ಬಳ್ಳಾರಿ/ಹೊಸಪೇಟೆ,ಮೇ.27: ಕೋವಿಡ್-19 ಹಿನ್ನಲೆಯಲ್ಲಿ ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುರಕ್ಷತಾ ದೃಷ್ಟಿಯಿಂದ ಸಿಬ್ಬಂದಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ಎಂ.ಎಸ್.ಪಿ.ಎಲ್ ಸಂಸ್ಥೆ ನೀಡಿದ್ದಾರೆ ಎಂದು ಹೊಸಪೇಟೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ನಡುವೆಯೂ ಸಕರ್ಾರದ ಆದೇಶದ ಮೇರೆಗೆ ಸಾರ್ವಜನಿಕರಿಗೆ ಪ್ರಯಾಣದ ಅನುಕೂಲಕ್ಕಾಗಿ ಕೆಲ ನಿಬರ್ಂಧನೆಗಳೊಂದಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಹೊಸಪೇಟೆ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಪ್ರಯಾಣಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಸಿ.ಎಸ್.ಆರ್. ಅಡಿಯಲ್ಲಿ 2000 ಮಾಸ್ಕ್ ಹಾಗೂ 200 ಲೀ ನಷ್ಟು ಸ್ಯಾನಿಟೈಸರ್ ದ್ರಾವಣವನ್ನು ಎಂ.ಎಸ್.ಪಿ.ಎಲ್ ಸಂಸ್ಥೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