ರಾಮದುರ್ಗ 01: ವಿರಕ್ತ ಮಠಾಧೀಶರು ತಮ್ಮ ಧಾಮರ್ಿಕ ಎಲ್ಲೆಯನ್ನು ಮೀರಿ ಸ್ವಾರ್ಥ ಸಾಧನೆಯತ್ತ ಸಾಗುತ್ತಿದ್ದು, ವಿರಕ್ತ ನೀತಿಯನ್ನು ಪಾಲಿಸದೇ ಹೋದಲ್ಲಿ ಸಮಾಜದ ಸುಧಾರಣೆ ಅಸಾಧ್ಯ. ವಿರಕ್ತ ಮಠಾಧೀಶರು ಗುರು-ಶಿಷ್ಯ ಪರಂಪರೆಯನ್ನು ಮರೆತು ವಂಶಪಾರಂಪರ್ಯದತ್ತ ಸಾಗುತ್ತಿರುವುದು ವಿಷಾಧನೀಯ ಸಂಗತಿ ಖಜೂರಿ ಕೋರಣೇಶ್ವರ ಮಠದ ಶ್ರೀ ಮುರಘೇಂದ್ರ ಕೋರಣೇಶ್ವರ ಶಿವಯೋಗಿಗಳು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಗೊಣ್ಣಾಗರ ಗ್ರಾಮದಲ್ಲಿ ಗುರುವಾರ ಸಂಜೆ ಅಖಿಲ ಭಾರತ ಶರಣ ಸಂಸ್ಕೃತಿ ಉತ್ಸವ ಸಮಿತಿ ಖಜೂರಿಯ ನೇತೃತ್ವದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಬಸವ ಚಿಂತನೆಯಡಿ ಏರ್ಪಡಿಸಿದ 8 ನೇ ದಿನದ ವಿಶ್ವ ಬಸವ ಧರ್ಮ ದರ್ಶನ ಪ್ರವಚನದ ನೇತೃತ್ವ ವಹಿಸಿ ಅವರು ಮಾತನಾಡಿದರು.
ವಿರಕ್ತರು ಯಾವುದೇ ಆಸೆ ಆಮಿಷಕ್ಕೆ ಒಳಗಾಗುವಂತಿಲ್ಲ. ಅದನ್ನು ಮೀರಿ, ಕೆಲ ಮಠಾಧೀಶರು ಮಠಗಳನ್ನು ತಮ್ಮ ಸ್ವಂತ ಆಸ್ತಿಯನ್ನು ಮಾಡಿಕೊಂಡಿರುವುದು ಧರ್ಮ ವಿರೋಧಿ ಕಾರ್ಯದಲ್ಲಿ ತೊಡಗಿ, ಸ್ವಾರ್ಥ ಸಾಧನೆಯ ಬೆನ್ನು ಹತ್ತಿರುವುದು ಈಡೀ ಧರ್ಮಗುರುಗಳ ಸಮುದಾಯವೇ ತಲೆ ತಗ್ಗಿಸುವಂತಾಗಿದೆ. ವಿರಕ್ತರು ತಮ್ಮ ಸ್ವಾರ್ಥ ಸಾಧನೆ ತೊರೆದು ಸಮಾಜದ ಸರ್ವ ಭಕ್ತರೊಂದಿಗೆ ಬೆರೆತು ಸಮಾಜಕ್ಕೆ ಧರ್ಮ ನೀತಿಯ ಮಾರ್ಗದರ್ಶನ ನೀಡಿದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯವೆಂದರು.
ಕೆ. ಇಟಗಾ ಶಂಕರಾಚಾರ್ಯ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, 12 ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದ ವಿಚಾರಧಾರೆಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಕಾರಣ ಜನತೆ ಪರಮಾತ್ಮನಲ್ಲಿ ಭಕ್ತಿ ಇಟ್ಟು ಕಾಯಕ, ದಾಸೋಹ ಸೇವೆ ಸಲ್ಲಿಸಿ ಮುಕ್ತಿ ಹೊಂದಬೇಕೆಂದರು. ಈ ಸಂದರ್ಭದಲ್ಲಿ ಗೌಡಪ್ಪಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮದ ಮುಖಂಡರಾದ ಶಿವರಾಯಪ್ಪ ಕೇರಿ, ಮಾಗುಂಡಪ್ಪ ಬರದೇಲಿ, ಶ್ರೀಶೈಲಪ್ಪ ಕೇರಿ, ನಾಗರಾಜ ಬಡಿಗೇರ, ರಮೇಶ ಕೇರಿ, ಈರಪ್ಪ ಉಪ್ಪಿನ ಮಹಾಂತ ಹೂಗಾರ ಸೇರಿದಂತೆ ಇತರರಿದ್ದರು.