ಬೆಳಗಾವಿ 12: ನಗರದ ಸಾಮಾಜಿಕ ಕಾರ್ಯಕರ್ತ ಹಾಗೂ ಆಟೊ ಚಾಲಕ ಮಂಜುನಾಥ ಪೂಜಾರಿ ಅವರು ಬುಕ್ ಆಫ್ ರೆಕಾಡ್ರ್ಸ ಕೊಡಮಾಡುವ ನ್ಯಾಚ್ಯುರಲ್ ಅಂಬ್ಯುಲನ್ಸ್ ಮ್ಯಾನ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾಡ್ರ್ಸ ಅವರ ಸೇವೆ ಪರಿಗಣಿಸಿದ್ದು, ನೆನಪಿನ ಕಾಣಿಕೆ ಗೌರವ ಪ್ರಮಾಣ ಪತ್ರ ನೀಡಿ ಗೌರವಿದೆ. ಸಾರ್ವಜನಿಕರಿಗೆ ಉಚಿತ ಹಾಗೂ ನ್ಯಾಯಯುತ ದರದಲ್ಲಿ ಸೌಜನ್ಯ ಸೇವೆ ಸಲ್ಲಿಸಿರುವುದಕ್ಕಾಗಿ ಈ ಪ್ರಮಾಣಪತ್ರ ಹುಡುಕಿಕೊಂಡು ಬಂದಿದೆ. ಬಡವರನ್ನು ದಿನದ ಯಾವುದೇ ವೇಳೇಯಲ್ಲಿ ಉಚಿತವಾಗಿ ಆಸ್ಪತ್ರೆ ತಲುಪಿಸಿದ ಹೆಗ್ಗಳಿಕೆ ಮಂಜುನಾಥ ಪೂಜಾರಿ ಅವರ ಹೆಗಲಿಗೆ ಇದೆ.
ಇಂದು ಸುದ್ದಿ ಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಮಾಜ ಸೇವಕ ಹಾಗೂ ಸಮೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ವಿರೇಶ ಕಿವಡಸಣ್ಣವರ ಮಲ್ಟಿ ಟಾಸ್ಕ್ ಸೇವೆ ಮೂಲಕ ಸಮಾಜ ಸೇವೆ ಮಾಡುವ ಮಂಜುನಾಥ ಅವರಿಗೆ ಬಡವರಿಗಾಗಿಯೇ ಒಂದು ಅಂಬ್ಯುಲೆನ್ಸ್ ಮಾಡುವ ಆಸೆ ಹೊತ್ತಿದ್ದಾರೆ. ರಕ್ತದಾನ, ದೇಹದಾನ ಮತ್ತು ಅಂಗಾಂಗ ದಾನದ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದಾರೆ. ಅವರ ಸೇವೆ ನಗರದ ಇತರ ಎಲ್ಲರಿಗೂ ಮಾದರಿ ಆಗಬೇಕು ಎಂದರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ ನಾಗರತ್ನ ರಾಮಗೌಡರ, ನಿಂಗಪ್ಪ ಪೂಜಾರಿ, ಶಾಂತಕ್ಕ ಪೂಜಾರಿ, ರಾಜಶ್ರೀ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.