ಮಳೆಗಾಗಿ ಪ್ರಾರ್ಥನೆ ಕತ್ತೆಗಳಿಗೆ ಮದುವೆ, ಮೆರವಣಿಗೆ

ಲೋಕದರ್ಶನವರದಿ

ರಾಣೇಬೆನ್ನೂರು ಜು.8:  ತಾಲೂಕಿನ ಕರೂರು ಗ್ರಾಮದಲ್ಲಿ ಸೋಮವಾರ ಮಳೆಗಾಗಿ ಗ್ರಾಮಸ್ಥರು ವಿವಿಧ ದೇವಸ್ಥಾನಗಳಿಗೆ ತೆರಳಿ ಅಲ್ಲಿನ ದೇವರುಗಳಿಗೆ ಅತ್ಯಂತ ಭಕ್ತಿ-ಭಾವದೊಂದಿಗೆ ಪೂಜೆ ಸಲ್ಲಿಸಿ ನಂತರ ಕತ್ತೆಗಳ ಮದುವೆ ಮಾಡಿಸುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.                 

    ಈ ಸಂದರ್ಭದಲ್ಲಿ ಗ್ರಾವಸ್ಥರಾದ ಹನುಮಂತಪ್ಪ ಹೊರಕೇರಿ, ಗಿರೀಶ ರಾಮನಗೌಡ್ರ, ಚಿನ್ನಪ್ಪ ಮುಡದ್ಯಾವಣ್ಣನವರ, ಬಸಪ್ಪ ಚಳಗೇರಿ, ಮಲ್ಲಪ್ಪ ಹಿರೇಗೌಡ್ರ, ರಾಮಣ್ಣ ಬಾಕರ್ಿ, ನಂದೀಶ ಅಜ್ಜನವರ, ಶೇಖಪ್ಪ ಹಳ್ಳೇರ, ನಾಗರಾಜ ಚಳಗೇರಿ, ಬಸವರಾಜ ಮುಕ್ತೇನಹಳ್ಳಿ, ಮಂಜು ಹಾದರಗೇರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಾಗರೀಕರು ಪಾಲ್ಗೊಂಡಿದ್ದರು.