ಪೊಲೀಸ್ ಸಿಬ್ಬಂದಿಗೆ ಮಾಸ್ಕ್,ಸ್ಯಾನಿಟೈಜರ್ ವಿತರಣೆ

ಹೊಸಪೇಟೆ23 :ಕೊರೊನ ವೈರಸ್  ತಡೆಗಟ್ಟುವಲಿ ಅರೋಗ್ಯ ಹಾಗೂ ಪೊಲೀಸ್ ಪೌರಕಾಮರ್ಿಕ ಸಿಬ್ಬಂದಿ ಪಾತ್ರ ಹಿರಿದು ,ಸಾರ್ವಜನಿಕರು ಲಾಕ್ಡೌನ್ ನಿಯಮ ಪಾಲಿಸುವ ಜತೆಗೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಹೊಸಪೇಟೆ ಕ್ರೆಡಿಟ್ ಆಕ್ಸೆಸಸ್  ಗ್ರಾಮೀಣ ಕೂಟದ ವಲಯ ಅಧಿಕಾರಿ ಶರಣಪ್ಪ ಗೌಡ ಹೇಳಿದರು .ಪಟ್ಟಣದ ಪೊಲೀಸ್ ಠಾಣೆ ಹಾಗೂ ಅರೋಗ್ಯ ಇಲಾಖೆ ಸಿಬ್ಬಂದಿಗೆ ಸೋಮವಾರ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿ ಅವರು ಮಾತನಾಡಿದರು .ಮಾನವ ಕುಲಕ್ಕೆ ಮಾರಕ ವಾಗಿರುವ ಕರೋನ ವೈರಸ್ ಅನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸಬೇಕಿದೆ .ವೈದ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ,ಹಾಗೂ ಪೌರ ಕಾಮರ್ಿಕ ಸಿಬ್ಬಂದಿ ತಮ್ಮ ಕುಟುಂಬವನ್ನು ತೊರೆದು  ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತಿದ್ದಾರೆ .ಈ ನಿಟ್ಟಿನಲ್ಲಿ  ಸಂಘ -ಸಂಸ್ಥೆಗಳು ಹಾಗೂ ಸಾರ್ವಜನಿಕರು ನಮ್ಮ ರಕ್ಷಣೆ ಸಿಬ್ಬಂದಿ ವರ್ಗದವರ ಸೇವೆಯನ್ನು ಸ್ಮರಿಸಬೇಕು .ಅಧಿಕಾರಿಗಳ ಮಾರ್ಗದರ್ಶನ ಪಾಲಿಸಬೇಕೆಂದು ಪಟ್ಟಣ ಪೊಲೀಸ್ ಠಾಣೆ ಪಿಎಸ್ಐ ಶಿವರಾಜ್ ಗೋಖಲೆ ,ಹಾಗೂ ಚಿತ್ತವಾಡ್ಗಿ ಪೊಲೀಸ್ ಠಾಣೆ ಪಿಎಸ್ಐ ಸರೋಜ ಹಾಗೂ ಖಿ ಃ ಡ್ಯಾಮ್ ಪಿಎಸ್ಐ ನಾಗಪ್ಪ ಅವರು ಮಾತನಾಡಿದರು . ಕೊರೊನವನ್ನು  ತಡೆಗಟ್ಟಲು ಜನರಲ್ಲಿ ಪರಸ್ಪರ ಅಂತರ ಕಾಪಾಡುವುದು ಮತ್ತು ಅನವಶ್ಯಕವಾಗಿ ಓಡಾದುದನ್ನು ನಿಲ್ಲಿಸಿದಾಗ ಕರೋನ ವೈರಸ್ ತಡೆಗಟ್ಟಲು ಸಾಧ್ಯವಾಗಿದೆ .ಇದೆ ಸಂದರ್ಭದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಕೂಟ ವತಿಯಿಂದ ಪೊಲೀಸ್ ಹಾಗೂ ಅರೋಗ್ಯ ಇಲಾಖೆಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹೊಸಪೇಟೆ ಗ್ರಾಮೀಣ ಕೂಟ ಶಾಖೆಯ ಶಾಖಾಧಿಕಾರಿ ಸುನಿಲ್ ಕುಮಾರ್ ಹಾಗೂ ಉಪ ಶಾಖಾಧಿಕಾರಿ ಗಂಗಾಧರ ಅವರು ಹಾಗೂ  ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು .