ಬೆಳಗಾವಿ : ಅಕ್ರಮವಾಗಿ ಆಮೆಗಳನ್ನು ತಂದು ಮಾರಾಟ ಮಾಡುತ್ತಿದ್ದ ಆರೋಪಿತನನ್ನು ಬೆಳಗಾವಿ ವಲಯ ಅರಣ್ಯಾಧಿಕಾರಿಗಳು ಸೋಮವಾರ ತಡರಾತ್ರಿ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ಆರೋಪಿತನನ್ನು ಮಹಾರಾಷ್ಟ್ರದ ಚಂದಗಡ ತಾಲೂಕಿನ ಡೆಕೊಳಿ ಗ್ರಾಮದವನಾದ ಅಮೃತ ಶಿವಾಜಿ ಬೆನಕೆ(45) ಎಂದು ಗುರುತಿಸಲಾಗಿದೆ. ಈತ ತಾಲೂಕಿನ ಬಿಜಗರಣಿ ಮತ್ತು ರಾಕಸಕೊಪ್ಪ ಮದ್ಯದಲ್ಲಿ ಈ ಅಕ್ರಮ ಆಮೆಗಳ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಆರ್ಎಫ್ಓ ಆರ್.ಎಚ್.ಡೊಂಬರಗಿ ನೇತೃತ್ವದ ತಂಡವು ಆಮೆ ಕೊಂಡು ಕೊಳ್ಳುವವರ ಸೋಗಿನಲ್ಲಿ ಹೋಗಿ ದಾಳಿ ನಡೆಸಿ ಆಮೆ ಸಮೇತವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದರು.
ಆಮೆ ಕೊಳ್ಳುವವರ ಸೋಗಿನಲ್ಲಿ ಡಿಆರ್ಎಫಓ ವಿನಯ ಗೌಡರ, ರಮೇಶ ಗಿರಿಯಪ್ಪನವರ ಮತ್ತು ಅರಣ್ಯ ಸಿಬ್ಬಂಧಿ ಮೊಹಮ್ಮದ ಕಿಲ್ಲೇದಾರ ತಪಾಸಣೆ ನಡೆಸಿದಾಗ ಪ್ರತಿ ಆಮೆಗೆ ಲಕ್ಷಕ್ಕೂ ಅಧಿಕ ಹಣಕ್ಕೆ ಆಮೆಗಳನ್ನು ಅರಣ್ಯಾಧಿಕಾರಿಗಳಿಗೇ ಮಾರಾಟ ಮಾಡಲೆತ್ನಿಸಿದಾಗ ದಾಳಿ ನಡೆಸಿದ ಅರಣ್ಯಾಧಿಕಾರಿಗಳ ಈ ಆಮೆ ಮಾರಾಟ ಮಾಡುತ್ತಿದ್ದ ಆರೋಪಿತನ ದ್ವಿಚಕ್ರ ವಾಹನ ಮತ್ತು ಆಮೆ ವಶಕ್ಕೆ ಪಡೆದಿದ್ದಾರೆ. ಈ ದಾಳಿಗೆ ಸಿಸಿಎಫ್ ಪಿ.ಬಿ. ಕರುಣಾಕರ, ಡಿಸಿಎಫ್ ಎಂ.ವಿ. ಅಮರನಾಥ ಹಾಗೂ ಎಸಿಎಫ್ ಎಸ್.ಎಂ. ಸಂಗೊಳ್ಳಿ ಇವರುಗಳು ಮಾರ್ಗದರ್ಶನ ನೀಡಿದರು ಎನ್ನಲ್ಲಾಗಿದೆ.