ಹೋಮ್ಕ್ವಾರಂಟೈನ್ಗಳಲ್ಲಿ ಲೋಪದೋಷಗಳಾಗದಂತೆ ನಿರ್ವಹಿಸಿ

ವಿಜಯಪುರ ಮೇ.11: ರಾಜ್ಯ ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ನೀಡಿರುವ ಪ್ರಮಾಣೀಕೃತ ನಿರ್ವಹಣಾ ವಿಧಾನ (ಎಸ್ಓಪಿ)ದಲ್ಲಿ ಸೂಚಿಸಿರುವಂತೆ ಹೊರ ರಾಜ್ಯಗಳಿಂದ ಬರುವವರಿಗೆ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಹಾಗೂ ನಗರ ಪ್ರದೇಶದಲ್ಲಿ ಸಾಂಸ್ಥಿಕ ಮತ್ತು ಹೋಮ್ಕ್ವಾರಂಟೈನ್ಗಳನ್ನು ಸರಿಯಾದ ರೀತಿಯಲ್ಲಿ ಯಾವುದೇ ಲೋಪದೋಷವಾಗದಂತೆ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಡಾ.ಜೆ. ರವಿಶಂಕರ್ ಅವರು ಸೂಚಿಸಿದರು.

  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸುವ ಕ್ರಮಗಳ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು  ಗ್ರಾಮೀಣ ಭಾಗದಲ್ಲಿ ಆಯಾ ತಾಲೂಕು ತಹಶೀಲ್ದಾರರು, ತಾಲೂಕು ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿಗಳು, ತಾಲೂಕಾ ಆರೋಗ್ಯ ಅಧಿಕಾರಿಗಳು, ನಗರ ಹಾಗೂ ಸ್ಥಳಿಯ ಸಂಸ್ಥೆಯ ಮುಖ್ಯಾಧಿಕಾರಿಗಳು, ಬಿಸಿಎಂ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲು ಸೂಚಿಸಿದರು.

     ಗ್ರಾಮೀಣ ಪ್ರದೇಶದಲ್ಲಿ ರೆಸಿಡೇನ್ಸಿಯಲ್ ಸ್ಕೂಲ್, ವಸತಿ ನಿಲಯಗಳಿಗೆ ಸಂಬಂಧಿಸಿದಂತೆ ವಾರ್ಡನ, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳಿಗೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು. ಹಾಗೂ ಪ್ರತಿ ಎರಡು ದಿನಕ್ಕೊಮ್ಮೆ ಆರೋಗ್ಯ ಇಲಾಖೆಯವರು ಹೆಲ್ತ್ ಸ್ಕ್ರೀನಿಂಗ್ ಮಾಡಬೇಕು. ಶಂಕಿತ ವ್ಯಕ್ತಿಗಳನ್ನು ತಾಲೂಕಾ ಐಸೋಲೇಶನ್ ವಾರ್ಡಗೆ ಸ್ಥಳಾಂತರಿಸಬೇಕು. ಹೋಮ್ ಕ್ವಾರಂಟೈನ್ ಮಾಡಲಾದ ವ್ಯಕ್ತಿಯ ಮನೆಗೆ ನೋಟಿಸ್ ಅಂಟಿಸಬೇಕು. ಹಾಗೂ ನೆರಹೊರೆಯ ಮನೆಯವರಿಗೆ ಕಣ್ಗಾವಲು ಇರುವಂತೆ ಸೂಚಿಸಬೇಕು. ಶಂಕಿತ ವ್ಯಕ್ತಿಯನ್ನು ಹೋಮ್ಕ್ವಾರಂಟೈನ್ ಮಾಡುವಾಗ ಆ ವ್ಯಕ್ತಿಯ ಮೊಬೈಲ್ ಸಂಖ್ಯೆ ಹಾಗೂ ಸ್ಥಿರ ದೂರವಾಣಿ ಸಂಖ್ಯೆ ಅಳವಡಿಸಿಕೊಳ್ಳಬೇಕು ಎಂದರು.

ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರಿಗೆ ಹಾಗೂ ಜಿಲ್ಲೆಯಿಂದ ಹೊರ ರಾಜ್ಯಕ್ಕೆ ಪ್ರಯಾಣ ಬೆಳೆಸುವವರಿಗೆ ಸಕರ್ಾರದಿಂದ ಸೇವಾಸಿಂಧು ಣಣಠಿ://ಜತಚಿಟಿಜಣ.ಞಚಿಡಿಟಿಚಿಣಚಿಞಚಿ.ರಠತ.ಟಿ  ದಲ್ಲಿ ಅಜರ್ಿಸಲ್ಲಿಸಬಹುದಾಗಿದೆ. ಅಂತರ್ ಜಿಲ್ಲೆಗಳ ಸಂಚಾರಕ್ಕಾಗಿ ಕನರ್ಾಟಕ ರಾಜ್ಯ ಪೊಲೀಸ್ ಇಲಾಖೆ ಅಭಿವೃದ್ಧಿ ಪಡಿಸಿರುವ ಏಖಕ- ಟಿಣಜಡಿ ಜಣಛಿಣ ಠಿಚಿ  ಞಠಿಛಿಟಜಚಿಡಿಠಿಚಿ.ಟಥಿರಚಿಣಜ.ಛಿಠಟ ಜಾಲತಾಣದ ಮೂಲಕ ಆನ್ಲೈನ್ದಲ್ಲಿ ಪಾಸ್ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಗೆ ಆಗಮಿಸುವವರಿಗೆ ಮತ್ತು ಪ್ರಯಾಣ ಬೆಳೆಸುವವರಿಗೆ ಸಮನ್ವಯತೆ ಮತ್ತು ಸಹಕಾರ ನೀಡಲು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ ಎಂದು ಹೇಳಿದರು.

       ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮಾತನಾಡಿ ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ ಇಡಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಾಂಸ್ಥಿಕ ಹಾಗೂ ಹೋಮ್ಕ್ವಾರಂಟೈನ್ಗೆ ಸಿದ್ಧತೆಗಳನ್ನು ಮಾಡಲಾಗಿದೆ. ಹಾಗೂ ಜಿಲ್ಲೆಯ ಗಡಿ ಭಾಗಗಳಾದ ಧೂಳಖೇಡ ಹಾಗೂ ನಿಡಗುಂದಿಯಲ್ಲಿ ಚೆಕ್ಪೋಸ್ಟ್ಗಳನ್ನು ನಿಮರ್ಾಣ ಮಾಡಲಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ನಿಗಾ ಇಡಲಾಗಿದೆ ಎಂದು ಹೇಳಿದರು.

         ಕಂಟೇನ್ಮೆಂಟ್ ವಲಯ ವ್ಯಾಪ್ತಿಯಲ್ಲಿ ತೀವ್ರ ನಿಗಾ ಇಡಲಾಗಿದ್ದು, ಆರೋಗ್ಯ ಸಂಬಂಧಿತ ಕಾಯಿಲೆಗಳಿಗಾಗಿ ಕಂಟೇನ್ಮೆಂಟ್ ವ್ಯಾಪ್ತಿಯ ಜನರು ಆರೋಗ್ಯ ಸಂಬಂಧಿತ ಕಾಯಿಲೆಗಳಿದ್ದಲ್ಲಿ ಓಪಿಡಿ ಕೇಂದ್ರದಲ್ಲಿ ತೋರಿಸಿಕೊಳ್ಳಬಹುದಾಗಿದೆ. ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ ಓಪಿಡಿಗಳು ವಿಶೇಷವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

     ಜಿಲ್ಲೆಯಲ್ಲಿ ಪಡಿತರವನ್ನು ಶೇ 84 ರಷ್ಟು ಎಲ್ಲೆಡೆಯೂ ನೀಡಲಾಗುತ್ತಿದೆ. ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ ಮನೆಬಾಗಿಲಿಗೆ ಪಡಿತರವನ್ನು ನೀಡಲಾಗುತ್ತಿದ್ದು, ಎರಡು ದಿನಗಳಲ್ಲಿ ಶೇ.100 ರಷ್ಟು ಪಡಿತರವನ್ನು ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

          ಸಭೆಯಲ್ಲಿ ಎಸ್ಪಿ ಅನುಪಮ್ ಅಗರವಾಲ್, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಆಹಾರ ಇಲಾಖೆ ಜಂಟಿ ನಿದರ್ೇಶಕಿ ಕುಮಾರಿ ಸುರೇಖಾ, ಡಾ.ಕಟ್ಟಿ, ಮುಕುಂದ ಗಲಗಲಿ, ಡಾ.ಬಿರಾದಾರ, ಡಾ,ಲಕ್ಕಣ್ಣನವರ ಸೇರಿದಂತೆ ಇತರರು ಇದ್ದರು.