ಲೋಕದರ್ಶನ ವರದಿ
ಮಾಂಜರಿ ದಿ 17: ಅಣ್ಣ ಬಸವಣ್ಣವರು ಹೇಳಿದಂತೆ ಅಣ್ಣ ದಾಸೋಹದ ಜೋತೆಗೆ ಜ್ಞಾನ ದಾಸೋಹದ ಅವಶ್ಯಕತೆ ವಿದೆ. ಈ ನಿಟ್ಟಿನಲ್ಲಿ ಮಾಂಜರಿ ಗ್ರಾಮದಲ್ಲಿ ನೂತನವಾದ ಗ್ರಂಥಾಲಯವನ್ನು ಮಾಂಜರಿ ಗ್ರಾಮದ ಸಮಸ್ತ ಜನರು ಇದರ ಉಪಯೋಗವನ್ನು ಪಡೆದುಕೊಂಡು..ತಮ್ಮ ಜ್ಞಾನವನ್ನು ಹೇಚ್ಚಿಸಿಕೋಳ್ಳಬೇಕೆಂದು ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಸ ಕವಟಗಿಮಠ ಹೇಳಿದರು
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನೂತನ ಗ್ರಂಥಾಲಯಕ್ಕೆ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠಯವರು ಉದ್ಘಾಟಿಸಿ ಮಾತನಾಡುತ್ತಿದ್ದರು ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆಯವರ ಸತತ ಪ್ರಯತ್ನದಿಂದ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 15 ಲಕ್ಷರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಗ್ರಂಥಾಲಯಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಅವರು ಪ್ರವಾಹ ಸಂಧರ್ಭದಲ್ಲಿ ಮಾಂಜರಿ ಗ್ರಾಮದಲ್ಲಿ ಬಹಳಷ್ಟು ಹಾನಿಯಾಗಿದ್ದು. ಅಧಿಕಾರಿಗಳು ಬೇಜಬ್ದಾರಿಯಿಂದ ಸಮರ್ಪಕ ಸರ್ವೇಯಾಗಿಲ್ಲ..ಮತ್ತೋಮ್ಮೆ ಸಮರ್ಪಕ ಸರ್ವೆ ಮಾಡಿ ನೋಂದವರಿಗೆ ನ್ಯಾಯ ದೋರಕಿಸಿಕೋಡಲಾಗುವುದು.. ಎಂದು ಮಹಾಂತೇಶ ಕವಟಗಿಮಠ ಹೇಳಿದರು. ಸಭೆಯ ಕಾರ್ಯಕ್ರಮ ಮುಗಿದ ನಂತರ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಮಹಂತೇಶ್ ಕವಟಗಿಮಠ ಆಚರಿಸಿಕೊಂಡರು
ಗ್ರಾ.ಪಂ. ಅಧ್ಯಕ್ಷ ಮಾಯಾ ಬೀಲವಡೆ,ಬಬನ ಬಿಲವಡೆ, ಅಣ್ಣಾಸಾಹೇಬ ಯಾದವ,ಯೋಗೇಶ ಕದಮದ,ಶೀತಲ ಯಾದವ,ದತ್ತ ಸಕ್ಕರೆ ಕಾರ್ಖಾನೆಯ ನಿದರ್ೆಶಕ ಅಮರ ಯಾದವ,ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ತಾತ್ಯಾಸಹೇಬ ಕಾಟೆ, ಮಾಜಿ ಜಿ.ಪಂ. ಸದಸ್ಯ ಮಹೇಶ ಭಾತೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಮಹೇಶ ಧಾಬೋಳೆ, ಶ್ರಿಧರ ಭೋಜಕರ, ಅಜಯ ಸೂರ್ಯವಂಶಿ, ಅಮರ ಬೋರಗಾಂವೆ ಮನೋಜ ಕೀಚಡೆ, ಸುನೀತಾ ಭೋಜಕರ, ಜಾವೇದ ಮಕಾನದಾರ, ದುರ್ಯೋಧನ ವಸವಾಡೆ, ಸುಶಾಂತ ಲಂಬುಗೋಳ, ರಾಕೇಶ ಕಾಸಾಯಿ, ರಾಮಚಂದ್ರ ಭೋಸಲೆ, ಬಾಳಾಸಾಹೇಬ ಕಾಡಾಪೂರೆ, ಮಹಮ್ಮದ ತರಾಳ, ತಮ್ಮಣ್ಣಿ ಕೋರೆ, ಸಿಕಂದರ ತಾಂಬೋಳಿ, ಪರಶುರಾಮ ಪವಾರ, ರಾಜು ಹಕಾರೆ, ನಂದಕುಮಾರ ರಸಾಳೆ ಸೇರಿದಂತೆ ಮುಂತಾದ ಗ್ರಾಮಸ್ಥರು ವಿವಿಧ ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸನತಕುಮಾರ ಪಾಟೀಲ ಸ್ವಾಗತಿಸಿ ಪ್ರಾಚಾರ್ಯ ಸುಧೀರ ಕೋಟಿವಾಲೆ ನಿರೂಪಿಸಿ ವಂದಿಸಿದರು.