15 ದಿನಕ್ಕೆ ಮುಂದುವರೆದ ಮೂಲಭೂತ ಸೌಕರ್ಯಕ್ಕಾಗಿ ನಡೆದಿರುವ ಧರಣಿ ಸತ್ಯಾಗ್ರಹ
ಲೋಕದರ್ಶನ ವರದಿ
ಮುಧೋಳ 10: ನಗರದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಮುಧೋಳ ಹಿತರಕ್ಷಣಾ ಸಮೀತಿಯಿಂದ ನಡೆದಿರುವ ಅನಿಧರ್ಿಷ್ಟ ಧರಣಿ ಸತ್ಯಾಗ್ರಹ 15 ದಿನಕ್ಕೆ ಮುಂದುವರೆದಿದೆ. ಧರಣಿ ಸತ್ಯಾಗ್ರಹಕ್ಕೆ ಮುಧೋಳ ಮರಾಠಾ ಸಮಾಜ ಹಾಗೂ ಜೀಜಾಮಾತಾ ಮಹಿಳಾ ಸಂಘಟನೆ, ನಾಗರಿಕರ ಹಿತರಕ್ಷಣಾ ಹಾಗೂ ಅಭಿವೃದ್ಧಿ ವೇದಿಕೆ ಬೆಂಬಲ ವ್ಯಕ್ತಪಡಿಸಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮೇಘಾ ಶಿಂಧೆ ಮಾತನಾಡಿ, ನಗರ ಶರವೇಗದಲ್ಲಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕ ಹಾಗೆ ಮೂಲಭೂತ ಸೌಕರ್ಯ ದೊರೆಯದಾಗಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಶಾಲೆಗೆ ಹೋದ ಮಕ್ಕಳು ಮನೆಗೆ ಹಿಂತಿರುಗಿ ಬರುವವರೆಗೆ ಜೀವ ಕೈಯಲ್ಲಿ ಹಿಡಿದುಕೊಂಡು ತಾಯಂದಿರರು ಕಾಯುವ ಪರಿಸ್ಥಿತಿ ಒದಗಿರುವುದು ದುರ ದುಷ್ಟಕರ. ಆದ್ದರಿಂದ ಸಂಚಾರ ವ್ಯವಸ್ಥೆ ಸುರಳಿತವಾಗುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಬೇಕು. ಹಾಗೂ ನಗರಕ್ಕೆ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಇದರಿಂದ ಕುಡಿಯುವ ನೀರಿನ ಬವಣೆ ಹೇಳತೀರದಾಗಿದೆ. ಇದನ್ನೂ ಕೂಡಾ ಸರಿಪಡಿಸಬೇಕೆಂದು ಆಗ್ರಹಿಸಿದರು.
ಮರಾಠಾ ಸಮಾಜದ ಪ್ರಮುಖರಾದ ಸಾಹಿತಿ ಡಾ. ಸಿದ್ದು ದಿವಾಣ ಮಾತನಾಡಿ, 1975ರಲ್ಲಿ ನಗರದ ಜನ ಸುಖದಿಂದ್ದರು. ಆಗ ಜನಸಂಖ್ಯೆ ಕಡಿಮೆ ಇದ್ದುದರಿಂದ ನಗರದ ಜನ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರು. ಆಗ ದಿನಕ್ಕೆ ಎರಡು ಬಾರಿ ನಲ್ಲಿ ನೀರು ಸರಬರಾಜಾಗುತ್ತಿತ್ತು. ಅಪಘಾತ ಸುದ್ದಿ ಅತೀ ಅಪರೂಪದ್ದಾಗಿತ್ತು. ಆದರೆ 1995ರ ನಂತರ ನಗರ ಬೆಳೆದಂತೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಕುಡಿಯುವ ನೀರು ವಾರಕ್ಕೆ ಒಂದು ಬಾರಿ ಬರಲಾರಂಭಿಸಿತು.
ನಗರದ ಜನಸಂಖ್ಯೆ ಏರಲಾರಂಭಿಸಿತು. 2015ಕ್ಕೆ ಮತ್ತೆ ಹೆಚ್ಚಿಗೆ ನಗರ ಬೆಳೆದಂತೆ, ಜನಸಂಖ್ಯೆ ಬೆಳೆಯಿತು. ತಾಲೂಕಿನಲ್ಲಿ ಸಕ್ಕರೆ ಕಾಖರ್ಾನೆ, ಸಿಮೆಂಟ್ ಕಾಖರ್ಾನೆ ಹೀಗೆ ಹಲವಾರು ಕಾಖರ್ಾನೆಗಳು ಬಂದವು. ಆದರೆ ಅದಕ್ಕೆ ತಕ್ಕಂತೆ ನಗರದಲ್ಲಿ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಒಳಚರಂಡಿ ಹೀಗೆ ಸರಿಯಾಗಿ ದೊರಕದೆ, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇವುಗಳನ್ನು ಈಡೇರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದೆ ಬರಬೇಕೆಂದು ಹೇಳಿದರು.
