ಲೋಕದರ್ಶನ ವರದಿ
ಬ್ಯಾಡಗಿ04: ತಂತ್ರಜ್ಞಾನದಲ್ಲಿ ಹಿಂದೆ ಬಿದ್ದರೆ ಕೃಷಿಯಲ್ಲಿ ಲಾಭ ಮಾಡಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಸೈನಿಕ ಹುಳುಗಳ ನಿಯಂತ್ರಣಕ್ಕೆ ಸಾಮೂಹಿಕ ವಿಷಪ್ರಾಷಣವೊಂದೇ ಸುಲಭ ಮಾಗರ್ೋಪಾಯ ಎಂದು ಜಂಟಿ ಕೃಷಿ ನಿದರ್ೇಶಕ ಸದಾಶಿವ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರು ಗ್ರಾಮದ ಗುಬ್ಬಿ ನಂಜುಂಡೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರವನ್ನುದ್ದೇಶಿಸಿ ಮಾತನಾಡಿದರು ಗೋವಿನಜೋಳ ಬೆಳೆಯಲ್ಲಿ ಕಾಣಿಸಿಕೊಂಡಿರುವ ಸೈನಿಕ ಹುಳುವಿನ ಬಾಧೆ ಬಹಳಷ್ಟು ಅಂತಕಕಾರಿಯಾಗಿದ್ದು ಈ ಹಂತದಲ್ಲಿ ಕೆಲ ಸಾಮೂಹಿಕ ಮಾಗರ್ೋಪಾಯಗಳನ್ನು ರೈತ ಸಮುದಾಯ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಪ್ರಕೃತಿ ಜೊತೆ ಹೋರಾಟ ಅನಿವಾರ್ಯ: ಕೃಷಿ ಪದ್ಧತಿಗಳಲ್ಲಿ ಅದರಲ್ಲೂ ಭಾರತೀಯ ಕೃಷಿ ಪದ್ಧತಿಯಲ್ಲಿ ಪ್ರಕೃತಿಯ ಜೊತೆ ಕೆಲವೊಂದು ಬಾರಿ ಅದರ ವಿರುದ್ಧವೂ ಹೋರಾಟ ಅನಿವಾರ್ಯ, ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಸಹ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿಕರು ಮುಂದಾಗಬೇಕಾ ಗುತ್ತದೆ, ಭಯಪಡುವ ಅಗತ್ಯವಿಲ್ಲ ಪ್ರಾಥಮಿಕ ಹಂತದಲ್ಲೇ ರೋಗ ಪತ್ತೆಯಾಗಿರುವುದರಿಂದ ಸುಲಭವಾಗಿ ನಿಯಂತ್ರಿಸಬಹುದಾಗಿದೆ ಎಂದರು.
ವಿಷಪ್ರಾಶಣ ಪ್ರಾತ್ಯಕ್ಷಿಕೆ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗುಂಡಣ್ಣನವರ ಅವರಿಂದ ಸ್ಥಳದಲ್ಲೇ ವಿಷ ಪ್ರಾಷಣ ತಯಾರಿಕಾ ವಿಧಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರುಗಿತು. ಸೈನಿಕ ಹುಳುವಿನ ಬಾಧೆ ನಿಯಂತ್ರಣಕ್ಕೆ ಬಳಸುವ ಸಾಧನಗಳೊಂದಿಗೆ ಆಗಮಿಸಿದ್ದ ಅವರು, ಕೀಟಗಳನ್ನು ನಾಶಪಡಿಸುವ ಪ್ರಾತ್ಯಕ್ಷಿಕೆ ವೇದಿಕೆಯಲ್ಲಿ ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು, ಅವರ ಹೊಲಕ್ಕೆ ಬಂದಿದೆ ನಮ್ಮ ಹೊಲದಲ್ಲಿ ಇಲ್ಲ ಎಂಬ ಉದಾಸೀನತೆ ತೋರಬೇಡಿ ಯಾವುದೇ ಕಾರಣಕ್ಕೂ ಕಡ್ಡಾಯವಾಗಿ ಸಾಮೂಹಿಕ ವಿಷಪ್ರಾಶಣ ಮಾಡುವಂತೆ ಕರೆ ನೀಡಿದರು.
ಅಧಿಕಾರಿಗಳನ್ನು ನೇಮಕ ಮಾಡಿ: ರೈತ ಸಂಘದ ಮುಖಂಡ ಮಲ್ಲಿಕಾಜರ್ುನ ಬಳ್ಳಾರಿ, ಸೈನಿಕ ಹುಳುವಿನ ಬಾಧೆಗೆ ರೈತ ಸಮುದಾಯ ನಲುಗಿದೆ, ಮೊದಲೇ ಸಾಲದ ಶೂಲದಲ್ಲಿ ಸಿಲುಕಿರುವ ಅವರಿಗೆ ಪ್ರಸಕ್ತ ವರ್ಷ ಉತ್ತಮ ಬೆಳೆ ಬರುವಂತಹ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಕೂಡಲೇ ಕೃಷಿ ಇಲಾಖೆಯು ಸೈನಿಕ ಹುಳುವಿನ ಪತ್ತೆ ಹಚ್ಚುವುದು ಸೇರಿದಂತೆ ಅವುಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಮಾಯಿತಿ ನೀಡಲು ಮತ್ತು ಮೇಲುಸ್ತುವಾರಿ ನಡೆಸಲು ಪ್ರತ್ಯೇಕವಾಗಿ ಅಧಿಕಾರಿಗಳನ್ನು ನೇಮಕ ಮಾಡಬೇಕು ಇಲ್ಲದೇ ಹೋದಲ್ಲಿ ಪ್ರಮುಖ ವಾಣಿಜ್ಯ ಬೆಳೆಯೊಂದು ನಮ್ಮ ಕಣ್ಣೆದುರಿಗೆ ನಾಶವಾವುದು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಅಶೋಕ, ಕೃಷ್ಣಾ ನಾಯಕ್ ಮಂಜುನಾಥ ಅಂತರವಳ್ಳಿ, ತಹಶೀಲ್ದಾರ ಶಿವಶಂಕರ್ ನಾಯಕ್, ರೈತ ಮುಖಂಡರಾದ ಗುಡ್ಡಪ್ಪ, ಶ್ರೀ ನಂಜುಂಡಸ್ವಾಮಿ, ಸಹಾಯಕ ಕೃಷಿ ನಿದರ್ೇಶಕ ಎನ್.ಜಿ.ಅಮೃತೇಶ್ವರ ಕೃಷಿ ಅಧಿಕಾರಿಗಳಾದ ಆರ್.ಮಂಜುನಾಥ, ಆತ್ಮಾ ಸಿಬ್ಬಂದಿ ಸೇರಿದಂತೆ ಅನುವುಗಾರರು ಉಪಸ್ಥಿತರಿದ್ದರು.