ಅನ್ಯರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರಿಗೆ ಕಡ್ಡಾಯ ಕ್ವಾರಂಟೈನ್: ಡಿಸಿ

ಬಳ್ಳಾರಿ,ಮೇ 09: ಸಾರ್ವಜನಿಕ ಹಿತದೃಷ್ಟಿಯಿಂದ ಕರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳಿಂದ ಬಳ್ಳಾರಿ ಜಿಲ್ಲೆಗೆ ಬರುವ ವಲಸೆ ಕಾಮರ್ಿಕರಿಗೆ / ವ್ಯಕ್ತಿಗಳಿಗೆ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.

  ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಅವರು ಸೇವಾಸಿಂಧು ಆಫ್ ಮೂಲಕ ಪಾಸ್ ದೊರಕಿದಲ್ಲಿ ಮಾತ್ರ ಬಳ್ಳಾರಿ ಜಿಲ್ಲೆಯ ಗಡಿ ಒಳಗೆ ಬರಲು ಷರತ್ತುಗಳೊಂದಿಗೆ ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

    ಬಳ್ಳಾರಿ ಜಿಲ್ಲೆಗೆ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಬೇಕಾಗುತ್ತದೆ. ಸಾಂಸ್ಥಿಕ ಕ್ವಾರಂಟೈನ್ ಅನ್ನು ಉಚಿತವಾಗಿ ಜಿಲ್ಲೆಯ ಆಯ್ದ ವಸತಿ ನಿಲಯಗಳಲ್ಲಿ ಪಡೆಯಬಹುದಾಗಿದೆ. ಅಥವಾ ಜಿಲ್ಲೆಯ ಆಯ್ದ ಲಾಡ್ಸ್ ಅಥವಾ ಹೋಟೆಲ್ಗಳಲ್ಲಿ ಹಣ ಪಾವತಿ ಆಧಾರದ ಮೇಲೆ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಇರಬಹುದಾಗಿದೆ(14 ದಿನಗಳ ಬಾಡಿಗೆಯನ್ನು ಮುಂಗಡವಾಗಿ ಹೋಟೆಲ್ಗೆ ದಾಖಲಾಗುವ ದಿನವೇ ಪಾವತಿಸಬೇಕಾಗಿರುತ್ತದೆ) ಎಂದು ಅವರು ತಿಳಿಸಿದ್ದಾರೆ.

   ಜಿಲ್ಲೆಯ ಕೆಲವು ಲಾಡ್ಜ್/ ಹೋಟೆಲ್ಗಳ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ಗೆ ತಗಲುವ ವೆಚ್ಚಗಳ ವಿವರಗಳು: ಹೋಟೆಲ್ ಬಾಲಾ ರೆಜೆನ್ಸಿ, ಪಾರ್ವತಿನಗರ,ಬಳ್ಳಾರಿ(ನಾನ್ ಎಸಿ ಟ್ವೀನ್ ಡಿಲಕ್ಸ್) (ಉಪಹಾರ, ಊಟ ಮತ್ತು ವೈಫೈ ಇಂಟರ್ನೆಟ್ ಸೌಲಭ್ಯಗಳೊಂದಿಗೆ ರೂ. 19600/+ ಜಿಎಸ್ಟಿ)

   ಹೋಟೆಲ್ ರಾಕ್ ರೆಜೆನ್ಸಿ, ಜೆ.ಎಸ್.ಡಬ್ಲೂ ಸ್ಟೀಲ್ ತೋರಣಗಲ್ಲು. (ನಾನ್ ಎಸಿ ಟ್ವೀನ್ ಡಿಲಕ್ಸ್) (ಉಪಹಾರ, ಊಟ ಮತ್ತು ವೈಫೈ ಇಂಟರ್ನೆಟ್ ಸೌಲಭ್ಯಗಳೊಂದಿಗೆ ರೂ. 19600+ ಜಿಎಸ್ಟಿ)

      ಹೋಟೆಲ್ ಆಶೋಕ ಕಂಫಟರ್್ ಲಾಡ್ಜ್ ಮತ್ತು ಹೋಟಲ್ ಚಾಳುಕ್ಯ ಡಿಲಕ್ಸ್ ಲಾಡ್ಜ್, ಕೋಟರ್್ ರಸ್ತೆ,ಬಳ್ಳಾರಿ(ಸುಮಾರು ರೂ.10 ಸಾವಿರ ಗಳ ಉಪಹಾರದೊಂದಿಗೆ) ಎಸಿ ಕೊಠಡಿಗಳು ಲಭ್ಯವಿದ್ದು, ಅದಕ್ಕೆ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ.

   ಈ ಮೇಲಿನ ಕ್ರಮಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕೊರೊನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿದ್ದು ಯಾರಾದರೂ ಅದನ್ನು ಉಲ್ಲಂಘಿಸಿದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

   ನೆನಪಿಡಿ ಇದು ನಿಮ್ಮ ಹಿತದೃಷ್ಟಿಯಿಂದ ಕೈಗೊಳ್ಳುತ್ತಿರುವ ಕಾರ್ಯವಾಗಿದ್ದು, ಯಾರು ಭಯಪಡಬೇಡಿ, ಕೊರೊನಾ ವಿರುದ್ಧ ಹೋರಾಟಕ್ಕೆ ತಾವು ಕೈಜೋಡಿಸಿ ಎಂದು ಅವರು ಕೋರಿಕೊಂಡಿದ್ದಾರೆ. 

   ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಆರೋಗ್ಯ ಸಹಾಯ ವಾಣಿ 104 ಅಥವಾ 08392-277100 ಅಥವಾ ವಾಟ್ಸ್ ಅಪ್ ಸಂಖ್ಯೆ 8277888866 ಮೂಲಕ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.