ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್ ಸನ್ಮಾನ

Managing Director Minority Development Corporation Mohammad Nazir Sanmana

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್  ಸನ್ಮಾನ

ಬಿಜಾಪುರ 11 : ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್‌ವರಿಗೆ ಬಿಜಾಪುರ ನಗರದ ಹೊಸ ಐಬಿ ಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಅಭಿವೃದ್ಧಿ ಸಮಿತಿ (ಒಒಆಅ) ವತಿಯಿಂದ ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ಎಂ.ಎಂ.ಡಿ.ಸಿ ಮುಖಂಡರಾದ ಜೈನುಲ್ ಆಬಿದಿನ್ ಪಿರಜಾದೆ ರವರು ಮಾತನಾಡಿ, ಬಿಜಾಪುರ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿ, ಮುಂದಿನ ಬಜೆಟ್‌ನಲ್ಲಿ ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಲು ವಿನಂತಿಸಲಾಯಿತು. ಈ ಮೂಲಕ ಶಿಕ್ಷಣ, ಉದ್ಯೋಗ, ಸಾಮಾಜಿಕ ಕಲ್ಯಾಣ, ಮತ್ತು ಆರ್ಥಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡುವ ಅಗತ್ಯವನ್ನು ಮಂಡಿಸಲಾಯಿತು.ನಿಗಮದ ಎಂ.ಡಿ. ಮಹಮ್ಮದ್ ನಜೀರ್ ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಿಗಮದ ಬದ್ಧತೆಯನ್ನು ಪುನರುಚ್ಚರಿಸಿದರು ಹಾಗೂ ಬಿಜಾಪುರ ಜಿಲ್ಲೆಯ ಬೇಡಿಕೆಗಳಿಗೆ ಗಮನಕೊಡುವುದಾಗಿ ಭರವಸೆ ನೀಡಿದರು.ಈ ಸನ್ಮಾನದ ಸಂದರ್ಭದಲ್ಲಿ ಬಿಜಾಪುರ ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯದ ಜಿಲ್ಲಾ ಮಟ್ಟದ ಮುಖಂಡರು, ಬಿಜಾಪುರ ಜಿಲ್ಲಾ ವಕ್ಫ ಮಂಡಳಿಯ ಜಿಲ್ಲಾಧ್ಯಕ್ಷರಾದ ಕೌಸರ್ ನಿಯಾಝ್ ಅತ್ತಾರ, ಮುಖಂಡರಾದ ಪಿರ್ ಪಟೇಲ್, ಎಂ.ಎಂ.ಡಿ.ಸಿ ಮುಖಂಡರುಗಳಾದ ಇಖಲಾಸ್ ಸುನೇವಾಲೆ, ಇರಫಾನ ಶೇಖ ಹಾಫೀಜ ಸಿದ್ದಿಕಿ, ಹಿದಾಯತ್ ಮಾಶಾಳಕರ್, ಇಮ್ತಿಯಾಜ್ ಮುಲ್ಲಾ, ನಿಜಾಮ ಹರಿಯಾಲ್ ಸೇರಿದಂತೆ ವಿವಿಧ ಅಲ್ಪಸಂಖ್ಯಾತರ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.