ಸಾಹಿತ್ಯಕ್ಕೆ ಹಲವು ಮುಖಗಳು: ಹಿರಿಯ ಸಾಹಿತಿ ಮಾಲತಿ

ಸಾಹಿತ್ಯಕ್ಕೆ ಹಲವು ಮುಖಗಳು: ಹಿರಿಯ ಸಾಹಿತಿ ಮಾಲತಿ

ಲೋಕದರ್ಶನ ವರದಿ

ವಿಜಯಪುರ 30: ಯುವಾವಸ್ಥೆಯಲ್ಲಿ ಹಿರಿಯ ಸಾಹಿತಿಗಳೊಂದಿಗೆ ಮುಖಾ-ಮುಖಿಯಾದಾಗ ಸಾಹಿತ್ಯ ಕಿಡಿ ಹುಟ್ಟಿಕೊಳ್ಳಲು ಸಾಧ್ಯ. ಆಗ ಮಾತ್ರ ಕನ್ನಡ ಸಾಹಿತ್ಯ ಬೆಳೆಯುವುದು ಎಂದು ಹಿರಿಯ ಸಾಹಿತಿ ಎ.ಪಿ.ಮಾಲತಿ ಅಭಿಪ್ರಾಯಪಟ್ಟರು. 

ಮಹಿಳಾ ವಿವಿಯ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮತ್ತು ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಎರಡು ದಿನದ ಸಾಹಿತ್ಯೋತ್ಸವ ಹಾಗೂ ವಿಚಾರ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯಕ್ಕೆ ಹಲವು ಮುಖಗಳಿವೆ. ಪುಸ್ತಕ ಓದಿದಾಗ ಭಯ, ಖಿನ್ನತೆ ದೂರವಾಗುತ್ತದೆ. ವ್ಯಕ್ತಿತ್ವವನ್ನು ಬರವಣಿಗೆಯಿಂದ ಅನಾವರಣಗೊಳಿಸಿ, ಸಾಹಿತ್ಯವನ್ನು ಪ್ರೀತಿಸಿ, ಪ್ರೋತ್ಸಾಹಿಸಬೇಕು ಎಂದು ಹೇಳಿದ ಅವರು, ಬರವಣಿಗೆ ಸುಲಭವಲ್ಲ ಅದೊಂದು ಸಾಧನೆ ಎಂದು ವಿದ್ಯಾಥರ್ಿನಿಯರಿಗೆ ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಮಾತನಾಡಿ, ಕಷ್ಟದ ಹಾದಿಯಲ್ಲಿ ಸಾಧನೆ ಹೊರಬರುತ್ತದೆ, ಸುಖದ ಹಾದಿಗೆ ಒಡ್ಡಿದಾಗ ಪುಕ್ಕಲುತನ ಹೊರಬರುತ್ತದೆ. ಪ್ರಯತ್ನಪಟ್ಟರೆ ಕ್ರೀಯಾಶೀಲದ ಕತೃತ್ವಶಕ್ತಿ ಹೊರಬರುತ್ತದೆ. ಆಸಕ್ತಿ ಕ್ಷೇತ್ರದಲ್ಲಿ ಸಾಧಿಸುವ ಹಠಮಾರಿತನವಿರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾದ ಅಡ್ಡಿಯನ್ನು ತಮ್ಮ ಸಾಹಿತ್ಯದ ಮೂಲಕ ಬರೆಯಬಹುದು. ಪ್ರತಿಯೊಬ್ಬರೂ ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯಗಳು ಪಠ್ಯಗಳಾಗಿ ರೂಪಗೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ವೇದಿಕೆ ಮೇಲಿದ್ದರು. ಆಥರ್ಿಕ ಅಧಿಕಾರಿ ಪ್ರೊ.ಪಿ.ಜಿ.ತಡಸದ, ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಬಿ.ಮಾಡಗಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ವಿಭಾಗದ ವಿದ್ಯಾಥರ್ಿನಿಯರು ಮಹಿಳಾಗೀತೆ ಹಾಡಿದರು. ರೂಪಶ್ರೀ ನಾಗರಾಜ ಭಾವಗೀತೆ ಹಾಡಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ನಾಮದೇವಗೌಡ ಸ್ವಾಗತಿಸಿದರು. ವಿದ್ಯಾಥರ್ಿನಿ ಅಶ್ವಿನಿ ಪರಿಚಯಿಸಿದರು. ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾರಾಯಣ ಪವಾರ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಬಸವರಾಜ ಲಕ್ಕಣ್ಣವರ ವಂದಿಸಿದರು.