ಮನುಷ್ಯ ಜೀವಿಸುತ್ತಿರುವುದೇ ಕೀಟಗಳ, ಪ್ರಾಣಿ-ಪಕ್ಷಿಗಳ, ಪ್ರಕೃತಿಯ ಸಹಾಯದಿಂದ:-ನವೀನ ಪ್ಯಾಟಿಮನಿ

Man lives with the help of insects, animals and birds, nature:-Navi Patimani

ಮನುಷ್ಯ ಜೀವಿಸುತ್ತಿರುವುದೇ ಕೀಟಗಳ, ಪ್ರಾಣಿ-ಪಕ್ಷಿಗಳ, ಪ್ರಕೃತಿಯ ಸಹಾಯದಿಂದ:-ನವೀನ ಪ್ಯಾಟಿಮನಿ 

ಧಾರವಾಡ 22: ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ನಡೆದ ಅನ್ವೇಷಣೆ ಮತ್ತು ಅಭಿವೃದ್ಧಿ (ಡಿಸ್ಕವರಿ ಮತ್ತು ಡೆವೆಲಪಮೆಂಟ್) ಕಾರ್ಯಕ್ರಮದಲ್ಲಿ “ಪ್ರಾಣಿಪ್ರಪಂಚದ” ಕುರಿತು ಕಲಕೇರಿ ಸಂಗೀತ ವಿದ್ಯಾಲಯದ ಮಕ್ಕಳಿಗೆ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯದ ಟ್ಯಾಕ್ಸಿಡರ್ಮಿಸ್ಟರಾದ “ಶ್ರೀ.ನವೀನ ಪ್ಯಾಟಿಮನಿ” ವಿಶೇಷ ಉಪನ್ಯಾಸವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ.ರೂಪಾಲಿ.ಅವಗೇರಿಮಠ ಮತ್ತು ಶಿಕ್ಷಕರಾದ ಕಾಂತೇಶ, ಸುನೀಲ, ನಾಗರಾಜ, ವಾಲಿಕಾರ ಸರ್ ಮತ್ತು 75 ವಿದ್ಯಾರ್ಥಿಗಳು ಹಾಜರಿದ್ದರು.ಶ್ರೀ.ನವೀನ ಪ್ಯಾಟಿಮನಿಯವರು ಪ್ರಾಣಿಪ್ರಪಂಚದ ಬಗ್ಗೆ ತಿಳಿಸುತ್ತಾ, ಕಡಿದರೆ 3 ರಿಂದ 5 ನಿಮಿಷದಲ್ಲಿ ಸಾವು ಸಂಭವಿಸುವಂತಹ ವಿಷಕಾರಿ ಬಾಕ್ಸ ಅಂಬಲೀ ಮೀನು, ಸೀಗಡಿಗಳನ್ನು ತಿನ್ನುವುದರಿಂದ ಹೃದಯಕ್ಕೆ ಮತ್ತು ಮೆದುಳಿಗೆ ಉಪಯೋಗಗಳು, ಗರಗಸ ಮೀನು ಮತ್ತು ಅರ್ಧ ಕೊಕ್ಕಿನ ಮೀನು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿವೆ. ವಿಷಕಾರಿಯಾಗಿರುವ ಪಫರ್ ಮೀನು ಶತ್ರುವಿನಿಂದ ತಪ್ಪಿಸಿಕೊಳ್ಳಲು ಚೆಂಡಿನಂತೆ ಬದಲಾಗುತ್ತದೆ. ಅಲ್ಲದೇ ಸಾವೇ ಇಲ್ಲದ ಅಂಬಲಿ ಮೀನುಗಳಂತಹ ಸಮುದ್ರ ಜೀವಿಗಳ ಬಗ್ಗೆ ತಿಳಿಸಿದರು. 

ಹೆಲಿಕ್ಯಾಪ್ಟರ್ ನಂತೆ ಹಾರುವ ಕಪ್ಪು ಬಿಳಿ ಮಿಂಚುಳ್ಳಿ, 32 ಮೆದುಳು ಹಾಗೂ 10 ಹೊಟ್ಟೆಯನ್ನು ಹೊಂದಿರುವ ಜಿಗಣಿ ಇದರಲ್ಲಿ ಗಂಡು ಮತ್ತು ಹೆಣ್ಣಿನ ಸಂತಾನೋತ್ಪತ್ತಿ ಅಂಗಗಳು ಒಂದೇಯಾಗಿರುತ್ತದೆ. ಮಾನವನಲ್ಲಿ ಹುಟ್ಟಿನಿಂದ 300 ಎಲುಬುಗಳಿದ್ದರೆ, ಬೆಳೆದಂತೆ 206 ಕ್ಕೆ ಇಳಿಯುತ್ತವೆ. ಪುರುಷನ ಮೆದುಳು 1400 ಗ್ರಾಂ ಇದ್ದರೆ, ಹೆಣ್ಣಿನ ಮೆದುಳು 1260 ಗ್ರಾಂ ಇರುತ್ತದೆ. ಆನೆಗಳು ಕಾಲಿನಿಂದ ಸಂವಹನ ಕ್ರಿಯೆಯನ್ನು ನಡೆಸುತ್ತವೆ. ಒಂಟೆಗಳು ನೀರನ್ನು ಸಂಗ್ರಹಿಸುವುದಿಲ್ಲ, ಗಂಡು ನವಿಲಿಗೆ ಮಾತ್ರ ಆಕರ್ಷಕ ಪುಕ್ಕಗಳಿದ್ದು ಹೆಣ್ಣು ನವಿಲಿಗೆ ಇರುವುದಿಲ್ಲ ಎಂಬುದನ್ನು ತಿಳಿಸಿದರು.ಗಿಡುಗಗಳು, ಕಪ್ಪೆಗಳು ಸಾಮಾನ್ಯವಾದರೆ ಗೋಲ್ಡನ್ ಡಾರ್ಟ ಕಪ್ಪೆ ವಿಷಕಾರಿ ಕಪ್ಪೆಯಾಗಿದೆ, ಜಾಲಪಾದಗಳಿಂದ ಕೂಡಿರುವ ಮಲಬಾಗಿನ ಹಾರುವ ಕಪ್ಪೆ ಇದು ಹೆಚ್ಚಾಗಿ ಶಿರಸಿ, ಸಿದ್ಧಾಪುರದಲ್ಲಿ ಕಾಣ ಸಿಗುತ್ತವೆ.  

