ಕಾರವಾರ: ಆರೋಗ್ಯ ಶುಶ್ರೂಷೆಗೆ ಹೆಸರು ಮಾಡಿರುವ ಮಣಿಪಾಲ್ ಸಂಸ್ಥೆ ಗೋವಾದ ಶಾಖಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮತ್ತು ಉನ್ನತ ತಂತ್ರಜ್ಞಾನದ ವಿಕಿರಣ ಚಿಕಿತ್ಸೆಯ ಯಂತ್ರವಾದ ಎಲೆಕ್ಟಾ ವಸರ್ಾ ಎಚ್ಡಿ ಲೀನಿಯರ್ ಆಕ್ಸೆಲರೇಟರ್ನ್ನು ಸ್ಥಾಪಿಸಿದೆ. ಇದು ಕ್ಯಾನ್ಸರ್ ರೋಗಿಗಳಿಗೆ ವರದಾನವಾಗಿದೆ ಎಂದು ಗೋವಾದ ಮಣಿಪಾಲ್ ಆಸ್ಪತ್ರೆ ಘಟಕದ ಮುಖ್ಯಸ್ಥರಾದ ಮನೀಶ್ ತ್ರಿವೇದಿ ಹೇಳಿದರು. ಕಾರವಾರದಲ್ಲಿ ಅವರು ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು.
ವೈದ್ಯಕೀಯ, ಶಸ್ತ್ರಕ್ರಿಯೆ, ವಿಕಿರಣ, ವೈದ್ಯ ರಕ್ತರೋಗಶಾಸ್ತ್ರ ಮತ್ತು ಅಸ್ತಿಮಜ್ಜೆ ಕಸಿ ಸೇರಿದಂತೆ ಸಮಗ್ರ ಕ್ಯಾನ್ಸರ್ ಆರೈಕೆಯನ್ನು ಗೋವಾ ಮತ್ತು ಕಾರವಾರ ಪ್ರದೇಶಗಳಲ್ಲಿ ಒಂದೆ ಸೂರಿನಡಿ ಚಿಕಿತ್ಸೆ ದೊರೆಯುವ ಆಸ್ಪತ್ರೆ ಸೌಕರ್ಯ ದಕ್ಕಿದಂತಾಗಿದೆ. ಆರೋಗ್ಯ ಕನರ್ಾಟಕ ಯೋಜನೆಯೊಂದಿಗೆ ಈ ಆಸ್ಪತ್ರೆ ಒಪ್ಪಂದ ಹೊಂದಿದ್ದು, ಆರೋಗ್ಯ ಕನರ್ಾಟಕದ ಯೊಜನೆಯಡಿ ಬರುವ ಜನರು ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ ಎಂದರು.
ಈ ನೂತನ ಲಿನಾಕ್(ಲೀನಿಯರ್ ಆಕ್ಸಿಲರೇಟರ್) ಅಥವಾ ಎಲೆಕ್ಟಾ ವಸರ್ಾ ಎಚ್ಡಿ ವಿಕಿರಣ ಚಿಕಿತ್ಸಾ ಯಂತ್ರ ಕನರ್ಾಟಕ ಆರೋಗ್ಯ ಸೇವಾ ಬಳಕೆದಾರರಿಗೆ ಚಿಕಿತ್ಸೆಯಲ್ಲಿ ಹೊಸ ತಂತ್ರಜ್ಞಾನದ ಅನುಕೂಲ ಸಿಗಲಿದೆ. ಇತ್ತೀಚಿನ ತಂತ್ರಜ್ಞಾನ ಉನ್ನತೀಕರಣದಿಂದ ಲಾಭ ಹೊಂದಲು ಅವಕಾಶ ಮಾಡಿಕೊಡುತ್ತಿದ್ದು, ಕ್ಯಾನ್ಸರ್ ಚಿಕಿತ್ಸೆಯ ವೇಳೆ ಆಧುನಿಕ ಯಂತ್ರದಿಂದಾಗಿ ರೋಗಿಯ ದೇಹದ ಸುತ್ತಮುತ್ತಲಿನ ಆರೋಗ್ಯಕರ ಜೀವಕೋಶಗಳಿಗೆ ಅತ್ಯಂತ ಕಡಿಮೆ ಹಾನಿಯಾಗುವಂತೆ, ನೇರವಾಗಿ ಕ್ಯಾನ್ಸರ್ ಜೀವಕೋಶಗಳನ್ನು ಗುರಿಯಾಗಿಟ್ಟುಕೊಂಡು ನಿದರ್ಿಷ್ಟ ಪ್ರಮಾಣದ ವಿಕಿರಣವನ್ನು ನೀಡಲು ಕ್ಯಾನ್ಸರ್ ತಜ್ಞರಿಗೆ ಅವಕಾಶ ಲಭಿಸಲಿದೆ ಎಂದು ವಿವರಿಸಿದರು. ದೇಶದಲ್ಲಿ ಕ್ಯಾನ್ಸರ್ನ ಹೊರೆ ಹಲವು ಪಟ್ಟು ಹೆಚ್ಚುತ್ತಿದೆ. ಶಸ್ತ್ರಕ್ರಿಯಾ ತಜ್ಞರಾಗಿ ಮತ್ತು ಆರೈಕೆ ನೀಡುತ್ತಿದ್ದೇವೆ. ರೋಗಿಗಳ ಮೇಲೆ ಅತ್ಯಂತ ಕಡಿಮೆ ದುಷ್ಪರಿಣಾಮಗಳ ಖಾತ್ರಿ ಮಾಡಿಕೊಳ್ಳುವ ಹೋರಾಟದಲ್ಲಿ ಸತತವಾಗಿ ಶ್ರಮಿಸುತ್ತಿದ್ದೇವೆ. ಈ ಯಂತ್ರ ನೂತನ ಚಿಕಿತ್ಸೆಗಳಿಗೆ ಹೆಚ್ಚು ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಅಲ್ಲದೇ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಕ್ಯಾನ್ಸರ್ ಚಿಕಿತ್ಸೆ ಸಿಗಲಿದೆ. ರೋಗಿಗಳಿಗೆ ಹೊಸ ಭರವಸೆ ಮೂಡಿಸುವಂಥದ್ದಾಗಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಾವು ಅಂತಾರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ಚಿಕಿತ್ಸೆ ನೀಡುತ್ತಿದ್ದೇವೆ. ಜಗತ್ತಿನ ಇತರೆ ಮುಂಚೂಣಿಯ ಕ್ಯಾನ್ಸರ್ ಆರೈಕೆ ಆಸ್ಪತ್ರೆಗಳಿಗೆ ಸಮನಾದ ಮಟ್ಟಕ್ಕೆ ಗೋವಾದ ಮಣಿಪಾಲ್ ಆಸ್ಪತ್ರೆ ಸೌಲಭ್ಯ ಹೊಂದಿದೆ. ಈಗ ಕಾರವಾರ ಮತ್ತು ಗೋವಾ ಸುತ್ತಮುತ್ತಲ ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಗೋವಾದ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರಬಹುದಾಗಿದೆ ಎಂದರು.
