ಮ್ಯಾನವಿಜನ್ ಇಂಟ್ರಾ ಕಾಲೇಜ ಮ್ಯಾನೇಜಮೆಂಟ ಫೆಸ್ಟ ಸ್ಪರ್ಧೆ

ಲೋಕದರ್ಶನ ವರದಿ

ಕಾಗವಾಡ 21: ಪಿಪಲ್ ಎಜ್ಯುಕೇಶನ ಸೊಸೈಟಿ ಉಗಾರಖುರ್ದ ಶಿಕ್ಷಣ ಸಂಸ್ಥೆಯ ಪಿಇಎಸ್ ಬಿಬಿಎ ಮತ್ತು ಬಿ.ಕಾಂ ಕಾಲೇಜು ಶುಕ್ರವಾರದಿ. 17 ರಂದುಒಂದು ದಿನದ ಮ್ಯಾನವಿಜನ್ ಇಂಟ್ರಾ ಕಾಲೇಜ ಮ್ಯಾನೇಜಮೆಂಟ ಫೆಸ್ಟ ಸ್ಪರ್ಧೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಫೈನಾನ್ಸ, ಬೆಸ್ಟ ಮ್ಯಾನೇಜರ, ಸ್ಟ್ರೆಸ್ ಇಂಟರೀವ್, ಟೀಜರ ಹಂಟ, ಫಿಲ್ಡ ಮಾರ್ಕೆಟಿಂಗ, ನೃತ್ಯ ಮೊದಲಾದ ಸ್ಪರ್ದೇಗಳನ್ನು ಏರ್ಪಡಿಸಲಾಗಿತು. ವಿದ್ಯುತ್ ಇನೊವೇಟೀವ್ ಸೊಲುಶನ್ ಸೇಲ್ಸ ಮ್ಯಾನೇಜರ್, ಬೆಳಗಾವಿಯ ಪ್ರವೀಣ ಆಳಪ್ಪನವರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೆರಿಸಿದರು.

ಇಂತಹ ಕಾರ್ಯಾಗಾರದಿಂದ ಉತ್ತಮ ಕಲಿಕಾ ವಾತವಾರಣ ರೂಪಿಸಬಹುದು. ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಿ, ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಪ್ರಾಚಾರ್ಯರಾದ ರಾಮಚಂದ್ರ ಕಿಲ್ಲೇದಾರ ಅಧ್ಯಕ್ಷೀಯ ಸಮಾರೋಪ ನೆರವೆರಿಸುತ್ತಾ, ಇಂದಿನ ವಿದ್ಯಾರ್ಥಿಗಳಲ್ಲಿ ಎನಾದರು ಸಾಧನೆ ಮಾಡುವ ಛಲವನ್ನು ಹೊಂದಿರಬೇಕು. ಮನಸ್ಸು ಮೋಜಿನ ಕುದುರೆ ಇದ್ದ ಹಾಗೆ, ಅದರ ಲಗಾಮು ನಾವೇ ಆಗಬೇಕು. ಉತ್ತಮ ಕೌಶಲ್ಯಗಳನ್ನು ರೂಡಿಸಿಕೊಂಡು ಗುರಿ ಸಾದನೆ ಕಡೆಗೆ ಸಾಗಬೇಕು. ಅದಕ್ಕೆ ಪೂರಕವಾಗಿ ಇಂಥಾ ಸ್ಪರ್ಧಾ  ಕಾರ್ಯಾಗಾರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹ ಅತಿಥಿಗಳಾಗಿ ತೃಪ್ತಿ ಸವದತ್ತಿ, ಜಿ.ಆರ್.ಕಿಲ್ಲೇದಾರ ಅವರು ಉಪಸ್ಥಿತರಿದ್ದರು.