ಮಾರ್ಕ್ಸ್‌ 143ನೇ ಜನ್ಮದಿನಾಚರಣೆ

Marx's 143rd birthday celebration

ಮಾರ್ಕ್ಸ್‌ 143ನೇ ಜನ್ಮದಿನಾಚರಣೆ

ಕೊಪ್ಪಳ 14: ಕಾರ್ಲ್‌ ಮಾರ್ಕ್ಸ್‌ 143ನೇ ಜನ್ಮದಿನವನ್ನು ಕೊಪ್ಪಳದ ಎಸ್‌. ಯು. ಸಿ. ಐ (ಕಮ್ಯುನಿಸ್ಟ್‌ ) ಪಕ್ಷದ ಕಚೇರಿಯಲ್ಲಿ ಕಾರ್ಮಿಕರ ವರ್ಗದ ಮಹಾನಾಯಕ ವೈಜ್ಞಾನಿಕ ಸಮಾಜವಾದದ ಪಿತಾಮಹ ಕಾರ್ಲ್‌ ಮಾರ್ಕ್ಸ ರವರ ಜನ್ಮದಿನವನ್ನು ಆಚರಣೆ ಮಾಡಲಾಯಿತು.  

ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿಗಳಾದ ಶರಣುಗಡ್ಡಿ ಮಾತನಾಡಿ,"ಕಾರ್ಲ್‌ ಮಾರ್ಕ್ಸ್‌, ಕತ್ತಲೆಯಲ್ಲಿ ಸಿಲುಕಿದ್ದ ಹತಭಾಗ್ಯರ ಬದುಕಿಗೆ ಬೆಳಕು ನೀಡಿದ ’ಪ್ರೊಮೀಥಿಯಸ್!’ (ಗ್ರೀಕ್ ಪುರಾಣದಲ್ಲಿ, ಸ್ವರ್ಗದಿಂದ ಭೂಮಿಗೆ ಬೆಳಕು ತಂದವನು). ಶೋಷಿತ ಜನರ ರಕ್ತವನ್ನು ಜಿಗಣೆಯಂತೆ ಶ್ರೀಮಂತ ಬಂಡವಾಳಿಗರು ಹಿರುತ್ತಿದ್ದರೋ, ಆ ಜನರ ಕೈಗೆ ಅವರು ಮಾರ್ಕ್ಸ ವಾದದ ಅಸ್ತ್ರವನ್ನು ನೀಡಿದರು.  

“ಮಾನವನು ಹುಟ್ಟಿನಿಂದಲೇ ಸ್ವತಂತ್ರ; ಆದರೆ ಎಲ್ಲಕಡೆಯೂ ಶೃಂಖಲೆಗಳಿಂದ ಬಂಧಿಸಲ್ಪಟ್ಟಿದ್ದಾನೆ” ಎಂದು ರೂಸೋ ಹೇಳಿದ. ಆದರೆ "ಜಗತ್ತಿನ ಕಾರ್ಮಿಕರಿಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಆದರೆ ಗೆಲ್ಲಲು ಇಡೀ ಜಗತ್ತೆ ಇದೆ" ಎಂಬುದನ್ನು ಮಾರ್ಕ್ಸ ತಮ್ಮ ಕ್ರಾಂತಿಕಾರಿ ಸಂಗಾತಿ ಮಹಾನ್ ಎಂಗೆಲ್ಸ್‌ ರ ಜೊತೆಗೂಡಿ ತೋರಿಸಿಕೊಟ್ಟರು ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಶರಣು,ಶರಣಬಸವ ಪಾಟೀಲ್, ಆರ್ ವಿ ಕಾಮನೂರ್, ಗಂಗರಾಜ ಅಳ್ಳಳ್ಳಿ, ಮಂಜುಳಾ ಮಜ್ಜಿಗೆ, ಶಾರದಾ ಗಡ್ಡಿ, ಉಪಸ್ಥಿತರಿದ್ದರು.