ಮಾರಿಕಾಂಬಾ ಜಾತ್ರೆ: ಮೂರು ದಿನಗಳ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ
Marikamba Fair: A three-day national-level wrestling tournament
ಸಾಗರ 07: ಮಾರಿಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ದೇಶದಾದ್ಯಂತ ಪ್ರಸಿದ್ದಿ ಪಡೆದಿದೆ. ದೇಶದ ನಾನಾ ಭಾಗಗಳಿಂದ ಪೈಲ್ವಾನರು ಬಯಲು ಅಖಾಡ ಕುಸ್ತಿಗೆ ಅನೇಕ ವರ್ಷಗಳಿಂದ ಬರುತ್ತಿದ್ದಾರೆ ಎಂದು ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ತಿಳಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಶುಕ್ರವಾರ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ವತಿಯಿಂದ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಏರಿ್ಡಸಿದ್ದ ಮೂರು ದಿನಗಳ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ, ಪೈಲ್ವಾನರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.ಇತ್ತೀಚಿನ ವರ್ಷಗಳಲ್ಲಿ ಗರಡಿಮನೆಗಳು ಮುಚ್ಚಿ ಹೋಗುತ್ತಿದೆ. ಕುಸ್ತಿ ಪಟುಗಳಿಗೆ ತಾಲೀಮು ಮಾಡಲು ಅವಕಾಶವೇ ಇಲ್ಲದಂತೆ ಅಗಿದೆ. ಬಯಲು ಕುಸ್ತಿ ಪಂದ್ಯಾವಳಿಗಳು ಜಾತ್ರೆ ಮತ್ತು ಉತ್ಸವಗಳಿಗೆ ಸೀಮಿತವಾಗಿರುವುದರಿಂದ ಮ್ಯಾಟ್ ಕುಸ್ತಿಯಲ್ಲಿ ಪೈಲ್ವಾನರು ಪಾಲ್ಗೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆಯೂ ಸಾಗರದಲ್ಲಿ ಗಾಂಧಿನಗರ ಯುವಜನ ಸಂಘ ಪ್ರತಿವರ್ಷ ನಡೆಸುವ ದಸರಾ ಕುಸ್ತಿ ಹಾಗೂ ಮಾರಿಕಾಂಬಾ ಸಮಿತಿ ಮೂರುವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಸಂದರ್ಭದಲ್ಲಿ ಆಯೋಜಿಸುವ ಕುಸ್ತಿಗೆ ಹೆಚ್ಚಿನ ಪೈಲ್ವಾನರು ಪಾಲ್ಗೊಳ್ಳುತ್ತಿರುವುದು ಮಲೆನಾಡು ಭಾಗದಲ್ಲಿ ಕುಸ್ತಿ ಕಲೆ ಉಳಿದು ಕೊಂಡು ಬರಲು ಕಾರಣವಾಗಿದೆ ಎಂದು ಹೇಳಿದರು.ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್ ಮಾತನಾಡಿ, ಜಾತ್ರೆ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿಯನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಶಾಸಕರು ಜಾತ್ರೆ ಯಶಸ್ಸಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ.
ಮೂರು ದಿನಗಳ ಕುಸ್ತಿ ಪಂದ್ಯಾವಳಿಗೆ ರಾಜ್ಯ ಮತ್ತು ಹೊರರಾಜ್ಯದ ಅನೇಕ ಕುಸ್ತಿಪಟುಗಳು ಆಗಮಿಸಿ ತಮ್ಮ ಹೆಸರು ನೋಂದಯಿಸಿ ಕೊಂಡಿದ್ದಾರೆ. ಕುಸ್ತಿ ಕಲೆ ಉಳಿಸಿ ಬೆಳೆಸಲು ಇಂತಹ ಪಂದ್ಯಾವಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಸಮಿತಿ ಉಪಾಧ್ಯಕ್ಷ ಸುಂದರ ಸಿಂಗ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ, ಸಂಚಾಲಕರಾದ ಪುರುಷೋತ್ತಮ, ಅಶೋಕ್, ಎಂ.ಎಸ್.ಶಶಿಕಾಂತ್, ಸಂತೋಷ್ ಸದ್ಗುರು, ಕೆಂಚಪ್ಪ, ರಮೇಶ್ ಟಿ.ಪಿ. ಇನ್ನಿತರರು ಹಾಜರಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 