ಮಲಬಾರ್ ಟ್ರೋಗನ್ ಪಶ್ಚಿಮ ಘಟ್ಟಗಳಲ್ಲಿ ಯಥೇಚ್ಛವಾಗಿ ಕಂಡು ಬರುತ್ತವೆ. ಇಂಪಾದ ದ್ವನಿಯನ್ನು ಹೊಂದಿರುವ ಕೋಗಿಲೆಯು ಪರಾವಲಂಬಿಯಾಗಿದ್ದು, ಕಾಗೆ ಗೂಡಲ್ಲಿ ಮೊಟ್ಟೆ ಇಡುತ್ತದೆ. ಕೆಂಬೂತ ಅಥವಾ ರತ್ನಪಕ್ಷಿ, ಬಾವಲಿ, ದರ್ಜಿ ಹಕ್ಕಿ, ಸೂರಕ್ಕಿಗಳ ವಿಶೇಷತೆಗಳನ್ನು ತಿಳಿಸಿದರು. ಸಿವಿಲ್ ಇಂಜಿನಿಯರ್ ಎಂದೇ ಪ್ರಸಿದ್ಧವಾದ ಗೀಜುಗನ ಗೂಡು ಅದ್ಭುತ. ಇದನ್ನು ಅರ್ಧ ಗಂಡು ಗೀಜುಗ ಉಳಿದ ಅರ್ಧ ಹೆಣ್ಣು ಗೀಜುಗ ಕಟ್ಟಿ ಮುಗಿಸುತ್ತವೆ. ಹಾರುವ ಅಳಿಲುಗಳನ್ನು ಶಿವಮೊಗ್ಗ ಹಾಗೂ ಕೊಡಗಿನಲ್ಲಿ ನೋಡಬಹುದು. ನೀರು ನಾಯಿಯನ್ನು ಹೊಸಪೇಟೆಯಲ್ಲಿ ಸಂರಕ್ಷಿಸಲಾಗುತ್ತಿದೆ. ಪ್ರಪಂಚದಲ್ಲಿ 75ಅ ವಿಷಕಾರಿ ಅಲ್ಲದ ಹಾವುಗಳಿದ್ದು, ಕೇವಲ 25ಅ ಮಾತ್ರ ವಿಷಕಾರಿಯಾದ ಹಾವುಗಳಿವೆ. ಪ್ರಪಂಚದಲ್ಲೇ ತನ್ನ ಮರಿಗಳಿಗೆ ಗೂಡು ಕಟ್ಟು ಏಕೈಕ ಹಾವು ಕಾಳಿಂಗ ಸರ​‍್ ಇದರ ಜೀವಿತಾವಧಿ 20 ವರ್ಷ ಇದು 40 ಮೊಟ್ಟೆಗಳನ್ನು ಇಡುತ್ತದೆ, ಹಾವುಗಳು ಪ್ರಕೃತಿಯ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹುಲಿಗಳು ಮಾಂಸವನ್ನು ಬಾಯಿಯಲ್ಲಿ ಹಿಡಿದು 6 ಕಿಲೋ ಮೀಟರ್ ಈಜಬಲ್ಲವು ಮತ್ತು ಅವುಗಳನ್ನು ಮೈ ಮೇಲಿನ ಪಟ್ಟಿಗಳಿಂದ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದು. ಮಣ್ಣು ನಮ್ಮ ನಿತ್ಯ ಜೀವನಕ್ಕೆ ಉಪಯೋಗವಾಗುವಂತಹ ಖನಿಜಗಳನ್ನು ಒಳಗೊಂಡಿದೆ.  

