕಾರ್ಯಕ್ರಮ: ಕೃಷ್ಣನ್

ಧಾರವಾಡ 27: ಯುವಸಮುದಾಯದಲ್ಲಿ ವಿವಿಧ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಕರ್ಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ಪ್ರಮಾಣದಲ್ಲಿ ಸಮಾಲೋಚನೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಭಾರತ ಸಕರ್ಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಸಚಿವಾಲಯದ ಕಾರ್ಯದಶರ್ಿ ಕೆ.ಟಿ. ಕೃಷ್ಣನ್ ಹೇಳಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರವಾಡ ಜಿಲ್ಲೆಯಲ್ಲಿ 56 ಕ್ಕೂ ಹೆಚ್ಚು ಐಟಿಐ ಕಾಲೇಜ್ಗಳು, 100 ಕ್ಕೂ ಹೆಚ್ಚು ಕಾಲೇಜ್ಗಳು ಇವೆ. ಇಲ್ಲಿನ ಕೋಸರ್್ಗಳನ್ನು ಪೂರೈಸುವವರಿಗೆ ವಿವಿಧ ವಲಯಗಳಲ್ಲಿ ಇರುವ ಉದ್ಯಾಗವಕಾಶಗಳ ಕುರಿತು ಮನವರಿಕೆ ಮಾಡಿಕೊಡಬೇಕು. ಯುವಜನತೆಯ ಸವಾಲುಗಳನ್ನು ಗುರುತಿಸಿ ಪರಿಹರಿಸಲು ಜಿಲ್ಲಾಮಟ್ಟದ ಯೋಜನೆ ರೂಪಿಸಬೇಕು. ಶಾಲೆ ಹಾಗೂ ಪಿ.ಯು ಕಾಲೇಜ್ಗಳಲ್ಲಿ 40 ರಿಂದ 45 ಸಾವಿರ ವಿದ್ಯಾಥರ್ಿಗಳಿದ್ದಾರೆ. ಅವರ ಆಸಕ್ತಿಗನುಗುಣವಾಗಿ ಕೌಶಲ್ಯಗಳನ್ನು ಕಲಿಸಬೇಕು. ಇದಕ್ಕಾಗಿ ತಜ್ಞರ ತಂಡಗಳನ್ನು ರಚಿಸಿ ತರಬೇತಿಗಳನ್ನು ಏರ್ಪಡಿಸಬೇಕು. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ಸಂಚಾರಿ ತರಬೇತಿ ಶಾಲೆ ಆರಂಭಿಸಬೇಕು. ಧಾರವಾಡದ ಸಿಡಾಕ್ ಸಂಸ್ಥೆಯ ನೆರವಿನೊಂದಿಗೆ ಪದವೀಧರರಿಗೆ ತರಬೇತಿಗಳನ್ನು ಆಯೋಜಿಸಲಾಗುವುದು. ಬಿ.ಎ., ಬಿಕಾಂ ನಂತಹ ಪದವಿಗಳನ್ನು ಪಡೆದವರಿಗೆ ಅವರ ಅಂತಿಮ ವರ್ಷದಲ್ಲಿ ಅಪ್ರೆಂಟಿಷಿಪ್ ಆಧಾರಿತ ತರಬೇತಿ ಯೋಜನೆಯಡಿ ಪ್ರವಾಸೋದ್ಯಮ ಗೈಡ್, ಜಿಎಸ್ಟಿ ಖಾತೆಗಳ ನಿರ್ವಹಣೆ ಸಹಾಯದಂತಹ ಹೊಸ ಕೋಸರ್್ಗಳನ್ನು ಅಳವಡಿಸಲು ಚಿಂತನೆ ನಡೆದಿದೆ. ಕನರ್ಾಟಕ ವಿಶ್ವವಿದ್ಯಾಲಯ ಹಾಗೂ ಕೇಂದ್ರಸಕರ್ಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ಹಣಕಾಸು ಮತ್ತು ಸೇವಾ ಕ್ಷೇತ್ರದಲ್ಲಿ ವಿಪುಲ ಉದ್ಯೋಗವಕಾಶಗಳು ಇವೆ. ಆ ಕ್ಷೇತ್ರಕ್ಕೆ ಕೌಶಲ್ಯ ಹೊಂದಿದ ಯುವಕರನ್ನು ಒದಗಿಸುವುದು ಅವಶ್ಯವಾಗಿದೆ. ಐಟಿಐ ಕೋಸರ್್ಗಳಲ್ಲಿ ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ ಕೋಸರ್್ಗಳಿಗೆ ಜನಪ್ರಿಯತೆ ಇದೆ. ಉಳಿದ ವಿಭಾಗಗಳ ಮಹತ್ವದ ಕುರಿತು ಅರಿವು ಮೂಡಿಸುವ ಬೃಹತ್ ಕಾರ್ಯಕ್ರಮವನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಹಮ್ಮಿಕೊಳ್ಳಬೇಕು ಎಂದರು.