ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ

ಗುಳೇದಗುಡ್ಡ.: ಮಕ್ಕಳ ಆರೋಗ್ಯಪೂರ್ಣ ಬದುಕಿಗೆ ಡಿಟಿಪಿ ಲಸಿಕೆ ಕಡ್ಡಾಯವೆಂದು ತೋಗುಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಬಸವರಾಜ ಹೆಬ್ಬಾಳ ಹೇಳಿದರು.

    ಅವರು ಬುಧುವಾರ ತೋಗುಣಸಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಮತ್ತು ಫ್ರೌಢಶಾಲೆಯಲ್ಲಿ ಸಕರ್ಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಮ್ಮಿಕೊಂಡಿದ್ದ ಡಿಪಿಟಿ ಲಸಿಕಾ ಅಭಿಯಾನ-2019ವನ್ನು ಉದ್ದೇಶಿಸಿ ಮಾತನಾಡಿ, ಶಾಲೆಯ ಪ್ರತಿಯೊಂದು ಮಗು ಡಿಪಿಟಿ ಲಸಿಕೆಯನ್ನು ಪಡೆಯಲೇಬೇಕು.ಈ ಲಸಿಕೆಯು ಗಂಟಲುಮಾರಿ, ನಾಯಿಕೆಮ್ಮು ಮತ್ತು ಧನುವರ್ಾಯು ರೋಗಗಳಿಂದ ಮಕ್ಕಳನ್ನು ರಕ್ಷಿಸುತ್ತದೆ. ಈ ಲಸಿಕೆಯಿಂದ ಯಾವುದೇ ತರಹದ ಅಡ್ಡ ಪರಿಣಾಮಗಳು ಸಂಭವಿಸುವುದಿಲ್ಲ. ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಈ ಲಸಿಕೆಯನ್ನು ಕೊಡಿಸಬೇಕು. ನಿಮ್ಮ ಮಕ್ಕಳ ಉಜ್ವಲ ಭವಿಷ್ಯ ಬಹಳ ಪ್ರಮುಖವಾಗಿರುತ್ತದೆ. ಈ ಲಸಿಕೆಯು ದೊಡ್ಡ ರೋಗಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ರಾಮಬಾಣವಾಗಿದೆ. ಈ ಲಸಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ  ಸಕರ್ಾರ ಉಚಿತವಾಗಿ ನೀಡುತ್ತಿದೆ. ಇದರ ಸದುಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕು. ಲಸಿಕೆ ಪಡೆಯುವುದು ಎಲ್ಲ ಮಕ್ಕಳ ಹಕ್ಕು. ಹಾಗೆಯೇ ಲಸಿಕೆ ಕೊಡಿಸುವುದು ಎಲ್ಲ ಪಾಲಕರ ಕರ್ತವ್ಯ ಎಂದು ಮಕ್ಕಳ ಹಕ್ಕಿನ ಬಗ್ಗೆ ಮನವರಿಕೆ ಮಾಡಿದರಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರ ತೋಗುಣಸಿ ವತಿಯಿಂದ 31 ಅಂಗನವಾಡಿಗಳು, 26 ಶಾಲೆಗಳ ಒಟ್ಟು 3187 ವಿದ್ಯಾಥರ್ಿಗಳಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಹೆಬ್ಬಾಳ  ಹೇಳಿದರು.

      ಎಸ್ಡಿಎಂಸಿ ಸದಸ್ಯರಾದ ಶಿವಾನಂದ ವಾಲೀಕಾರ ಮತ್ತು ಚನ್ನಪ್ಪ ಬೇವಿನಮಟ್ಟಿ ಉಪಸ್ಥತರಿದ್ದರು. ಫ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಕವಿಶೆಟ್ಟಿ, ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆ ಎನ್.ಡಿ. ಹಿರೇಮಠ ಭಾಗವಹಿಸಿದ್ದರು. ಶಿಕ್ಷಕ ಸಚೀನ ತಿಪ್ಪಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕಣಗಾಲಮಠ ವಂದಿಸಿದರು.