ಶಿಗ್ಗಾವಿ 02: ಬಡಿಗೆ ಕೆಲಸ ಮಾಡುವ ಅಂಗವಿಕಲ ಅಬ್ದುಲಗೌಸ ಸವಣೂರ ಆಕಸ್ಮಿಕ ರಸ್ತೆ ಅಪಘಾತ ಘಟನೆಯಲ್ಲಿ ಕಾಲಿಗೆ ಪೆಟ್ಟು ಬಿದ್ದಿದ್ದು ಶಿಗ್ಗಾವಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಭೇಟಿ ಮಾಡಿ ಸಮಾಧಾನ ಹೇಳಿದ ಕಾಂಗ್ರೆಸ್ ಪಕ್ಷದ ತಾಲೂಕ ವಕ್ತಾರ ಮಂಜುನಾಥ್ ಮಣ್ಣಣ್ಣವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಗೌಸ್ ಕೇಳಲಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು ತುಂಬಾ ಸಹಕರಿಸುತ್ತಿದ್ದಾರೆ ಅಲ್ಲದೇ ಆದಷ್ಟು ಬೇಗನೆ ಗುಣಮುಖರಾಗಿರಿ ಎಂದು ತಿಳಿಸಿ ಶಾಸಕ ಯಾಸಿರ್ ಅಹ್ಮದಖಾನ್ ಪಠಾಣ್ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಸುರೇಶ ಹರಿಜನ್ ಅಬ್ದುಲ್ ತಿಳುವಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.