ಇಂದಿರಾ ಕ್ಯಾಂಟೀನ ಪ್ರಾರಂಭಕ್ಕೆ ಮಣ್ಣಣ್ಣವರ ಆಗ್ರಹ
ಶಿಗ್ಗಾವಿ 05 : ಕಾಂಗ್ರೆಸ್ ಸರ್ಕಾರದ ಬಹು ನೀರೀಕ್ಷಿತ ಯೋಜನೆಯಲ್ಲಿ ಬಡವರ ಕೂಲಿ ಕಾರ್ಮಿಕರ ಕಾಮಧೇನು ಇಂದಿರಾ ಕ್ಯಾಂಟೀನ್ ಸಹ ಪ್ರಮುಖವಾಗಿದೆ ಪಟ್ಟಣದ ನೂತನ ಬಸ್ ನಿಲ್ದಾಣದಲ್ಲಿ ನಮ್ಮ ಸರ್ಕಾರ ಬಂದ ನಂತರ ಕಾರ್ಯ ಪ್ರಗತಿಯಲ್ಲಿದ್ದು ಪುರಸಭೆಯ ಮುಖ್ಯಾಧಿಕಾರಿಗಳು ಕ್ಯಾಂಟೀನ್ ಸುತ್ತಮುತ್ತಲು ಬೇಲಿ ಅಳವಡಿಸಿ ಕೈ ಬಿಟ್ಟರೆ ಸಾಲದು ಶಾಸಕರಾದ ಯಾಶೀರ್ ಅಹ್ಮದಖಾನ್ ಪಠಾನವರು ಈ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ ಉಳಿದ ಕಾಮಗಾರಿಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಏಜೆನ್ಸಿಯ ಜೊತೆ ಸಂಪರ್ಕ ಮಾಡಿ ಆದಷ್ಟು ಬೇಗನೆ ಕ್ಯಾಂಟೀನ್ ಪ್ರಾರಂಭಕ್ಕೆ ಕ್ರಮವಹಿಸಬೇಕು ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಪುರಸಭೆಯ ಮುಖ್ಯ ಅಧಿಕಾರಿಗಳು ಕುಂಟು ನೆಪಹೇಳದೆ ಎಚ್ಚೆತ್ತುಕೊಳ್ಳಬೇಕು ಜೊತೆಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ಯಾಂಟೀನ್ ಪ್ರಾರಂಭಕ್ಕೆ ಗಮನ ಹರಿಸುವಂತೆ ಕಾಂಗ್ರೆಸ್ ಪಕ್ಷದ ತಾಲೂಕ ವಕ್ತಾರ ಮಂಜುನಾಥ ಮಣ್ಣಣ್ಣವರ ಆಗ್ರಹಿಸಿದ್ದಾರೆ.