ಕಾರವಾರದಲ್ಲಿ ಡಿಸೆಂಬರ್ 8 ರಿಂದ ಕರಾವಳಿ ಉತ್ಸವ ಡಿ.9 ರಂದು ಕಡಲತೀರದಲ್ಲಿ ಮ್ಯಾರಥಾನ್ ಓಟ

ಕಾರವಾರ 02: ಬರುವ ಡಿಸೆಂಬರ್ 8, 9 ಹಾಗೂ 10 ರಂದು ಕರಾವಳಿ ಉತ್ಸವ -2018 ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಪ್ರಕಟಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ಉತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಉತ್ಸವದ ರೂಪರೇಶೆಯ ಬಗ್ಗೆ ಅಧಿಕಾರಿಗಳು ಚಚರ್ೆ ನಡೆಸಲಿದ್ದಾರೆ. ವಿವಿಧ ಸಮಿತಿ ಸಭೆಗಳನ್ನು ನಡೆಸಿ ಉತ್ಸವವನ್ನು ಅಚ್ಚುಕಟ್ಟಾಗಿ ರೂಪಿಸಲು ಸಲಹೆ ಸೂಚನೆ ನೀಡಿದರು. 

ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು. ಅಲ್ಲದೇ ಡಿ.9 ರಂದು ಹಾಫ್ ಮ್ಯಾರಥಾನ್ ಓಟದ ಮೂರನೇ ಸರಣಿ ನಡೆಯಲಿದೆ. ಜಿಲ್ಲಾಡಳಿತ ಹಾಗೂ ಅದಿತ್ಯ ಬಿಲರ್ಾ ಗ್ರಾಸಿಂ ಕೆಮಿಕಲ್ಸ ಇಂಡಸ್ಟ್ರಿ ಅವರು ಮ್ಯಾರಥಾನ್ ಓಟವನ್ನು ಕಡಲತೀರದಲ್ಲಿ ನಡೆಸಲಿವೆ. ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಕರಾವಳಿ ಉತ್ಸವ ನೋಡಲು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೇ ಮ್ಯಾರಥಾನ್ ಓಟದಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ಉತ್ಸವವನ್ನು ಎಲ್ಲಾ ದೃಷ್ಟಿಕೋನಗಳನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಲಾಗುವುದು ಎಂದರು. ಶಾಸಕಿ ರೂಪಾಲಿ ನಾಯ್ಕ, ಜಿ.ಪಂ.ಅಧ್ಯಕ್ಷ ಜಯಶ್ರೀ ಮೊಗೇರಾ, ಸಿಇಓ ಮೊಹಮ್ಮದ್ ರೋಶನ್, ಎಸ್ಪಿ ವಿನಾಯಕ ಪಾಟೀಲ ಉಪಸ್ಥಿತರಿದ್ದರು.

******