ಬೈಲಹೊಂಗಲ 29: ಸಮಾಜದಲ್ಲಿ ಬಡವ ಬಲ್ಲಿದ ಎನ್ನದೇ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿ ಸ್ವಾವಲಂಬಿಗೆ ಪ್ರೇರೇಪಣೆ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಅದ್ವೀತಿಯವಾಗಿದೆ ಎಂದು ಬೆಳಗಾವಿ, ನಾಗನೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಸಂಪಗಾಂವ ಗ್ರಾಮದ ಬೈಲಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಸಮೀತಿ ಇವುಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧರ್ಮ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಸಕರ್ಾರ ರೂಪಿಸುವ ಪ್ರತಿಯೊಂದು ಯೋಜನೆಗಳನ್ನು ತಮ್ಮ ಸಹಭಾಗಿತ್ವದಲ್ಲಿ ಆಯೋಜನೆ ಮಾಡಿ ಜನರಿಗೆ ತಲುಪಿಸಿ ಆಥರ್ಿಕ ಪ್ರಗತಿಗೆ ಕಾರಣವಾಗಿರುವ ಪೂಜ್ಯ ವೀರೇಂದ್ರ ಹೆಗಡೆ ಅವರ ಕಳಕಳಿ ಮೆಚ್ಚುವಂತದ್ದು ಎಂದರು.
ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿದರ್ೇಶಕ ಶಿನಪ್ಪ.ಎಂ ಮಾತನಾಡಿ, ಬದುಕು ಸಾರ್ಥಕವಾಗಬೇಕಾದರೆ ಪರೋಪಕಾರಿಯಾಗಿ ಬದುಕ