ಸುಧೀರ ನಾಯರ್
ಮೂಡಲಗಿ 12: ನಾನು ಪದವೀಧರ ನಾನೇಕೆ ಕುರಿ, ಕೋಳಿ ಸಾಕಾಣಿಕೆ ಮಾಡಲಿ ಎನ್ನುವ ಯುವಕರ ಮಧ್ಯ ಎಂಬಿಎ ಪದವಿ ಪಡೆದು ಎರಡು ವರ್ಷಗಳ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡಿದ ಯುವಕ ಪಶು ಸಾಕಾಣಿಕೆಯಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಪಶುಪಾಲಕ ಪ್ರಶಸ್ತಿ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಮಾರುತಿ ಮರಡಿ ಮೌರ್ಯ ಅವರಿಗೆ ಬೀದರನಲ್ಲಿ ನಡೆದ ರಾಜ್ಯ ಮಟ್ಟದ ಪಶುಮೇಳ 2020 ರಲ್ಲಿ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸಕರ್ಾರ ಶ್ರೇಷ್ಠ ಪಶುಪಾಲಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶಸ್ತಿ ನೀಡಿ ಸತ್ಕರಿಸಿದ್ದಾರೆ.
ಮಾರುತಿ ಮರಡಿ ಮೌರ್ಯ ಎಂಬಿಎ ಪದವಿ ಮುಗಿಸಿ ನೌಕರಿ ಮಾಡಿ ಕೃಷಿಯಲ್ಲಿ ಎನ್ನನಾದರೂ ಸಾಧಿಸಬೇಕೇಂಬ ಛಲದಿಂದ ಕುರಿ ಸಾಕಾಣಿಕೆಗೆ ಮುಂದಾಗಿ ಯಶಸ್ಸು ಕಂಡಿದ್ದಾರೆ. ಮಾರುತಿಯ ಸಾಧನೆಗೆ ಹಲವಾರು ಪ್ರಶಸ್ತಿಗಳು ಹುಡುಕಿ ಬರುತ್ತಿದ್ದು, ಅನೇಕ ಕೃಷಿಮೇಳದಲ್ಲಿ ಆಡು-ಕುರಿ ಸಾಕಾಣಿಕೆಯ ಬಗ್ಗೆ ಕಾರ್ಯಕ್ರಮಗಳಲ್ಲಿ ಉಪನ್ಯಾಸವನ್ನು ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪದವಿ ಪಡೆದು ನೌಕರಿ ಸಿಗುತ್ತಿಲ್ಲ ಎಂದು ಗೋಣಗುವ ಯುವಕರಿಗೆ ಮಾರುತಿ ಮರಡಿ ಮೌರ್ಯ ಸಾಧನೆಗೆ ಹಲವು ಕ್ಷೇತ್ರಗಳಿವೆ ಎಂಬುವುದನ್ನು ತೋರಿಸಿ ಕೊಟ್ಟಿದ್ದಾರೆ.