ಮಾರುತಿ ಪೂಜಾರ್ ಗುಪ್ತವಾರ್ತೆ ಘಟಕಕ್ಕೆ ವರ್ಗಾವಣೆ

ಲೋಕದರ್ಶನ ವರದಿ

ಕೊಪ್ಪಳ 24: ಜಿಲ್ಲೆಯ ಯಲಬುರ್ಗಾ  ತಾಲೂಕಿನ ಬೇವೂರು ಪೊಲೀಸ್ ಠಾಣೆಯ ಸಿವ್ಹಿಲ್ ಹೆಡ್ ಕಾನ್ಸ್ಟೇಬಲ್ ಮಾರುತಿ ಪೂಜಾರ್ ಅವರನ್ನು ಕೊಪ್ಪಳದ ರಾಜ್ಯ ಗುಪ್ತವಾರ್ತೆ ಘಟಕಕ್ಕೆ  ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರು ಪತ್ರದನುಸಾರ ವರ್ಗಾವಣೆ ಮಾಡಲಾಗಿದೆ.

ಬೇವೂರು ಪೊಲೀಸ್ ಠಾಣೆಯ ಸಿವ್ಹಿಲ್ ಹೆಡ್ ಕಾನ್ಸ್ಟೇಬಲ್ ಮಾರುತಿ ಪೂಜಾರ್ ಅವರು ಜನಾನುರಾಗಿ ಜಿಲ್ಲೆಯಲ್ಲಿ ಉತ್ತಮ ಸೇವೆಯನ್ನು ಒದಗಿಸಿ ಈ ಹಿಂದೆ ಕೊಪ್ಪಳದ ರಾಜ್ಯ ಗುಪ್ತವಾರ್ತೆ ಘಟಕದಲ್ಲಿ ಸೇವೆ ಸಲ್ಲಿಸುವಾಗ ಮುಖ್ಯಮಂತ್ರಿಗಳ ಪದಕ ಪಡೆದಿದ್ದಾರೆ, ಇವರು ಎಲ್ಲೇ ಕಾರ್ಯ ನಿರ್ವಹಿಸಿದರೂ ಎಲ್ಲಾರಿಂದ ಉತ್ತಮ ಪ್ರಶಂಸೆ ಪಡೆದಿದ್ದಾರೆ.

ಬೇವೂರು ಪೊಲೀಸ್ ಠಾಣೆಯಲ್ಲಿ ಸಿವ್ಹಿಲ್ ಹೆಡ್ ಕಾನ್ಸ್ಟೇಬಲ್ ಮಾರುತಿ ಪೂಜಾರ್ ಅವರನ್ನು ಪೊಲೀಸ್ ಇನ್ಸ್ಪೇಕ್ಟರ್ ಶಂಕರ ನಾಯಕ್, ಎಎಸ್ಐ ರಾಜಮಹ್ಮದ್ ಹಾಗೂ ಪೋಲೀಸ್ ಸಿಬ್ಬಂದಿ ಅಭಿನಂದಿಸಿ ಬೀಳ್ಕೊಟ್ಟರು.