ಧಾರವಾಡ 18: ಪ್ರಾಥಮಿಕ ಶಾಲಾ ಮಕ್ಕಳಿಗೆ ವ್ಯವಹಾರಿಕ ಜ್ಞಾನ ನೀಡುವ ಉದ್ದೇಶದಿಂದ ಪ್ರಾಯೋಗಿಕ ಶಾಲಾ ಸಂತೆಯನ್ನು ಇಲ್ಲಿನ ಲಕಮಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಸಲಾಯಿತು.
ಶಾಲಾ ಸಂತೆಯಲ್ಲಿ ಮಕ್ಕಳು ತಮ್ಮ ಕುಟುಂಬದವರ ಸಹಾಯದೊಂದಿಗೆ ತಮ್ಮ ಹೊಲಗಳಲ್ಲಿ ಬೆಳೆಯಲಾದ ಹಸಿ ಕಡಲೆ, ಬಟಾಣಿ, ಕುಂಬಳಕಾಯಿ, ಮೆಣಸಿನಕಾಯಿ, ಟೊಮೆಟೊ, ಕೊತಂಬರಿ, ಮೆತ್ತೆ ನಂತಹ ತರಹೇವಾರಿ ತರಕಾರಿ ಅದಲ್ಲದೆ ವಿದ್ಯಾರ್ಥಿಗಳು ಮಜ್ಜಿಗೆ, ತಂಪು ಪಾನೀಯ, ಪಾನಿಪುರಿ, ಚಹಾ ಅಂಗಡಿಗಳನ್ನು ಇಟ್ಟು ಉತ್ತಮ ವ್ಯಾಪಾರ ನಡೆಸಿದರು.
ಈ ಒಂದು ವಿಭಿನ್ನ ಆಲೋಚನೆಯೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ವ್ಯವಹಾರಿಕ ಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿಗೆ ಒಂದು ಉತ್ತಮ ಪ್ರಯತ್ನವಾಗಿದೆ.
ಮಕ್ಕಳು ಕೇವಲ ಪಠ್ಯದ ಜೊತೆಗೆ ವ್ಯವಹಾರಿಕ ಜ್ಞಾನ ನೀಡುವ ಉದ್ದೇಶದಿಂದ ಈ ಸಂತೆಯನ್ನು ಏರಿ್ಡಸಲಾಗಿದೆ. ಇದರಿಂದ ಮಕ್ಕಳು ಸ್ವಲ್ಪ ಪ್ರಮಾಣದ ಆದಾಯವನ್ನು ಗಳಿಸಿಕೊಂಡರು.
ಶಾಲಾ ಮುಖ್ಯೋಪಾಧ್ಯಾಯ