ಜಿಲ್ಲಾಡಳಿತದಿಂದ ಸಾಮೂಹಿಕ ಯೋಗಾಭ್ಯಾಸ

ಧಾರವಾಡ 21: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಆಯುಷ ಇಲಾಖೆ, ಯುವ ಸಬಲೀಕರಣ ಕ್ರೀಡಾ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ 7 ಘಂಟೆಗೆ  5 ನೇ ಅಂತರಾಷ್ಟ್ರೀಯ ಯೋಗ ದುನಾಚರಣೆ ನಿಮಿತ್ಯ ಸಾಮೂಹಿಕ ಯೋಗಾಭ್ಯಾಸ ಮಾಡಲಾಯಿತು.

ಜಿಲ್ಲಾ ಪಂಚಾಯತ ಅಧ್ಯಕ್ಷರಾದ ವಿಜಯಲಕ್ಷ್ಮಿ ಪಾಟೀಲ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ ಅವರು ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಹುಬ್ಬಳ್ಳಿ ವೈಷ್ಣೊದೇವಿ ಮಂದಿರದ ಧರ್ಮಾಧಿಕಾರಿ ದೇವಪ್ಪಜ್ಜ ಸ್ವಾಮಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಗಿರಧರ ಕುಕನೂರ, ಜಿಲ್ಲಾ ರೇಡ್ ಕ್ರಾಸ್ ಅಧ್ಯಕ್ಷ ಡಾ.ವಿ.ಡಿ.ಕರ್ಪುರಮಠ, ತಾಲೂಕಾ ಪಂಚಾಯತ ಇಓ ಎಸ್.ಎಸ್.ಖಾದ್ರೋಳ್ಳಿ, ಶಹರ ಕ್ಷೇತ್ರಶಿಕ್ಷಣಾಧಿಕಾರಿ ಎ.ಎ.ಖಾಜಿ ವೇದಿಕೆಯಲ್ಲಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಗಮೇಶ ಕಲ್ಲಹಾಳ ಸ್ವಾಗತಿಸಿದರು. ಯೋಗ ಗುರು ಜಗದೀಶ ಮಳಗಿ ಕಾರ್ಯಕ್ರಮ ನಿರೂಪಿಸಿದರು.

ನಂತರ ಜರುಗಿದ ಸಾಮೂಹಿಕ ಯೋಗಾಭ್ಯಾಸದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ, ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ , ವಿದ್ಯಾರ್ಥಿನಿಯರು ಪಾಲ್ಗೊಂಡು ವಿವಿಧ ಭಂಗಿಯಲ್ಲಿರುವ ಯೋಗ ಪ್ರಕಾರಗಳನ್ನು ಮಾಡಿದರು. ಯೋಗ ತಜ್ಞ ಜಗದೀಶ ಮಳಗಿ ಯೋಗ ಆಸನದ ಭೋದನೆ ಮಾಡಿದರು. 

ಕಾರ್ಯಕ್ರಮದ ನಂತರ ಸಾಮೂಹಿಕ ಯೋಗಾಬ್ಯಾಸದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಔಷಧಿಯ ಸಸಿಗಳನ್ನು ವಿತರಿಸಲಾಯಿತು ಮತ್ತು ಕೆ.ಎಂ.ಎಫ್.ದವರು ಹಾಲು ವಿತರಿಸಿದರು.