ರಂಭಾಪುರಿ ಶ್ರೀಗಳಿಂದ ಮನುಕುಲ ಸದ್ಭಾವನಾ ಪ್ರಶಸ್ತಿ ಪ್ರದಾನ

ಲೋಕದರ್ಶನವರದಿ

ರಾಣೇಬೆನ್ನೂರು: ಸ್ಥಳೀಯ ಹಿರೇಮಠದ ಶನೈಶ್ಚರ ಸ್ವಾಮಿಯ ಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ  7ನೇ ವರ್ಷದ ತಿಲ ಲಕ್ಷದಿಪೋತ್ಸವ, 750 ದೈಹಿಕ ದಿವ್ಯಾಂಗರಿಗೆ ಸತ್ಕಾರ, ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಬೆಳಕಿನ ಧರ್ಮ ಸಮಾರಂಭವು ನ.23 ರಂದು ಸಂಜೆ 7.7 ಗಂಟೆಗೆ ನೆರವೇರಲಿದೆ. 

ಬಾಳೇಹೊನ್ನೂರಿನ ರಂಭಾಪುರಿ ಪೀಠದ ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ಭಾಗವಹಿಸುವರು. ಬಂಕಾಪುರದ ರೇವಣಸಿದ್ದೇಶ್ವರ ಶಿವಾಚಾರ್ಯರು ನೇತೃತ್ವ ವಹಿಸುವರು. ಕೂಡಲದ ಗುರು ಮಹೇಶ್ವರ ಮಹಾಸ್ವಾಮಿಗಳು ಸಮ್ಮುಖದಲ್ಲಿ ನಡೆಯುವ ದೀಪೋತ್ಸವದ ಉದ್ಘಾಟನೆಯನ್ನು ರಾಜ್ಯ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದಶರ್ಿ ಬಿ.ವೈ.ವಿಜಯೇಂದ್ರ ನೆರವೇರಿಸುವರು. 

ಶ್ರೀಮಠದ ಶಿವಯೋಗಿ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡುವರು. ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸುಭಾಸ್ ಅಡಿ ಕಾರ್ಯಕ್ರಮ ಉದ್ಘಾಟಿಸುವರು. ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯರರು, ಹುಕ್ಕೇರಿಯ ಚಂದ್ರಶೇಖರ ಸ್ವಾಮಿಗಳು ಮಣಕೂರು, ಅಕ್ಕಿಹಾಲೂರು, ಸಂಗೋಳ್ಳಿ, ಕುರವತ್ತಿ, ಹೇರೂರ, ಹಾವಿನಾಳ, ನಿಚ್ಚವನಹಳ್ಳಿ ಸ್ವಾಮಿಗಳು ಸೇರಿದಂತೆ ಹರ-ಗುರು-ಚರ ಮೂತರ್ಿಗಳು ಆಗಮಿಸುವರು. 

      ರಾಜ್ಯದ ಮುಖ್ಯಮಂತ್ರಿಗಳ ಆಪ್ತ ಕಾರ್ಯದಶರ್ಿ ವಿಶ್ವನಾಥ ಹಿರೇಮಠರಿಗೆ ರಾಷ್ಟ್ರೀಯ ಮನುಕುಲ ಸದ್ಭಾವನ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಹಾಲಿ-ಮಾಜಿ ಶಾಸಕರು, ಸಚಿವರು, ಚುನಾಯಿತ ಪ್ರತಿನಿಧಿಗಳು, ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ತಿಲ ಲಕ್ಷದಿಪೋತ್ಸವ ಸ್ವಾಗತ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