ಲೋಕದರ್ಶನವರದಿ
ರಾಣೇಬೆನ್ನೂರು೨೮: ಸದೃಡ ಪ್ರಜಾಪ್ರಭುತ್ವ ನಿಮರ್ಾಣಗೊಳ್ಳಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡವುದು ಹಾಗೂ ಮತದಾರರ ಪಟ್ಟಿಯನ್ನು ಪರಿಶೀಲನೆ ಮಾಡಿಕೊಳ್ಳುವುದು ಇಂದಿನ ಬಹು ಅಗತ್ಯ ಮತ್ತು ಅವಶ್ಯಕವಾಗಿದೆ ಎಂದು ಸದ್ಗುರು ಶಿವಾನಂದ ಪಪೂ ಕಾಲೇಜು ಪ್ರಾಚಾರ್ಯ ಪಿ. ಮುನಿಯಪ್ಪ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಆಯೋಜಿಸಿದ್ದ, ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಮತ್ತು ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ-ತಮ್ಮ ನೆರೆಹೊರೆ ಮತ್ತು ಮನೆಯವರ ಮತದಾರರ ಪಟ್ಟಿಯ ಪರಿಶೀಲನೆ ಮಾಡಿಕೊಳ್ಳಬೇಕು.
ಮತ್ತು ತಮ್ಮಲ್ಲಿರುವ ಆಂತರಿಕ ಶಕ್ತಿಯ ಶ್ರಮ, ವಿದ್ಯೆ, ಬುದ್ಧಿ ಜ್ಞಾನ ಕೌಶಲ್ಯ ಆರ್ಥಿಕ ಸೌಲಭ್ಯಗಳು ಸಮಾಜದ ರಾಷ್ಟ್ರದ ಒಳಿತಿಗಾಗಿ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಸಮರ್ಪಣಾ ಮನೋಭಾವದಿಂದ ಸಹಾಯಹಸ್ತ ನೀಡುವುದರ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ, ಮೊಟೇಬೆನ್ನೂರು ಸರಕಾರಿ ಪ. ಪೂ ಕಾಲೇಜಿನ ಉಪನ್ಯಾಸಕ ಕೆ ಪಿ ಬ್ಯಾಡಗಿ, ರಾಣೇಬೆನ್ನೂರು ಸಕರ್ಾರಿ ಪದವಿ ಕಾಲೇಜಿನ ಪ್ರೊ|| ಅರುಣ್ಕುಮಾರ್ ಚಂದನ್ ಅವರು, ಸಮಾಜದಲ್ಲಿ ಸಮಾನತೆ ಸಾಧಿಸಲು ವಿದ್ಯಾಥರ್ಿಗಳ ಪಾತ್ರ ವಿಷಯ ಕುರಿತಂತೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಯೋಜನಾಧಿಕಾರಿ ಹೆಚ್. ಶಿವಾನಂದ, ಉಪನ್ಯಾಸಕರಾದ ಎಮ್. ಶಿವಕುಮಾರ, ಹನುಮಂತಪ್ಪ ಬಿ, ಸುಮಾ ಗಂಗಾಯಿಕೊಪ್ಪ, ಶಕ್ತಿ ಎಸ್. ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.