ಧಾರವಾಡ.27: ಧಾರವಾಡ ಮಾವು ಮೇಳದ ಅಂಗವಾಗಿ ವಿಶೇಷವಾಗಿ ಮಾವು ಬೆಳೆಗಾರರಿಗೆ ಮತ್ತು ಇಲಾಖೆಯ ಅಧಿಕಾರಿ ವರ್ಗದವರಿಗೆ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಮಾವು ಬೆಳೆಯ ಕುರಿತು ತಾಂತ್ರಿಕ ಕಾರ್ಯಗಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಅರಭಾವಿಯ ತೋಟಗಾರಿಕೆ ಮಹಾವಿದ್ಯಾಲಯದ ವಿಷಯ ತಜ್ಞ ಡಾ. ಲಕ್ಷ್ಮಣ ಕುಕನೂರ ಮಾತನಾಡಿ, ಮಾವಿನಲ್ಲಿ ಹೂ-ಬಿಡುವ ಸಮಯ, ಕಾಯಿ ಕಚ್ಚಿದ ನಂತರ ಮತ್ತು ಕಾಯಿ ಕಟಾವಣೆ ಸಮಯದಲ್ಲಿ ಕೈಗೊಳ್ಳಬೇಕಾದ ತಾಂತ್ರಿಕ ವಿಧಾನಗಳನ್ನು ತಿಳಿಸಿದರು. ನೈಸರ್ಗಿಕ ವಾಗಿ ಹಣ್ಣನ್ನು ಮಾಗಿಸುವ ವಿಧಾನಗಳನ್ನು ವಿವರಿಸಿದರು.
ತೋಟಗಾರಿಕೆ ಉಪನಿದರ್ೇಶಕರಾದ ಡಾ. ರಾಮಚಂದ್ರ ಕೆ. ಮಡಿವಾಳ ಪ್ರಸ್ತಾವಿಕವಾಗಿ ಮಾತನಾಡಿ ತರಬೇತಿಯ ಪ್ರಮುಖ ಉದ್ದೇಶಗಳನ್ನು ವಿವರಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರಾದ ಪ್ರಶಾಂತ ಆರ್. ಕುಲಕಣರ್ಿ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸಿದರು. ಹಾಗೂ ಇಲಾಖೆಯಲ್ಲಿ ಉತ್ತಮ ಗುಣಮಟ್ಟದ ದ್ವಿವಾಟೆ ಮಾವಿನ ಕಸಿ ಗಿಡಗಳು, ನಿಂಬೆ, ನುಗ್ಗೆ, ಕರಿಬೇವು, ಪೇರಲ ಮತ್ತು ತರಕಾರಿ ಸಸಿಗಳು ಯೋಗ್ಯ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ರೈತರಿಗೆ ತಿಳಿಸಿದರು.
ಧಾರವಾಡ ಜಿಲ್ಲೆಯ ವಿವಿಧ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಮಾವು ಬೆಳೆಗಾರರು ಕಾರ್ಯಗಾರದಲ್ಲಿ ಭಾಗವಹಿಸಿ, ಮಾವಿನ ಬೆಳೆಯಲ್ಲಿರುವ ಸಮಸ್ಯೆಗಳನ್ನು ತಜ್ಞರೊಂದಿಗೆ ಪ್ರಸ್ತಾಪಿಸಿ ಉತ್ತರವನ್ನು ಪಡೆದರು.
ಸಹಾಯಕ ತೋಟಗಾರಿಕೆ ನಿದರ್ೇಶಕರಾದ ಅಜಿತಕುಮಾರ ಎಸ್. ಮಶಾಲ್ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.