ಮಾಸ್ಕ, ಜೀವನಾವಶ್ಯಕ ವಸ್ತುಗಳು ವಿತರಣೆ

ಲೋಕದರ್ಶನ ವರದಿ

ಸಿಂದಗಿ 10: ಮತಕ್ಷೇತ್ರದ ರಾಂಪೂರ ಪಿ.ಎ, ಕಲಹಳ್ಳಿ, ಕೊರಳ್ಳಿ, ಬಳಗಾನೂರ, ರಾಮನಹಳ್ಳಿ, ಗುಡ್ಡಳ್ಳಿ, ವಿಬೂತಿಹಳ್ಳಿ, ಕಡಣಿ, ತಾವರಖೇಡ, ಹೊಸತಾರಾಪುರ, ತಾರಾಪುರ, ಹೊಸತಾರಾಪುರ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿಜೆಪಿ ರಾಷ್ಟ್ರೀಯ ಸದಸ್ಯ ಶಂಬುಲಿಂಗ ಕಕ್ಕಳಮೇಲಿ ವಕೀಲರು ಮಾಸ್ಕ ಹಾಗೂ ಜೀವನಾವಶ್ಯಕ ವಸ್ತುಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಕೊರೊನಾ ಇದೊಂದು ಜಗತ್ತನ್ನೆ ಬೆಚ್ಚಿಬಿಳಿಸಿದ ಮಹಾಮಾರಿ ಅದರ ತಡೆಗೆ ಕೇಂದ್ರ ಸರ್ಕಾರ ಮಾಡಿರುವ ಲಾಕಡೌನ್ ಒಂದು ಉತ್ತಮ ಕಾರ್ಯ ಆ ಹಿನ್ನಲೆಯಲ್ಲಿ ದೇಶದ ಅನೇಕ ಬಡ ಜನತೆ, ಕೂಲಿ ಕಾರ್ಮಿಕರು ಸೇರಿದಂತೆ ಕೋಟ್ಯಾಂತರ ಜನ ಒಂದು ಹೊತ್ತಿನ ತುತ್ತಿಗಾಗಿ ಪರಿತಪ್ಪಿಸುವಂತಾಗಿದೆ ಅನೇಕ ಬಡ ಕುಟುಂಬಗಳು ಲಾಕಡೌನ್ದಿಂದ ಕೆಲಸವಿಲ್ಲದೆ ತೊಂದರೆಗೀಡಾಗಿದ್ದಾರೆ. ಇದಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ ಎಲ್ಲರೂ ಸರಕಾರದ ಆದೇಶವನ್ನು ಚಾಚು ತಪ್ಪದೇ ಪಾಲಿಸುವ ಮೂಲಕ  ಯಾರು ಮನೆ ಬಿಟ್ಟು ಹೊರಗಡೆ ವಿನಾ ಕಾರಣ ಸಂಚಾರ ಮಾಡುವುದರಿಂದ ರೋಗ ಹರಡುವ ಪ್ರಮಾಣ ಹೆಚ್ಚಾಗುತ್ತದೆ ಕಾರಣ ಕೊರೊನಾ ವೈರಸ್ ತಡೆಗಟ್ಟುವ ಮತ್ತು ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿ ಅದನ್ನು ಹೊಗಲಾಡಿಸಲು ಯಾವ ಕ್ರಮ ಜರುಗಿಸಬೇಕು ಎನ್ನುವದನ್ನು ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು.