ವಿದೇಶಗಳಿಗೆ ಪೈಪೋಟಿ ಕೊಡಲು ಮನಮೊಹನ್ ಸಿಂಗ್ ಭದ್ರ ಬುನಾದಿ ಹಾಕಿದ್ದರು : ಬೊಮ್ಮಾಯಿ

Manamohan Singh laid a solid foundation to compete with foreign countries: Bommai

ಶಿಗ್ಗಾವಿ 28: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.  

ವರದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿ, ಪ್ರಧಾನ ಮಂತ್ರಿಯಾಗಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ದೇಶದ ಆರ್ಥಿಕತೆಗೆ ದೊಡ್ಡ ಬದಲಾವಣೆ ತಂದಿದ್ದರು. ಮನಮೋಹನ್ ಸಿಂಗ್ ಅವರು ಅಂತಾರಾಷ್ಟ್ರೀಯ ಸಂಸ್ಥೆಗಳಾದ ವಿಶ್ವ ಸಂಸ್ಥೆ, ಐಎಂಎಫ್ ನಲ್ಲಿ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರಿಂದ ಈ ದೇಶವನ್ನು ಉಳಿಸಲು ಸಾಧ್ಯವಾಯಿತು. ರಿಸರ್ವ್‌ ಬ್ಯಾಂಕ್ ಗೌರ್ನರ್ ಆಗಿ ಕೆಲಸ ಮಾಡಿದ್ದು, ಈ ದೇಶದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಕಾರಣವಾಗಿದೆ. ದೇಶ ಆರ್ಥಿಕವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಮನಮೋಹನ್ ಸಿಂಗ್ ಭದ್ರ ಬುನಾದಿ ಹಾಕಿದ್ದಾರೆ.  ಮನಮೋಹನ್ ಸಿಂಗ್ ಅವರು ಅತ್ಯಂತ ಸಜ್ಜನ ರಾಜಕಾರಣಿ ಆಗಿದ್ದರು. ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ದೇಶ ಕಳೆದುಕೊಂಡಿದೆ. ಅವರು ದೇಶಕ್ಕಾಗಿ ಸದಾ ಚಿಂತನೆ ಮಾಡುತ್ತಿದ್ದರು. ಹಲವಾರು ದೂರದೃಷ್ಟಿಯ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಅದರ ಲಾಭ ಈಗ ದೇಶಕ್ಕೆ ಆಗುತ್ತಿದೆ. ಅವರು ಪ್ರಚಾರ ಪ್ರೀಯ ರಾಜಕಾರಣ ಮಾಡಿರಲಿಲ್ಲ, ವಾಸ್ತವ ರಾಜಕಾರಣ ಮಾಡಿದ್ದರು. ಕೆಲವು ಅಪ್ರೀಯವಾದ ನಿರ್ಣಯಗಳನ್ನು ದೇಶದ ಹಿತ ದೃಷ್ಟಿಯಿಂದ ತೆಗೆದುಕೊಂಡಿದ್ದರು. ಅವರ ಗಟ್ಟಿ ನಿಲುವು, ಧಿಮಂತಿಕೆಯ ಗುಣ ಹಲವಾರು ಸಂದರ್ಭಗಳಲ್ಲಿ ಗೊತ್ತಾಗುತ್ತದೆ. ಚೀನಾ, ಅಮೇರಿಕಾ, ಯುರೋಪ್ ದೇಶಗಳಿಗೆ ಪೈಪೋಟಿ ಕೊಡಲು ಮನಮೊಹನ್ ಸಿಂಗ್ ಅವರು ಭದ್ರ ಬುನಾದಿ ಹಾಕಿದ್ದರು.   

ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಹಾಗೂ ಅಂದಿನ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಅವರ ನಡುವೆ ಯಾವುದೇ ರೀತಿಯ ರಾಜಕೀಯ ಹೊರೆ ಇರಲಿಲ್ಲ. ಮುಕ್ತವಾದ ವಿಚಾರ ಇದ್ದಿದರಿಂದ ಸ್ಥಾಪಿತವಾದ ವ್ಯವಸ್ಥೆಯನ್ನು ಆಮೂಲಾಗವಾಗಿ ಬದಲಾವಣೆ ಮಾಡಲು ಸಾಧ್ಯವಾಯಿತು. ನಾವು ಯಾರನ್ನು ಆಕಸ್ಮಿಕ ನಾಯಕ ಎಂದು ಕರೆಯುತ್ತೆವೆಯೋ ಅವರಿಂದ ಅಸಮಾನ್ಯ ಕೆಲಸಗಳು ಆಗುತ್ತವೆ. ಅವರಿಗೆ ರಾಜಕೀಯ ಯಾವುದೇ ಕಟ್ಟುಪಾಡುಗಳು, ಒತ್ತಡಗಳು ಇರುವುದಿಲ್ಲ. ದೇಶವನ್ನು ಆರ್ಥಿಕವಾಗಿ ಅಮೂಲಾಗವಾದ ಬದಲಾವಣೆ ಮಾಡಿದರು. ಜಾಗತೀಕರಣ, ಉದಾರಿಕರಣ ಜಾರಿಗೆ ತಂದಿದ್ದರಿಂದ ವಿದೇಶಿ ಬಂಡವಾಳ ಹೆಚ್ಚಾಗಿ ಹರಿದು ಬಂದಿದ್ದರಿಂದ ಆರ್ಥಿಕ ದಿವಾಳಿ ಅಂಚಿನಲ್ಲಿದ್ದ ಭಾರತವನ್ನು ಉಳಿಸಿತು. ಸಣ್ಣ ಮತ್ತು ಮಧ್ಯಮ ಉದ್ಯಮ ಮತ್ತು ದೊಡ್ಡ ಉದ್ಯಮಗಳಿಗೆ ದೊಡ್ಡ ಪೋತ್ಸಾಹ ಸಿಕ್ಕಿತು. ಅದರ ಜೊತೆಗೆ ಸರ್ಕಾರದಲ್ಲಿ ಆರ್ಥಿಕ ಶಿಸ್ತು ತಂದಿದ್ದರು.  

ಮಾಹಿತಿ ಹಕ್ಕು ಕಾಯಿದೆ ತಂದು ಜನರಿಗೆ ಮಾಹಿತಿ ಪಡೆಯುವ ಅಧಿಕಾರ ನೀಡಿದರು. ಅದರ ಜೊತೆಗೆ ರಾಜಕೀಯ ಶುದ್ದೀಕರಣ ಮಾಡಬೇಕೆಂದು ಕಾನೂನು ತರಲು ಪಯತ್ನ ಮಾಡಿದರು. ಆಗ ಅವರ ಪಕ್ಷದ ನಾಯಕತ್ವ ಅದಕ್ಕೆ ಅವಕಾಶ ಕೊಡಲಿಲ್ಲ. ಅತ್ಯಂತ ಶುದ್ಧ ಹಸ್ತ, ಶುದ್ಧ ಮನಸ್ಸು, ಗಟ್ಟಿಯಾದ ನಿರ್ಣಯ ಕೈಗೊಳ್ಳುತ್ತಿದ್ದರು. ಡಾ. ಮನಮೋಹನ್ ಸಿಂಗ್ ಅವರು ಭಾರತ ಅಮೇರಿಕಾ ಪರಮಾಣು ಒಪಂದ ಮಾಡಿರುವುದು ಮಹತ್ವದ ಸಂಗತಿ. ಅಂತಹ ಕೆಲಸ ಕಾರ್ಯಗಳನ್ನು ಮಾಡಿ, ದೇಶ ಸೇವೆಯನ್ನು ಅತ್ಯಂತ ಪ್ರಮಾಣಿಕವಾಗಿ ಮಾಡಿದ್ದಾರೆ. ಅವರ ವ್ಯಕ್ತಿತ್ವ ಎಲ್ಲ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದರು.