ಬಳ್ಳಾರಿ,ಏ.04: ಬಳ್ಳಾರಿಯಲ್ಲಿರುವ ಸರಕಾರಿ ಮಹಿಳಾ ಸ್ವೀಕಾರ ಕೇಂದ್ರದಲ್ಲಿರುವ ಮಹಿಳೆಯಿರಿಂದಲೇ ಅತ್ಯಂತ ಸುರಕ್ಷತೆ ಮತ್ತು ವಿಭಿನ್ನವಾಗಿರುವ ಮಾಸ್ಕ್ಗಳ ತಯಾರಿಕೆ ಮಾಡಲಾಗುತ್ತಿದೆ.
ಬಳ್ಳಾರಿ ಜಿಲ್ಲಾಡಳಿತವು ಇದಕ್ಕೆ ಬೇಕಾದ ಕಚ್ಛಾವಸ್ತುವನ್ನು ಒದಗಿಸಿದ್ದು, ಅದನ್ನು ಬಳಸಿಕೊಂಡು ಇಲ್ಲಿನ ಮಹಿಳೆಯರು ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ. ಒಟ್ಟು 5 ಸಾವಿರ ಮಾಸ್ಕ್ಗಳು ಸಿದ್ದಪಡಿಸಲಾಗುತ್ತಿದೆ. ಅವುಗಳನ್ನು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿರುವ ಆರೋಗ್ಯ,ಕಂದಾಯ ಮತ್ತು ಇನ್ನೀತರ ಇಲಾಖೆಗಳ ಸಿಬ್ಬಂದಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕ ನಾಗರಾಜ ತಿಳಿಸಿದರು.ಮಾಸ್ಕ್ ಸಿದ್ದಪಡಿಸುತ್ತಿರುವ ಈ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಎಂ.ಎಸ್.ಶ್ರೀಕರ್,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನಿತೀಶ್ ಮತ್ತು ಎಸ್ಪಿ ಸಿ.ಕೆ.ಬಾಬಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಶ್ರೀಕರ್ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.