ಮುದ್ದೇಬಿಹಾಳ, 28; ತಾಲೂಕಿನ ಹುಲ್ಲೂರು ಗ್ರಾಮದ ವ್ಯಾಪ್ತಿಯ ಕೂಟ್ಟೆ ದಾಖಲೆ ಸೃಷ್ಟಿಸಿ ಎಸ್ ಎನ್ ಡಿ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಿ ಸರಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಮೋಸ ಮಾಡಿರುವ ಮಂಜುನಾಥ ಕೊಪ್ಪ ವ್ಯಕ್ತಿಯ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಮಾದಿಗ ಸಂಘದ ಮುಖಂಡ ಶೇಖಪ್ಪ ಆಲೂರ ಅವರು ಪಟ್ಟಣದ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಹೋರಾಟಗಾರ ಶೇಖಪ್ಪ ಹುಲ್ಲೂರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಹುಲ್ಲೂರು ಗ್ರಾಮ ವ್ಯಾಪ್ತಿಯ ಎಸ್ ಎನ್ ಡಿ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮಂಜುನಾಥ ಕೂಪ್ಪ ಇವರು ಹುಲ್ಲೂರು ಗ್ರಾಮದ ಸರ್ವೆ ನಂಬರ 114/2 ರಸ್ತೆ 20 ಗುಂಟೆ ಜಮೀನನ್ನು ಖರೀದಿಯನ್ನು 2022 ರಲ್ಲಿ ಮಾಡಿ. ಜಮೀನು 2020 ರಲ್ಲಿಯೇ ವಿಜಯಪುರ ಜಿಲ್ಲಾಧಿಕಾರಿಗಳ ಆದೇಶವಿರುವ ಭೂ ಪರಿವರ್ತನ ಆಗಿದೆ ಎಂದು ಶಾಲಾ ಅನುಮತಿ ಪಡೆಯಲು ಕೊಟ್ಟಿ ದಾಖಲೆ ಸೃಷ್ಟಿಸಿ ಶಿಕ್ಷಣ ಇಲಾಖೆಗೆ ಸಲ್ಲಿಸಿ ಜಮೀನು ಪಂಚಾಯತಿ 9 ನಂಬರ ಕಾಲಂ ನಲ್ಲಿ 150*150 ಪುಟ ದಾಖಲಾಗಿದೆ ಎಂದು ಪಂಚಾಯತಿಯ ಕಾರ್ಯಾಲಯದ ಹೆಸರನಲ್ಲಿ ಕೊಟ್ಟಿ ದಾಖಲೆ ಸೃಷ್ಟಿಸಿ, 10-ಫೇಬ್ರುವರಿ -2020 ರಲ್ಲಿ ಸಾಯಿನಿಕೇತನ ಶಾಲೆಗಾಗಿ 1 ಎಕರೆ ಜಮೀನನ್ನು ಸಬ್ ರಿಜಿಸ್ಟರ್ ಅವರಲ್ಲಿ ನೊಂದಣಿ ಮಾಡಿಸಿದ್ದೇನೆ ಅದರಿಂದ ಭೂ ಪರಿವರ್ತನೆ ಮಾಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿರುತ್ತಾರೆ ಹಾಗೂ ಹುಲ್ಲೂರ ಗ್ರಾಮದ ಜನಸಂಖ್ಯಾ ಪ್ರಮಾಣ ಪತ್ರ ಶಾಲಾ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ ಹಾಗೂ ಇತರ ಕೆಲವು ಪ್ರಮಾಣ ಪತ್ರಗಳನ್ನು ಪಂಚಾಯತಿಯವರಿಂದ ಪಡೆಯದೇ ಇದ್ದರೂ ಅವುಗಳ ಕೊಟ್ಟಿ ದಾಖಲೆ ಸೃಷ್ಟಿಸಿ ಬೇರೆ ಬೇರೆ ಇಲಾಖೆಗಳಿಗೆ ಕೂಟ್ಟು ಶಾಲಾ ಅನುಮತಿ ಪಡೆದಿರುತ್ತಾರೆ ಕಾರಣ ಮಂಜುನಾಥ ಕೊಪ್ಪ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಲ್ಲಿಯವರಗೆ ನಾವು ಧರಣಿ ಹಿಂಪಡೆಯುವ ಪ್ರಶ್ನೇಯೇ ಇಲ್ಲವೇಂದು ಹೇಳಿದರು.
ಮಾಹಿತಿ ತಿಳಿದ ತಾಲೂಕಾ ಕ್ಷೇತ್ರ ಶಿಕ್ಷಾಧಿಕಾರಿ ಬಿ ಎಸ್ ಸಾವಳಗಿ ಸೇರಿದಂತೆ ಅನೇಕ ಅಧಿಕಾರಿಗಳ ತಂಡ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಪಡೆದು ಬಳಿಕ ಕೂಟ್ಟೆ ದಾಖಲೆ ಸೃಷ್ಟಿಸಿ ಎಸ್ ಎನ್ ಡಿ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಿ ಸರಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಮೋಸಮಾಡಿರುವ ಮಂಜುನಾಥ ಕೊಪ್ಪ ಅವರ ಮೇಲೆ ಸೂಕ್ತ ತನಿಖೆ ಕೈಗೊಂಡು ಸತ್ಯಾಸತ್ಯತೆಯ ಬಗ್ಗೆಒಂದು ವಾರದೊಳಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಸಧ್ಯ ಧರಣಿ ಹಿಂಪಡೆಯಬೇಕೇಂದು ಮನವಲಿಸಿದ ಪರಿಣಾಮ ಧರಣಿ ನಿರತರು ಒಂದು ವಾರ ಗಡುವ ನೀಡಿದ್ದಿರಿ ಒಂದು ವೇಳೆ ಒಂದು ವಾರದೊಳಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜಿಲ್ಲಾ ಮಟ್ಟದಿಂದ ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ತಾತ್ಕಾಲಿಕ ಧರಣಿ ಹಿಂಪಡೆದುಕೊಂಡರು. ಬಸವರಾಜ ಸರೂರ, ಸಿದ್ದಪ್ಪ ಬಿದರಕುಂದಿ, ಆನಂದ ಮೂದೂರ ರೇವಣಸಿದ್ದ ಸರೂರ, ಆನಂದ ಗಂಗೂರ ಸೇರಿದಂತೆ ಹಲವರು ಇದ್ದರು.