ಬೆಳಗಾವಿ: ಮಂತ್ರ ಪುರುಷ ಬಸವಣ್ಣನವರು: ಪ್ರಭುಲಿಂಗ ಶ್ರೀ

ಲೋಕದರ್ಶನ ವರದಿ

ಬೆಳಗಾವಿ 06:  ಮನುಷ್ಯ ಜೀವನದಲ್ಲಿ, ತಾನು ಹುಟ್ಟಿದ ಸಮಯಕ್ಕಿಂತಲೂ ಸಾಧನೆ ಮಾಡಿದ ಸಮಯ ಶ್ರéೇಷ್ಠ, ಆ ಸಾಧನೆಯ ಸಂತೃಪ್ತಿ ಅವರನ್ನು ಬಹುಮುಖವಾಗಿ ಸಮಾಜ ಮನ್ನಣೆ ಕೊಟ್ಟು ಅವರ "ಸಂಸ್ಮರಣೆ" ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತದೆ. ಹಾಗೆಯೇ ವಿಶ್ವಗುರು ಬಸವಣ್ಣನವರು, ಒಂದು ಸಾಧನೆ ಅಲ್ಲ, ನೂರಾರು ಸಾಧನೆಗಳನ್ನು ಇಂದಿನ ನಾವುಗಳು ಗುತರ್ಿಸಿ, ಅವರನ್ನು "ವಿಶ್ವಗುರು"ವಾಗಿ ಸ್ವೀಕರಿಸಿದ್ದೇವೆ. ಸ್ತ್ರೀ ಸಮಾನತೆಯನ್ನು ಭೋದಿಸಿದ ಮೊದಲ ಗುರು ಬಸವಣ್ಣನವರು. ನಿರಾಕಾರ ಪರಮಾತ್ಮನನ್ನು ಪೂಜಿಸಲು ಧ್ಯಾನಿಸಲು ತ್ರಾಟಕ ಯೋಗಕ್ಕೆ ಅನುವಾಗಲು ಜಗತ್ತಿಗೆ "ಇಷ್ಟಲಿಂಗ"ವನ್ನು ದಯಪಾಲಿಸಿದ ಮಹಾನ್ ಗುರು ಬಸವಣ್ಣನವರು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ, ಯಾವುದೇ ಭೇದವನ್ನು ಮಾಡದೆ ಪ್ರಸಾದ ತತ್ವವನ್ನು ಬೋದಿಸಿದ ಪರಮ ಗುರುಗಳು ಅವರು. ಅವರು ಯಾಕೆ, ಹೇಗೆ ಗುರುವಾಗಿ ನಮಗೆ ದರ್ಶನ ನೀಡುವರು ಎನ್ನುವುದನ್ನು ಅವಿರಳ ಜ್ಞಾನಿ ಚನ್ನಬಸವಣ್ಣನವರು ಮಾಮರ್ಿಕವಾಗಿ " ಹರ ತನ್ನ ರೂಪ ತೋರಲೆಂದು ಗುರುವಾಗಿ ಬಂದ" ಮತ್ತು " ಮಾಂಸ ಪಿಂಡವೆಂದೆನಿಸದೆ ಮಂತ್ರ ಪಿಂಡವೆಂದೆನಿಸಿದ ಬಸವಣ್ಣನವರು" ಎನ್ನುವ ವಚನಗಳನ್ನು ಉದಾಹರಿಸಿ, ವಿಸ್ತಾರವಾಗಿ ಹೇಳಿದರು. ಇಂಥಹಾ ಬಸವಣ್ಣನವರು ತಾವು ಸಾಧಿಸಿ ತೋರಿಸಿದ "ಲಿಂಗಾಂಗ ಯೋಗ"ದ ಮೂಲಕ "ಸಂತೃಪ್ತಿಯ ಇಚ್ಛಾ ಮರಣ"ವನ್ನು ಹೊಂದಿದ ಮಹಾನ್ ದಿನವೇ "ಬಸವ ಪಂಚಮಿ". ಹೀಗಾಗಿ ಅವರ ಹೆಸರೇ ಮಂತ್ರವಾಯಿತು. 

        ದಿವ್ಯ ಸಾನಿಧ್ಯವನ್ನು ವಹಿಸಿ ಪ್ರಾಸ್ತಾವಿಕ ಆಶರ್ೀಚನ ನೀಡಿದವರು ಪ್ರಭುಲಿಂಗ ಸ್ವಾಮೀಜಿಗಳು, ಸಂಚಾಲಕರು, ವಿಶ್ವಗುರು ಬಸವ ಮಂಟಪ, ಬೆಳಗಾವಿ. ಇವರು ಬೆಳಗಾವಿಯ ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿ, ಜಿಲ್ಲಾ ಲಿಂಗಾಯತ ದರ್ಮ ಮಹಾಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ಬಸವಾಂಕುರ, ವಚನ ಚಿಂತನಾ ವೇದಿಕೆೆಗಳ ಸಹಯೋಗದಲ್ಲಿ ದಿ.05ರಂದು "ವಿಶ್ವಗುರು ಬಸವ ಮಂಟಪ"ದಲ್ಲಿ ಬಸವಣ್ಣನವರ 824ನೇ ಲಿಂಗೈಕ್ಯ ಸಂಸ್ಮರಣೆ "ಬಸವ ಪಂಚಮಿ" ಕಾರ್ಯಕ್ರಮದಲ್ಲಿ  ಭಾಗವಹಿಸಿ ಸಂದೇಶ ನೀಡಿದರು.

      ಮುಖ್ಯ ಅತಿಥಿಯಾಗಿ ಶರಣ ಮಾರಯ್ಯ ಗಡಗಲಿ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು, ಲಿಂಗಾಯತ ಧರ್ಮ ಮಹಾಸಭಾ, ಪಾಲ್ಗೊಂಡು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಹಿರಿಯ ಶರಣ ಗುರಪ್ಪ ಮಾಳಗಿ ವಹಿಸಿ ಬಸವಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು,

      ಪ್ರಾರಂಭದಲ್ಲಿ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಮತ್ತು "ಬಸವಾಂಕುರ" ಮಕ್ಕಳಿಂದ ಗುರುಪೂಜೆ ನೆರವೇರಿತು. ಶರಣೆ ರೂಪಾ ಪ್ರಸಾದರು ಸಾಮೂಹಿಕ ಪ್ರಾರ್ಥನೆಯನ್ನು ಮಾಡಿಸಿದರು. ಶರಣ ಕೆ. ಬಸವರಾಜ ನಿರೂಪಿಸಿ ಸ್ವಾಗತ ಕೋರಿದರು. ಶರಣೆ ಶೀಲಾ ಗುಡಸ್ ಶರಣು ಸಮರ್ಪಣೆಗೈದರು.