ಪ್ರವಾಸಿಗನ ಸೋಗಿನಲ್ಲಿ 22 ಲಕ್ಷ ರೂ ಮೌಲ್ಯದ ಕಾರು ಕಳವು ಮಾಡಿದ್ದ ಆರೋಪಿ ಬಂಧನ
ಪ್ರವಾಸಿಗನ ಸೋಗಿನಲ್ಲಿ 22 ಲಕ್ಷ ರೂ ಮೌಲ್ಯದ ಕಾರು ಕಳವು ಮಾಡಿದ್ದ ಆರೋಪಿ ಬಂಧನMan arrested for robbing a car worth Rs 22 lakh
Lokadrshan Daily
1/6/25, 4:03 AM ಪ್ರಕಟಿಸಲಾಗಿದೆ
ಬೆಂಗಳೂರು, ಜ. 7 , ಇತ್ತೀಚೆಗಷ್ಟೇ ಪ್ರವಾಸಿಗನ ಸೋಗಿನಲ್ಲಿ ಟ್ರಾವೆಲ್ವೊಂದಕ್ಕೆ ಕರೆ ಮಾಡಿ 22 ಲಕ್ಷ ರೂ ಮೌಲ್ಯದ ಕಾರು ಕಳವು ಮಾಡಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿ ಕರಣ್ ಕುಮಾರ್ (27) ಬಂಧಿತ ಆರೋಪಿ. ಬಂಧಿತನಿಂದ ಇನ್ನೋವಾ ಕ್ರಿಸ್ಟ್ ಮತ್ತು ಸ್ವಿಫ್ಟ್ ಡಿಸೈರ್ ಕಾರನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕರಣ್ನ ಮೊಬೈಲ್ ಲೊಕೇಷನ್ ಆಧರಿಸಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಕರಣ್, ಕಳ್ಳತನ ಮಾಡಿದ್ದ ಇನೋವಾ ಕಾರನ್ನು ತುಮಕೂರಿನಲ್ಲಿ ಇಟ್ಟಿದ್ದ ಎಂದು ತಿಳಿದುಬಂದಿದೆ.ಆರೋಪಿ ಜಸ್ಟ್ ಡಯಲ್ ಮೂಲಕ ಕಡಬಗರೆಯ ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಪರ್ಕಿಸಿ ಮೈಸೂರು ಪ್ರವಾಸಕ್ಕೆ ಹೋಗಬೇಕಾಗಿದ್ದು, ಕಾರು ಬಾಡಿಗೆಗೆ ಬೇಕಾಗಿದೆ ಎಂದು ಹೇಳಿ ಬುಕ್ ಮಾಡಿದ್ದ.
ನಂತರ ಟ್ರಾವೆಲ್ಸ್ನವರು ಕಾರು ಚಾಲಕ ಅರುಣ್ಗೆ ಹೇಳಿ ಮೈಸೂರಿಗೆ ಹೋಗುವಂತೆ ಸೂಚಿಸಿದ್ದರು. ಇದರಂತೆ ಅರುಣ್, ಕಾನಿಷ್ಕ ಹೋಟೆಲ್ಗೆ ಪ್ರಯಾಣಿಕನನ್ನು ಕರೆತರಲು ಹೋಗಿದ್ದ. ಈ ವೇಳೆ ಕಾರು ಹತ್ತಿದ್ದ ಪ್ರಯಾಣಿಕ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿಗೆ ತೆರಳುವಂತೆ ಹೇಳಿದ್ದ. ನಂತರ ಹೋಟೆಲ್ನಲ್ಲಿ ಪೇಮೆಂಟ್ ಕಲೆಕ್ಷನ್ ಮಾಡಿಕೊಳ್ಳಬೇಕಿದೆ. ಬಳಿಕ ಮಿಸ್ ಚಿಫ್ ಹೋಟೆಲ್ನಲ್ಲಿ ನನ್ನ ಸ್ನೇಹಿತ ಇದ್ದಾನೆ. 10 ಸಾವಿರ ರೂ ಹಣ ಕೊಡುತ್ತಾರೆ ತೆಗೆದುಕೊಂಡು ಬಾ ಎಂದು ಅರುಣ್ಗೆ ಕಳುಸಿದ್ದ ವ್ಯಕ್ತಿ, ಎಸಿ ಆನ್ ಮಾಡಿ ಹೋಗುವಂತೆ ಸೂಚಿಸಿದ್ದನು. ಕೀ ಕಾರಿನಲ್ಲೇ ಬಿಟ್ಟು ಹಣ ತೆಗೆದುಕೊಂಡು ಬರಲು ಹೋದಾಗ ಕಾರು ಸಮೇತ ಆರೋಪಿ ಪರಾರಿಯಾಗಿದ್ದನು.
ಹಣ ತೆಗೆದುಕೊಂಡು ಬರಲು ಹೋಗಿದ್ದ ಅರುಣ್ಗೆ ಹೋಟೆಲ್ನಲ್ಲಿ ಆರೋಪಿ ಹೇಳಿದ ವ್ಯಕ್ತಿ ಯಾರು ದೊರಕಿಲ್ಲ. ನಂತರ ಕರೆ ಮಾಡಿ ವ್ಯಕ್ತಿಗೆ ಈ ವಿಷಯ ತಿಳಿಸಿದ್ದ. ಐದು ನಿಮಿಷ ಅಲ್ಲೇ ಇರಿ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಾರು ಸಮೇತ ಆತ ಪರಾರಿಯಾಗಿದ್ದನು. ನಂತರ ವ್ಯಕ್ತಿ ಸ್ಥಳಕ್ಕೆ ಬರದ ಕಾರಣ ಆತನಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬಂದಿತ್ತು. ಇದರಿಂದ ಆತಂಕಗೊಂಡ ಚಾಲಕ ವಾಪಸ್ಸು ಸ್ಥಳಕ್ಕೆ ಬಂದಾಗ ಕಾರು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸರಿಗೆ ಕಾರು ಚಾಲಕ ಅರುಣ್ ದೂರು ನೀಡಿದ್ದರು.ಅದೇ ದಿನ ಆರೋಪಿ ಸ್ವಿಫ್ಟ್ ಡಿಸೈರ್ ಬುಕ್ ಮಾಡಿ ಎಗರಿಸಿದ್ದನು ಎಂದು ತಿಳಿದು ಬಂದಿದ್ದು, ಆ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.