ಪಾಣಿಪತ್ ನಲ್ಲಿ ಮರಾಠಿ ಸವಾಲಿನ ಪಾತ್ರ: ಕೃತಿ


ಮುಂಬೈ, ಏ 30 ಪಾಣಿಪತ್ ಚಿತ್ರದಲ್ಲಿನ ಮರಾಠಿ ಪಾತ್ರ ನನಗೆ ತುಂಬ ಸವಾಲಿನದ್ದಾಗಿತ್ತು ಎಂದು ಬಾಲಿವುಡ್ ಅಭಿನೇತ್ರಿ ಕೃತಿ ಸೇನನ್ ಅಭಿಪ್ರಾಯಪಟ್ಟಿದ್ದಾರೆ. ಕೃತಿ ಸೇನನ್, ಸದ್ಯ ಆಶುತೋಷ್ ಗೋವಾರಿಕರ್ ಅವರ ನಿದರ್ೆಶನದ "ಪಾಣಿಪತ್" ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದು, ಮರಾಠಿ ಪಾತ್ರ ನನ್ನ ಸಲುವಾಗಿ ಹೊಸ ಜಗತ್ತೇ ಹೌದು. ಉತ್ತರ ಭಾರತೀಯಳಾಗಿದ್ದರಿಂದ ಮರಾಠಿ ಪಾತ್ರ ಅಭಿನಯಿಸುವುದು ಒಂದು ಸವಾಲಾಗಿತ್ತು. ಆದರೆ, ಆಶು ಸರ್ (ಆಶುತೋಷ್ ಗೋವಾರಿಕರ್) ಇದನ್ನು ಸರಳವಾಗಿಸಿದರು ಎಂದು ಕೃತಜ್ಞತೆ ಸೂಚಿಸಿದ್ದಾರೆ. 

ಆಶುತೋಷ್ ಅವರು ಪಾರ್ವತಿ ಪಾತ್ರಕ್ಕೆ ಒಳ್ಳೆಯ ರೂಪು ನೀಡಿದ್ದಾರೆ. ಜೊತೆಗೆ ಪಾತ್ರವನ್ನು ಸಾಕಷ್ಟು ಪ್ರಬಲ ಹಾಗೂ ಸ್ವತಂತ್ರವಾಗಿಸಿದ್ದಾರೆ ಎಂದು ಕೃತಿ ಹೇಳಿದ್ದಾರೆ. 

ಪಾಣಿಪತ್ ಚಿತ್ರದಲ್ಲಿ ಕೃತಿ ಸೇನನ್ ಜೊತೆಗೆ ಅಜರ್ುನ್ ಕಪೂರ್ ಹಾಗೂ ಸಂಜತ್ ದತ್ತ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಣಿಪತ್ ಯುದ್ಧದ ಸನ್ನಿವೇಶಗಳನ್ನು ಆಧರಿಸಿ ಈ ಚಿತ್ರ ನಿಮರ್ಿಸಲಾಗುತ್ತಿದೆ.  ಕೃತಿ, ಮರಾಠಾ ಸೇನಾ ಮುಖ್ಯಸ್ಥ ಸದಾಶಿವ್ ರಾವ್ ಅವರ ಎರಡನೇ ಪತ್ನಿ ಪಾರ್ವತಿ ಬಾಯಿ ಪಾತ್ರ ಅಭಿನಯಿಸುತ್ತಿದ್ದಾರೆ.  

ಇದಕ್ಕೂ ಮೊದಲು "ಲುಕಾ ಛುಪಿ" ಚಿತ್ರದಲ್ಲಿ ಕೃತಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರ ಜೊತೆ ಕಾತರ್ಿಕ್ ಆರ್ಯನ್ ಅಭಿನಯಿಸಿದ್ದರು. ಈ ಜೋಡಿಯನ್ನು ಪ್ರೇಕ್ಷಕರು ಹೆಚ್ಚಾಗಿ ಇಷ್ಟಪಟ್ಟು ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುವಲ್ಲಿ ಚಿತ್ರ ಯಶಸ್ವಿಯಾಗಿತ್ತು.