ಐತಿಹಾಸಿಕ ನಗರಿ ಮುಧೋಳದಲ್ಲಿ ಒಟ್ಟು ಏಳು ಕೆರೆಗಳಿದ್ದು, ಆದರೆ ನಗರದ ಕೆಲವೇ ಕೆಲವು ಜನತೆ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಈಗ ಕೇವಲ ಮೂರು ಕೆರೆಗಳು ಮಾತ್ರ ಉಳಿದಿದ್ದು, ಮೂಲಭೂತ ಸೌಲಭ್ಯಗಳನ್ನು ಈಡೇರಿಸಿದ ನಂತರ ಈ ಕೆರೆಗಳ ಒತ್ತುವರಿ ತೆರವುಗೋಸ್ಕರ ಹೋರಾಟ ನಡೆಯುವ ಸೂಚನೆ ಇದೆ.
ಮರಾಠಾ ಸಮಾಜದ ಮುಖಂಡರಾದ ದಶರಥ ಯಾದವ, ಡಾ.ಸುಬೇದಾ ಮಾನೆ ಸೇರಿದಂತೆ ಅನೇಕರು ಮಾತನಾಡಿದರು. ಡಾ. ಸಂಜಯ ಘಾರಗೆ ,ಡಾ. ಮೋಹನ ಬಿರಾದಾರ, ಅನಂತರಾವ ಘೋರ್ಪಡೆ, ದತ್ತಾ ಸೂರ್ಯವಂಶಿ, ಅಪ್ಪಾಸಾಹೇಬ ಘೋರ್ಪಡೆ, ಅಪ್ಪಾಸಾಹೇಬ ಪವಾರ, ಬಸವಂತ ಕಾಟೆ, ರಾಜೇಶ ಚಂದನಶಿವ, ಪ್ರತಾಪ ಚಂದನಶಿವ, ಭೀಮ ಕುಮಕಾಲೆ,ಡಾ.ಘೋರ್ಪಡೆ, ಬಾಲಚಂದ್ರ ಘಾಟಗೆ,ಅನೀಲ ಚವ್ಹಾಣ, ಪ್ರಶಾಂತ ಕಾಳೆ,ಸದಾಶಿವ ಕದಮ್, ಶಿವಾಜಿ ಮಾನೆ, ಗಣಪತರಾವ ಮಾನೆ, ಬಜೆ.ಬಿ.ಕೋಪಕರ, ಉಜ್ವಲಾ ಘಾಟಗೆ,ಸವಿತಾ ಪೂಜಾರಿ, ವಿಮಲಾ ಯಾದವ, ಕಲಾವತಿ ಜಾಧವ, ಮಹಾದೇವ ಶಿಂಧೆ, ಸುನೀಲ ಘೋರ್ಪಡೆ, ಕೇದಾರ ಜಾಧವ,ಉತ್ತಮ ಯಾದವ, ಅಪ್ಪಾಸಾಹೇಬ ಶಿಂಧೆ,ದೀಪಕ ಯಾದವ, ಮಾರುತಿ ಜಾಧವ, ರಾಜು ನಲವಡೆ, ಸಂತೋಷ ಪಾಲೋಜಿ,ತ ುಷಾರ ಭೋಪಳೆ,ಶಂಕರ ನಲವಡೆ, ಡಾ. ಸತೀಶ ಮಲಘಾಣ, ಎಸ್.ಆಯ್.ಕಾಜಗಾರ, ರಡ್ಯಾರಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
15ನೇ ದಿನಕ್ಕೆ ಕಾಲಿಟ್ಟ ತೆರವು ಕಾಯರ್ಾಚರಣೆ
ಕಳೆದ ಹದಿನೈದು ದಿನದಿಂದ ನಗರದ ವಿಜಯಪೂರ-ಬೆಳಗಾವಿ ರಾಜ್ಯ ಹೆದ್ದಾರಿ ಹಾಗೂ ಬಂಡಿವಡ್ಡರ ಪೆಟ್ರೋಲ್ ಬಂಕ್ದಿಂದ ಗಡದನ್ನವರ ಸರ್ಕಲ್ದವರೆಗೆ ನಡೆಯುತ್ತಿರುವ ತೆರವು ಕಾಯರ್ಾಚರಣೆ ಗುರುವಾರ ನಗರದ ಬಾಪೂಜಿ ಕಾಂಪ್ಲೆಕ್ಸ್ನ ಉಳಿದ ಭಾಗ ಹಾಗೂ ಕುಂಬಾರ ಗಲ್ಲಿಯಲ್ಲಿಯ ಹಲವು ಮನೆಗಳ ಮುಂಭಾಗದ ಉಳಿದ ಜಾಗವನ್ನು ತೆರವುಗೊಳಿಸಲು ಉಪವಿಭಾಗಾದಿಕಾರಿ ಮಹಮ್ಮದ ಇಕ್ರಾಂ ಸೂಚನೆಯಂತೆ ನಗರಸಭೆ ಪೌರಾಯುಕ್ತ ರಮೇಶ ಜಾಧವ ಹಾಗೂ ಸಿಬ್ಬಂದಿಗಳ ಸಮಕ್ಷಮ ಜೆಸಿಬಿ ಮೂಲಕ ತೆರವು ಕಾಯಾಚರಣೆ ಬೆಳಿಗ್ಗೆಯಿಂದ ನಡೆಸಲಾಯಿತು