ಗೋವಾದ ಮಣಿಪಾಲ್ ಆಸ್ಪತ್ರೆಯ ವಿಕಿರಣ ಕ್ಯಾನ್ಸರ್ರೋಗಶಾಸ್ತ್ರ ಸಲಹಾ ತಜ್ಞ ಡಾ. ಗುಂಜನ್ ಬೈಜಾಲ್ ಮಾತನಾಡಿ, ಮೇಲ್ದಜರ್ೆಗೇರಿಸಲಾದ ಲೀನಿಯರ್ ಆಕ್ಸಿಲರೇಟರ್ ಯಂತ್ರ ಬಹು ಉಪಕಾರಿಯಾಗಿದೆ. ಚಿಕಿತ್ಸೆ ನಿಖರ ಮತ್ತು ಹೆಚ್ಚು ವೇಗದ್ದಾಗಿರುವುದಲ್ಲದೇ, ಕನಿಷ್ಠ ನೋವಿನಿಂದ ಕೂಡಿದೆ. ಹೆಚ್ಚು ಸುರಕ್ಷಿತವಾಗಿರುತ್ತದೆ. ಕ್ಯಾನ್ಸರ್ ಜೀವಕೋಶಗಳನ್ನು ಆಕ್ರಮಿಸುವಲ್ಲಿ ನಿದರ್ಿಷ್ಟವಾಗಿ ಗುರಿಯಾಗಿಟ್ಟುಕೊಂಡ ಚಿಕಿತ್ಸೆಯ ಖಾತ್ರಿಯನ್ನು ಈ ತಂತ್ರದಿಂದ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ಚಿಕಿತ್ಸೆಯಿಂದ ಉಂಟಾಗುವ ಇತರೆ ಪರಿಣಾಮವನ್ನು ಕನಿಷ್ಠವಾಗಿಸಿ, ರೋಗಿಗಳಿಗೆ ಹೆಚ್ಚು ಉತ್ತಮ ಗುಣಮಟ್ಟದ ಜೀವನ ನೀಡಬಹುದಾಗಿದೆ ಎಂದರು.
ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ವಿಕಿರಣ ಚಿಕಿತ್ಸೆಯಲ್ಲಿ ಬಾಹ್ಯವಾಗಿ ಕಿರಣಗಳನ್ನು ನೀಡಲು ಲೀನಿಯರ್ ಆಕ್ಸೆಲರೇಟರನ್ನು(ಎಲ್ಐಎನ್ಎಸಿ) ಅತ್ಯಂತ ಸಾಮಾನ್ಯವಾಗಿ ಬಳಸಲಾಗುತ್ತದೆ. ಲೀನಿಯರ್ ಆಕ್ಸೆಲರೇಟರನ್ನು ದೇಹದ ಎಲ್ಲ ಭಾಗಗಳು, ಅಂಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಉನ್ನತ ಶಕ್ತಿಯ ಕ್ಷ-ಕಿರಣಗಳನ್ನು ಅಥವಾ ಎಲೆಕ್ಟ್ರಾನ್ಗಳನ್ನು ರೋಗಿಯ ಕ್ಯಾನ್ಸರ್ಗಡ್ಡೆಗಳಿಗೆ ತಲುಪುವಂತೆ ಈ ಯಂತ್ರ ನೋಡಿಕೊಳ್ಳುತ್ತದೆ ಎಂದರು. ಮಣಿಪಾಲ್ ಆಸ್ಪತ್ರೆ, ಗೋವಾ, ಡಾ. ಇ. ಬೋಗರ್ೆಸ್ ರಸ್ತೆ, ಡೋನಾಪಾಲ, ಪಣಜಿ ಹಾಗೂ ದೂರವಾಣಿ ಸಂಖ್ಯೆಗಳಾದ 86984 86613/180030014000/083266325000 ಇಲ್ಲಿಗೆ ಕರೆ ಮಾಡಬಹುದು ಎಂದರು. ಹಾಗೂ ವೈದ್ಯರಾದ ಮನೀಶ್ ತ್ರಿವೇದಿ 95035 66117, ಡಾ. ಗುಂಜನ್ ಬೈಜಾಲ್, ವಿಕಿರಣ ಕ್ಯಾನ್ಸರ್ರೋಗಶಾಸ್ತ್ರ ಸಲಹಾ ತಜ್ಞ 77200 93457, ಸೋಮಶೇಖರ್ - 9963995932 ಈ ದೂರವಾಣಿ ಸಂಖ್ಯೆಗಳಲ್ಲಿ ಸಹ ಸಂಪಕರ್ಿಸಬಹುದು ಹೇಳಿದರು.