ಅಮೃತಶಿಲೆಯ ಅಂಬಾಪರಮೇಶ್ವರಿ ದೇವಸ್ಥಾನ ಲೋಕಾರ್ಪಣೆ

ಲೋಕದರ್ಶನ ವರದಿ

ಬೈಲಹೊಂಗಲ 29: ಸುಕ್ಷೇತ್ರ ಇಂಚಲದಲ್ಲಿ ಅಮೃತಶಿಲೆಯಲ್ಲಿ ನಿಮರ್ಿಸಿದ ಅಂಬಾಪರಮೇಶ್ವರಿ ದೇವಸ್ಥಾನ ಲೋಕಾರ್ಪಣೆಗೊಂಡಿದ್ದು ಭಕ್ತರು ನವದುಗರ್ಿಯ ಕೃಪಗೆ ಪಾತ್ರರಾಗಿ ಜೀವನ ಪಾವನಗೊಳಿಸಬೇಕೆಂದು ಆದಿಚುಂಚನಗಿರಿ  ಮಹಾಸಂಸ್ಥಾನಮಠದ ಡಾ.ನಿರ್ಮಲಾನಂದನಾಥ ಸ್ವಾಮಿಜಿ ಹೇಳಿದರು.

      ಅವರು ಬುಧವಾರ ಸುಕ್ಷೇತ್ರ ಇಂಚಲದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮಿಗಳ 80 ನೇ ವರ್ಷದ ಜಯಂತ್ಯೋತ್ಸವ ಹಾಗೂ 50 ನೇ ವರ್ಷದ ಪೀಠಾರೋಹಣ ಹಾಗೂ ಅಖಿಲ ಭಾರತ ವೇದಾಂತ ಪರಿಷತ್ತಿನ ಸುವರ್ಣಮಹೋತ್ಸವ ಅಂಗವಾಗಿ ನೂತನವಾಗಿ ಅಮೃತಶಿಲೆಯಲ್ಲಿ ನಿಮರ್ಿಸಿದ ಶ್ರೀ ಅಂಬಾಪರಮೇಶ್ವರಿ ನವದುರ್ಗಾ  ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಡಾ.ಶಿವಾನಂದ ಭಾರತಿ ಸ್ವಾಮಿಜಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ವೈದ್ಯಕೀಯ, ಅಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಜೀವನ ಉದ್ದಕ್ಕೂ ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವ ಕಾರ್ಯ ಅವಿಸ್ಮರಣೀಯವಾಗಿದೆ. ಕಳೆದ 50 ವರ್ಷಗಳಿಂದ ಸುಕ್ಷೇತ್ರ ಇಂಚಲದಲ್ಲಿ ವೇದಾಂತ ಪರಿಷತ್ ಹಮ್ಮಿಕೊಳ್ಳುವ ಮೂಲಕ ದೇಶದ ವಿವಿಧ ಮೂಲೆಗಳಿಂದ ಸಾಧು, ಶರಣರು, ಸೂಫಿ ಸಂತರನ್ನು ಆಹ್ವಾನಿಸಿ ಭಕ್ತರಿಗೆ ಅಮೃತವಾಣಿಯನ್ನು ಉಣಬಡಿಸಿ ಅಧ್ಯಾತ್ಮಕದತ್ತ ಕೊಂಡೊಯ್ಯುತ್ತಿರುವ ಕಾರ್ಯ ಅಜರಾಮರವಾಗಿದೆ ಎಂದರು.

       ಪುಟ್ಟ ಇಂಚಲ ಗ್ರಾಮವನ್ನು ಜಾಗತೀಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದರು. ಭಗವಂತನು ಅವರಿಗೆ ನೂರಾರು ವರ್ಷ ಆಯುರಾರೋಗ್ಯ ದಯಪಾಲಿಸಲೆಂದು ಹಾರೈಸಿದರು.

       ಸುಕ್ಷೇತ್ರ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮಿಜಿ  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

        ನೂತನ ಮಂದಿರವನ್ನು ಪ್ರಾತ:ಕಾಲ ಶಾಂತಿಸೂಕ್ತ ಪಠಣ, ಯಾಗಶಾಲಾ ಪ್ರವೇಶ, ಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ಮಾತೃಕಾ, ನಾಂದಿಪೂಜಾ, ಕಂಕಣಧಾರಣೆ, ಆಚಾರ್ಯ ಋತ್ವಿಗ್ವರುಣ, ಧಾನ್ಯಾದಿವಾಸ, ಜಲಾದಿವಾಸ, ಪುಷ್ಪಾದಿವಾಸ, ಶಯ್ಯಾದಿವಾಸ, ಕಲಶಸ್ಥಾಪನೆ, ವಾಸ್ತುಪೂಜಾ, ಪ್ರತಿಷ್ಠಾಂಗ ಹೋಂಗಳು, ಗಣಪತಿ, ನವಗ್ರಹ, ವಾಸ್ತು, ಮೃತ್ಯುಂಜಯ, ನವದುಗರ್ಾಹೋಮಗಳೊಂದಿಗೆ ಪೂಜೆ ಸಲ್ಲಿಸಲಾಯಿತು.  

    ಅಂಬಾಪರಮೇಶ್ವರಿ ನವದುಗರ್ಾ ದೇವಸ್ಥಾನದಲ್ಲಿ  ಕಾಲರಾತ್ರಿದೇವಿ ದೇವಿ, ಕಾತ್ಯಾಯಿನಿದೇವಿ, ಮಹಾಗೌರಿದೇವಿ, ಸಿದ್ದಿರಾತ್ರಿದೇವಿ, ಅಂಬಾಪರಮೇಶ್ವರಿ ದೇವಿ, ಚಂದ್ರಘಂಟಾದೇವಿ, ಚಮ್ಮರಿಣಿ ದೇವಿ, ಶ್ರೀಶೈಲಪುತ್ರಿ ದೇವಿ, ಸಿದ್ದಾರೂಡರು, ಗುರುನಾಥರೂಡರು, ಶಿವಯೋಗೀಶ್ವರು, ರೇವಯ್ಯ ಶಿವಯೋಗಿಗಳು, ಸಿದ್ದರಾಮ ಶಿವಯೋಗಿಗಳು ಮೂತರ್ಿಗಳು ಪ್ರತಿಷ್ಠಾಪಣೆಗೊಳ್ಳಲಿವೆ.

      ಹಂಪಿ ಹೇಮಕೂಟದ ಶಿವರಾಮ ಅವದೂತ ಆಶ್ರಮದ ವಿದ್ಯಾನಂದ ಭಾರತಿ ಸ್ವಾಮಿಜಿ, ಮುಂಬೈ, ಹರಿದ್ವಾರದ ಸಾಧನ ಸದನದ ಮಹಾಮಂಡಲೇಶ್ವರ ವಿಶ್ವಾತ್ಮಾನಂದ ಪುರೀಜಿ ಮಹಾರಾಜ, ಸನ್ಯಾಸ ಆಶ್ರಮದ ಮಹಾಮಂಡಲೇಶ್ವರ ವಿಶ್ವೇಶ್ವರಾನಂದ ಗಿರೀಜಿ ಮಹಾರಾಜ, ಉತ್ತರಕಾಶಿಯ ಸನ್ಯಾಸ ಆಶ್ರಮದ ಮಹಾಂಡಲೇಶ್ವರ ಸುಖದೇವಾನಂದ ಗಿರೀಜಿ, ಕಾಶಿ ರಾಜರಾಜೇಶ್ವರಿಮಠದ ಆಚಾರ್ಯ ದಿವ್ಯಚೈತನ್ಯಜೀ ಮಹಾರಾಜ,  ಬೀದರ ಸಿದ್ದಾರೂಡ ಚಿದಂಬರ ಆಶ್ರಮದ ಶಿವಕುಮಾರೇಶ್ವರ ಸ್ವಾಮಿಜಿ, ಹುಬ್ಬಳ್ಳಿಯ ಸಿದ್ದಶಿವಯೋಗಿಗಳು, ಪಾಲಕೊಲ್ಲು ಷಣ್ಮುಖಾನಂದ ಆಶ್ರಮದ ಜ್ಯೋತಿರ್ಮಯಾನಂದ ಮಾತಾಜಿ, ಏಪರ್ೇಡು ವ್ಯಾಸಾಶ್ರಮ ಪೀಠದ ಪರಿಪೂಣರ್ಾನಂದ ಸ್ವಾಮಿಜಿ, ಹುಬ್ಬಳ್ಳಿ-ಬಿಜಾಪುರದ ಅಭಿನವ ಶಿವಪುತ್ರ ಸ್ವಾಮಿಜಿ, ವಿಜಯನಗರ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಸೌಮ್ಯಾನಂದ ಸ್ವಾಮಿ, ಸಂಸ್ಥೆಯ ಚೇರಮನ್ ಡಿ.ಬಿ.ಮಲ್ಲೂರ, ಮಾಜಿ ಚೇರಮನ್ ಎಸ್.ಎಂ.ರಾಹುತನವರ, ಗೌರವ ಕಾರ್ಯದಶರ್ಿ ಎಸ್.ಎನ್.ಕೊಳ್ಳಿ, ಜೈಪುರ ಮೂತರ್ಿಕಾರ ನಿಖಿಲ ಶಮರ್ಾ, ವಾಸ್ತುಶಿಲ್ಪಿ ಮೆಹರಾನ ಮಾರ್ಬಲ ಮಕ್ರಾನಾ, ಪ್ರೊಪೈಟರ್ ಇಷರ್ಾದ, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಎಲ್ಲ ನೌಕರರು, ಸಿಬ್ಬಂದಿ   ಹಾಗೂ ವಿವಿಧ ಮಠಾಧೀಶರು, ನಾಡಿನ ಸದ್ಭಕ್ತರು ಪಾಲ್ಗೊಂಡಿದ್ದರು.