ಉದಾಹರಣೆಗೆ ನಮ್ಮ ದೇಹದ ಮುಳೆಗಳು ಗಟ್ಟಿಯಾಗಿ ಇರಬೇಕೆಂದರೆ ಚೆನ್ನಾಗಿ ಕಾರ್ಯನಿರ್ವಹಿಸಬೇಕೆಂದರೆ ನಮಗೆ “ಅಚಿಟಛಿಣಟ-ಕ್ಯಾಲ್ಸಿಯಂ” ಬೇಕು, ನಮ್ಮ ದೇಹದಲ್ಲಿ ರಕ್ತವು ಉತ್ಪಾದನೆಯಾಗಬೇಕಾದರೆ ಮತ್ತು ನಮ್ಮ ಹೃದಯ ಚೆನ್ನಾಗಿ ಕಾರ್ಯನಿರ್ವಹಿಸಬೇಕೆಂದರೆ ನಮಗೆ “ಋಠ-ಕಬ್ಬಿಣ” ಬೇಕು, ದೇಹದ ಸ್ನಾಯುಗಳು ಚೆನ್ನಾಗಿ ಕಾರ್ಯನಿರ್ವಹಿಸಿಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು “ಕಠಛಿಣಟ-ಮೆದುಬಳ್ಳಿಕ” ಬೇಕು, ದೇಹದ ತೂಕ ಕಡಿಮೆ ಆಗಲು ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ನಮಗೆ “ಋರಜಟಿಜ-ಅಯೊಡಿನ್‌” ಬೇಕು. ರೋಗನಿರೋಧಕ ಶಕ್ತಿ ಹೆಚ್ಚಾಗ ಬೇಕಾದರೆ ಮತ್ತು ಬಿದ್ದು ಗಾಯಗಳಾದಾಗ ಗಾಯಗಳನ್ನು ಗುಣಪಡಿಸಬೇಕೆಂದರೆ ನಮಗೆ “ಚಟಿಛಿ-ಸತು” ಬೇಕು. ಇವೆಲ್ಲವೂ ಮಣ್ಣಿನಲ್ಲಿ ಇರುವುದರಿಂದ ನಾವು ಮಣ್ಣನ್ನು ಕಾಪಾಡಬೇಕು ಉಳಿಸಬೇಕು ಎಂದು ತಿಳಿಸಿದರು.  

ಗಿಡ-ಮರಗಳು ಬೇರುಗಳಿಂದ ವೈಜ್ಞಾನಿಕವಾಗಿ ಒಂದಕ್ಕೊಂದು ಮಾತನಾಡುತ್ತವೆ.ಇಡಿ ಜಗತ್ತಿನ ಜೀವಿಗಳ ದೇಹದಲ್ಲಿ ನಾವು ಒಟ್ಟು 6 ತರಹದ ರಕ್ತದ ಬಣ್ಣವನ್ನು ನೋಡಬಹುದು ಅವು ಯಾವುವು ಎಂದರೆ ಕೆಂಪು ರಕ್ತದ ಬಣ್ಣ ಇದರಲ್ಲಿ ಹಿಮೋಗ್ಲೋಬಿನ್ ಇರುತ್ತದೆ, ನೀಲಿ ರಕ್ತದ ಬಣ್ಣ ಇದರಲ್ಲಿ ಹಿಮೋಸಯಾನಿನ್ ಇರುತ್ತದೆ, ಹಸಿರು ರಕ್ತದ ಬಣ್ಣ ಇದರಲ್ಲಿ ಕ್ಲೋರೊಕ್ರೂರಿನ್ ಇರುತ್ತದೆ, ನೇರಳೆ ರಕ್ತದ ಬಣ್ಣ ಇದರಲ್ಲಿ ಹೆಮೆರಿಥ್ರೀನ್ ಇರುತ್ತದೆ, ಹಳದಿ ರಕ್ತದ ಬಣ್ಣ ಇದರಲ್ಲಿ ವನಾಬಿನ್ ಇರುತ್ತದೆ. ಬಣ್ಣರಹಿತ ರಕ್ತ ಇದರಲ್ಲಿ ಹಿಮೋಲಿಂಫ್ ಎಂಬ ವರ್ಣದ್ರವ್ಯವು ಇರುತ್ತದೆ ಎಂದು ತಿಳಿಸಿದರು.ಕೀಟಗಳು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಪರಾಗಸ್ಪರ್ಶ ಮಾಡುವುದರಿಂದಲೇ ನಮಗೆ ಹೂವು, ಕಾಯಿ, ಹಣ್ಣುಗಳಂತಹ ಆಹಾರ ಸಿಗುತ್ತಿರುವುದು. ಈ ಭೂಮಿಯ ಮೇಲೆ ಮನುಷ್ಯ ಜೀವಿಸುತ್ತಿರುವುದೇ ಕೀಟಗಳ, ಪ್ರಾಣಿ-ಪಕ್ಷಿಗಳ, ಪ್ರಕೃತಿಯ ಸಹಾಯದಿಂದ ಎಂದು ತಿಳಿಸುತ್ತಾ, ಹತ್ತು ಹಲವಾರು ವಿಸ್ಮಯಗಳಿಂದ ಕೂಡಿದ ಪ್ರಕೃತಿಯನ್ನು ಪ್ರಾಣಿ-ಪಕ್ಷಿಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.