ಜುಲೈ ೨ರಿಂದ ಭಕ್ತರಿಗೆ ತೆರೆಯಲಿರುವ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠ

ಮಂತ್ರಾಲಯ, ಜೂನ್  ೨೯ :     ಜುಲೈ ೨ ರಿಂದ  ಮಂತ್ರಾಲಯ  ರಾಘವೇಂದ್ರ  ಸ್ವಾಮಿ   ಮಠದಲ್ಲಿ    ಭಕ್ತರಿಗೆ   ದರ್ಶನ  ಕಲ್ಪಿಸಲು   ನಿರ್ಧರಿಸಿರುವುದಾಗಿ  ಶ್ರೀ  ಮಠದ ವ್ಯವಸ್ಥಾಪಕ  ವೆಂಕಟೇಶ ಜೋಷಿ   ತಿಳಿಸಿದ್ದಾರೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ  ಮುಜರಾಯಿ ಇಲಾಖೆಯ   ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು  ಮಠದಲ್ಲಿ   ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ೧೦ ವರ್ಷದೊಳಗಿನ ಮಕ್ಕಳು,  ೬೫ ವರ್ಷಕ್ಕಿಂತ ಮೇಲ್ಪಟ್ಟ  ಹಿರಿಯರು,  ಗರ್ಭಿಣಿಯರು,   ಕಂಟೈನ್ ಮೆಂಟ್  ವಲಯಗಳಿಂದ ಬರುವ ಭಕ್ತರನ್ನು    ಹೊರತುಪಡಿಸಿ ಎಲ್ಲರಿಗೂ  ದರ್ಶನಕ್ಕೆ  ಅವಕಾಶ  ಕಲ್ಪಿಸಲಾಗುವುದು  ಎಂದು  ಹೇಳಿಕೆಯಲ್ಲಿ  ತಿಳಿಸಿದ್ದಾರೆ. 

ದೇವಾಲಯಕ್ಕೆ  ಬರುವ  ಭಕ್ತರಿಗೆ   ಮೊದಲ ಥರ್ಮಲ್   ಸ್ಕ್ರೀನಿಂಗ್  ಒಳಪಡಿಸಿ, ತಪಾಸಣೆ  ನಡೆಸಿ  ಕೋವಿಡ್  ಲಕ್ಷಣ  ಇಲ್ಲದವರನ್ನು   ಮಾತ್ರ  ದೇಗಲ ಪ್ರವೇಶಿಸಲು  ಅನುಮತಿ ನೀಡಲಾಗುವುದು ಎಂದು  ಸ್ಪಷ್ಟಪಡಿಸಿದ್ದಾರೆ. ಮಠದಲ್ಲಿ   ಅನ್ನಸಂತರ್ಪಣೆ, ಪ್ರಸಾದ ವಿತರಣೆ  ಇರುವುದಿಲ್ಲ.  ಆರ್ಜಿತ  ಸೇವೆಗಳನ್ನು ಪರೋಕ್ಷವಾಗಿ ನಡೆಸಲಾಗುವುದು  ಭಕ್ತರಿಗೆ  ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ  ಹಾಗೂ ಸಂಜೆ ೪ ರಿಂದ ೬ ರವರೆಗೆ ದರ್ಶನ ವ್ಯವಸ್ಥೆ  ಕಲ್ಪಿಸಲಾಗುವುದು.   ಮಠಕ್ಕೆ ಭೇಟಿ  ನೀಡುವ ಯಾತ್ರಾರ್ಥಿಗಳಿಗೆ  ಸೂಕ್ತ ವ್ಯವಸ್ಥೆ  ಕೈಗೊಳ್ಳಲಾಗಿದೆ ಎಂದರು.