ಮಾರುತೇಶ್ವರ ಕಾರ್ತಿಕೋತ್ಸವ, ಪುರಾಣ ಮಂಗಲ ಉತ್ಸವ

Maruteshwar Kartikotsava, Purana Mangala Utsav

ಮಾರುತೇಶ್ವರ ಕಾರ್ತಿಕೋತ್ಸವ, ಪುರಾಣ ಮಂಗಲ ಉತ್ಸವ  


ಇಂಡಿ 11: ತಾಲೂಕಿನ ಸುಕ್ಷೇತ್ರ ಬೋಳೆಗಾಂವ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವ ಹಾಗೂ ಜಾತ್ರೆ ಮಹೋತ್ಸವ ಅಂಗವಾಗಿ ಪ್ರಥಮ ವರ್ಷದ ಬಸವೇಶ್ವರ ಯುವಕ ಮಂಡಳಿ ಬೋಳೆಗಾಂವ ಇವರ ವತಿಯಿಂದ ಆಯೋಜಿಸಿರುವ ಮಾಹಾ ಶಿವಶರಣೆ ವೈರಾಗ್ಯ ನಿಧಿ ಅಕ್ಕಮಹಾದೇವಿ ಪ್ರವಚನ ಮಹಾಮಂಗಲ ಉತ್ಸವ ಹಾಗೂ ಕಾರ್ತಿಕ ಮಾಸದ ದೀಪೋತ್ಸವಕ್ಕೆ ನಿನ್ನೆ ನಡೆಯಿತು. 

ಹಿಕ್ಕನಗುತ್ತಿ ಲಿಂಗಾಯತ ಮಠದ ಖ್ಯಾತ ಪುರಾಣಿಕ ಪ್ರಭುಲಿಂಗ ಶರಣು ಹೇಳಿಕೊಂಡು ಬಂದಿದ್ದರು. ನಂತರ ಆಶೀರ್ವಚನ ನೀಡಿ ಮಾತನಾಡಿದ ಪ್ರಭುಲಿಂಗ ಶರಣು ದೇವಸ್ಥಾನಗಳಲ್ಲಿ ದೀಪ ಬೆಳಗುವ ಕಾರ್ತಿಕ ಮಾಸ ಹಿಂದೂ ಪಂಚಾಂಗದಲ್ಲಿ ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆ.  

ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.  

 ಶಿಕ್ಷಕರಾದ ಆನಂದ ಮೊರೆ ಅವರು ಮಾತನಾಡಿ ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರವಾಗಿದೆ. ಇಂದಿನ ಮಕ್ಕಳಿಗೆ ಸಂಸ್ಕಾರ ನೀಡುವುದು ಅತಿ ಅವಶ್ಯಕವಾಗಿದೆ ಎಂದು ಹೇಳಿದರು. ಇಂಡಿಯ ಶಿಕ್ಷಣ ಸಂಯೋಜಕ  ಆನಂದ ಹುಣಸಗಿ ಅವರು ಮಾತನಾಡಿ ಅಕ್ಕಮಹಾದೇವಿ ಅವರು ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ ಎಂದು ಹೇಳಿದರು. ಮಲ್ಲನಗೌಡ ಬಿರಾದಾರ ವಿ ಎಸ್ ಗೊಳ್ಳಗಿ ಅಣ್ಣಾರಾಯ ಎಳೆಗಾಂವ ಸಂಗಮೇಶ ಮುತ್ತಿಗಿ, ಹಣಮಂತ ಕಪ್ಪೆನವರ ರಾಜಶೇಖರ ಗೊಳ್ಳಗಿ, ಭೀಮಶ್ಯಾ ಹುಣಶ್ಯಾಳ ಶ್ರೀಶೈಲ ಕಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.