ಲೋಕದರ್ಶನವರದಿ
ರಾಣೇಬೆನ್ನೂರು10: ಸ್ಥಳೀಯ ಶಿದ್ದೇಶ್ವರ ನಗರದಲ್ಲಿರುವ ಪದ್ಮಶಾಲಿ ಸಮಾಜದ ಗುರು ಮಾರ್ಕಂಢೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಾಲಿಕೆ ಮಹೋತ್ಸವ ಹಾಗೂ ವಿಜಯದಶಮಿ ಹಬ್ಬದ ಬನ್ನಿಮುಡಿಯುವ ಕಾರ್ಯಕ್ರಮ ಅತ್ಯಂತ ಭಕ್ತಿ ಭಾವದಿಂದ ನೆರವೇರಿತು. ಶರನ್ನವ ರಾತ್ರಿಯ ಅಂಗವಾಗಿ ಪ್ರತಿ ದಿನ ಸಂ. 7 ಗಂಟೆಯಿಂದ ರಾತ್ರಿ. 8-30 ರ ವರೆಗೆ ದೇವಿಪುರಾಣ ಪ್ರವಚನಗಳು ನಡೆದವು.
9 ದಿನಗಳ ಕಾಲ ವಿವಿಧ ಧಾರ್ಮಿಕ ಖಾರ್ಯಕ್ರಮಗಳು ಜರುಗಿದವು. ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ಪಾಲಕಿ ಮುಖಾಂತರ ನಗರದ ರಾಜಬೀದಿಗಳ ಮುಖಾಂತರ ಬಾಜಾ ಭಜಂತ್ರಿ ಮೂಲಕ ಸಂಚರಿಸಿತು. ದೊಡ್ಡಕೆರೆಯಲ್ಲಿರುವ ಕೋಡಿ ಆಂಜನೇಯ ಸ್ವಾಮಿಯ ದೇವಾಸ್ಥಾನದಲ್ಲಿರುವ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಬನ್ನಿಯನ್ನು ಕೆರೆಯಲ್ಲಿ ತೋಳೆದು ಪೊಜೆಯನ್ನು ಸಲ್ಲಿಸಲಾಯಿತು.
ನಂತರ ಬಂದಂತಹ ಸಮಾಜ ಹಿರಿಯರು ಬಂಧುಗಳಿಗೆ ಬಂಗಾರದಂತಿರುವ ಬನ್ನಿಯನ್ನು ವಿನಿಮಯ ಮಾಡಿಕೊಂಡರು.
ಪ್ರತಿನಿತ್ಯ ದೇವಸ್ಥಾನದಲ್ಲಿ ಪುರಾಣವನ್ನು ನೆರೆವೇರಿಸಿದ ಕರಬಸಪ್ಪ ಕೋಗಳೆ ಹಾಗೂ ಹಾರ್ಮೋನಿಯಂ ಮತ್ತು ಭಜನೆ ಕಾರ್ಯವನ್ನು ನಡೆಸಿಕೊಟ್ಟ ನಾಗಪ್ಪ ಐರಣಿ ಮತ್ತು ಸಂಗಡಿಗರಿಗೆ, ದೇವಸ್ಥಾನದ ಅರ್ಚಕ ಶಾಂತವೀರಯ್ಯ ಸ್ವಾಮಿಗಳಿಗೆ ಸನ್ಮಾನಕಾರ್ಯಕ್ರಮ ಮಾಡಲಾಯಿತು. ದೇವಸ್ಥಾನದ ಅಧ್ಯಕ್ಷ ನಾಗರಾಜ ಅಗಡಿಯವರ, ಉಪಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಕಾರ್ಯದರ್ಶಿ ಲಕ್ಷ್ಮಣ ಕಡ್ಲಿಬಾಳ, ಮಾರುತಿ ಗರಡಿಮನಿ, ಮಂಜುನಾಥ ಹುಬ್ಬಳ್ಳಿ. ಗುಡ್ಡಪ್ಪ ಹುಲ್ಲತ್ತಿ, ಮಾರುತಿ ಗರಡಿಮನಿ. ಹನುಮಂತಪ್ಪ ಸುಂಕಾಪುರ, ಬಸವರಾಜ ಐರಣಿ, ನಾಗರಾಜ ದೇವರೆಡ್ಡಿ, ರೇಖಪ್ಪ ಕಡ್ಲಿಬಾಳ, ಪ್ರವೀಣ ಗುತ್ತೋರು, ಎಲ್ಲಪ್ಪ ಗುತ್ತಲ, ಪ್ರಕಾಶ ಅಗಡಿ, ಷಣ್ಮುಖ ಶಿಗ್ಲಿ, ಮಂಜುನಾಥ ಶೆಟ್ಟಿ, ,ಲಕ್ಷ್ಮಣ ಗುಂಡೇರ, ನಾಗಪ್ಪ ಐರಣಿ ಸೇರಿದಂತೆ ಮತ್ತಿತರರು ಇದ್ದರು.