ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ  Appeal to the District Collector to arrange drinking water

ತಾಳಿಕೋಟಿ 23 :  ತಾಲೂಕಿನ ಹರನಾಳ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉದ್ಭವಿಸಿದ್ದು ಇದನ್ನು ತುರ್ತಾಗಿ ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ಭೀಮರಾಜ ಸೇನೆ ರಾಜ್ಯಾಧ್ಯಕ್ಷ ಶಿವು ನಾಟೀಕಾರ ನೇತೃತ್ವದಲ್ಲಿ ಹರನಾಳ ಗ್ರಾಮಸ್ಥರು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ತಾಳಿಕೋಟಿ ತಾಲೂಕಿನ ಹರನಾಳ ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕುಡಿಯುವ ನೀರಿಗೆ ಉಂಟಾಗಿ ಜನರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮದಲ್ಲಿರುವ ಬೋರ್ವೆಲ್ ಕೆಲಸ ಮಾಡದೆ ಸ್ಥಗಿತವಾಗಿದ್ದು ಕುಡಿಯುವ ನೀರಿಗೆ ಯಾವುದೇ ಮೂಲ ಇರುವುದಿಲ್ಲ.  

ಈ ಕುರಿತು ಗ್ರಾಮ ಪಂಚಾಯತ, ತಹಸಿಲ್ದಾರ್, ತಾಲೂಕ ಪಂಚಾಯತ್ ಇಒ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರು ಯಾವುದೇ ರೀತಿಯ ಶಾಶ್ವತ ಪರಿಹಾರ ಇಲ್ಲಿಯವರೆಗೆ ಮಾಡಿಲ್ಲ. ಕನಿಷ್ಠ ಗ್ರಾಮಸ್ಥರಿಗೆ ಟ್ಯಾಂಕರ್ ಗಳ ಮೂಲಕ ಆದರೂ ಕುಡಿಯುವ ನೀರು ಪೂರೈಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇದರ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ಕೊಡಬೇಕು ಮತ್ತು ಇದು ಆದಷ್ಟು ಬೇಗ ಕಾರ್ಯರೂಪದಲ್ಲಿ ಬರಬೇಕು ಇಲ್ಲದೆ ಹೋದಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಲಾಗಿದೆ.

ಈ ಸಮಯದಲ್ಲಿ ಹರನಾಳ ಗ್ರಾಮಸ್ಥರಾದ ನಿಂಗಪ್ಪ ಬಿರಾದಾರ, ಸಿದ್ದು ತುಂಬಗಿ, ದೇವಪ್ಪ ಬಿರಾದಾರ, ಪರಸಪ್ಪ ಚಲವಾದಿ, ದೇವಪ್ಪ ಬೊಮ್ಮನಹಳ್ಳಿ ಹನುಮಂತ್ರಾಯ ಗುಡುಗುಂಟಿ, ಮಾಳಪ್ಪ ಚಳ್ಳಗಿ, ಬೀರ​‍್ಪ ಬೆನಕನಹಳ್ಳಿ, ದೇವಪ್ಪ ಅಂಬಳನೂರ, ಸಯ್ಯದ ನದಾಫ, ರೇವಣಸಿದ್ದಪ್ಪ ಗಡ್ಡಿ, ಚಂದಪ್ಪ ಚಳ್ಳಗಿ, ಪರಸಪ್ಪ ನಾಗೂರ, ಮೌನೇಶ್‌. ಪೂಜಾರಿ, ಜಗದೀಶ ಬಿರಾದಾರ, ಮಾದಪ್ಪ ಶಿವಪ್ಪ ಬಿರಾದಾರ್ ಗಂಗಾಧರ ಬಿರಾದಾರ, ಗ್ಯಾನಪ್ಪ ಬಿರಾದಾರ, ಪರಶುರಾಮ ಎಡಹಳ್ಳಿ ಇದ್ದರು.