ನವದೆಹಲಿ, ಫೆ ೫ : ಇದೇ ೮ ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಅವಿವಾಹಿತ ರಾಘವ್ ಚಡ್ಡಾಗೆ ಮತಯಾಚನೆಗೆ ತೆರಳುವ ಕಡೆಗಳೆಗಳೆಲ್ಲಾ ಮದುವೆ ಪ್ರಸ್ತಾಪಗಳು ಹೆಚ್ಚುತ್ತಿವೆ.
ಮತಯಾಚಿಸುವ ಸ್ಥಳಗಳಲ್ಲಿ ಎದುರಾಗುತ್ತಿರುವ ಈ ಮದುವೆ ಪ್ರಸ್ತಾಪಗಳಿಂದ ಚಡ್ಡಾ ಕಕ್ಕಾಬಿಕ್ಕಿಯಾಗಿದ್ದಾರಂತೆ. ಮದುವೆ ಪ್ರಸ್ತಾಪಗಳು ಎಷ್ಟು ಪ್ರಮಾಣದಲ್ಲಿ ಮತಗಳಾಗಿ ಬದಲಾಗಲಿವೆ ಎಂಬುದು ತಿಳಿದಿಲ್ಲವಾದರೂ, ಈವರೆಗೆ ಡಜನ್ ಗೂ ಕ್ಕೂ ಹೆಚ್ಚು ವಿವಾಹ ಪ್ರಪೋಸಲ್ಗಳು ಬಂದಿವೆ ಎಂದು ಅವರ ಸಾಮಾಜಿಕ ಮಾಧ್ಯಮ ತಂಡ ಬಹಿರಂಗಪಡಿಸಿದೆ.
ವೃತ್ತಿಯಲ್ಲಿ ಸಿ ಎ ಆಗಿರುವ ೩೧ ವರ್ಷದ ಅವಿವಾಹಿತ ರಾಘವ್ ಚಡ್ಡಾ ದೆಹಲಿಯ ರಾಜಿಂದರ್ ನಗರ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಮತಯಾಚನೆಯ ಭಾಗವಾಗಿ ಕ್ಷೇತ್ರದೆಲ್ಲೆಡೆ ನಿತ್ಯವೂ ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುವ ರಾಘವ್ ಚಡ್ಡಾ ಅವರ ಮಾಹಿತಿಯನ್ನು ನಿತ್ಯ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದೆ. ಮಹಿಳಾ ಅನುಯಾಯಿಗಳಿಂದ ಚಡ್ಡಾ ಅವರಿಗೆ ನಿತ್ಯವೂ ಮದುವೆಯ ಪ್ರಸ್ತಾಪಗಳು ಬರುತ್ತಿವೆ ಎಂದು ಅವರ ಸಾಮಾಜಿಕ ಮಾಧ್ಯಮ ತಂಡ ಹೇಳಿದೆ.
‘ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಮಹಿಳಾ ಅನುಯಾಯಿ ಚಡ್ಡಾಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದಕ್ಕೆ ಜಾಣತನದಿಂದ ಉತ್ತರಿಸಿರುವ ರಾಘವ್, ಪ್ರಸ್ತುತ ನನ್ನ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಮದುವೆ ಮಾಡಿಕೊಳ್ಳಲು ಇದು ಸರಿಯಾದ ಸಮಯವಲ್ಲ ಉತ್ತರಿಸಿದ್ದಾರೆ.
ಮತಯಾಚಿಸಲು ಶಾಲೆಯೊಂದಕ್ಕೆ ರಾಘವ್ ತೆರಳಿದ್ದಾಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಶಿಕ್ಷಕಿ ತಮಗೊಬ್ಬಳು ಮಗಳಿದ್ದಿದ್ದರೆ, ನಿಮಗೆ ಕೊಟ್ಟು ಮದುವೆ ಮಾಡಿಸುತ್ತಿದೆ ಎಂದು ಹೇಳಿದ್ದಾರೆ ಎಂದು ಅವರ ಸಾಮಾಜಿಕ ಮಾಧ್ಯಮ ತಂಡ ತಿಳಿಸಿದೆ.
ಇನ್ನೂ ನಿಮಗೆ ಎಷ್ಟೇ ಮುದುವೆ ಪ್ರಪೋಸ್ ಗಳು ಬಂದರೂ... ನೀವು ಮಾತ್ರ ವಿವಾಹವಾಗಬೇಡಿ, ಹಾಗೆ ಮಾಡಿದರೆ ನನ್ನ ಹೃದಯ ಚೂರು ಚೂರಾಗುತ್ತದೆ ಎಂದು ಮಹಿಳೆಯೊಬ್ಬಳು ಆಪ್ ನಾಯಕನಿಗೆ ಇನ್ಸ್ಟಾಗ್ರಾಮ್ ನಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಮತ್ತೊಬ್ಬ ಮಹಿಳೆ ಟ್ವೀಟರ್ ಮೂಲಕ ಚಡ್ಡಾ ಅವರನ್ನು ಉದ್ದೇಶಿಸಿ, ನಮ್ಮ ಸುತ್ತಲಿನ ಅತ್ಯಂತ ಅರ್ಹ ಬ್ಯಾಚುಲರ್ ಎಂಬ ಕಥೆಯನ್ನು ಹಂಚಿಕೊಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಆರ್ ಪಿ ಸಿಂಗ್ , ಚಡ್ಡಾ ವಿರುದ್ಧ ಸ್ಪರ್ಧಿಯಾಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನ ರಾಕಿ ತುಸಿಡ್ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ.