ಕೋಲ್ಕತಾ,
ಡಿ 19 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ ಮುಂದಾದ ಇತಿಹಾಸಜ್ಞ ರಾಮಚಂದ್ರ ಗುಹ
ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಖಂಡಿಸಿದ್ದಾರೆ. ಟ್ವಿಟರ್ ಮೂಲಕ ಕಿಡಿ ಕಾರಿರುವ ಮಮತಾ,
"ಈ ಸರ್ಕಾರವು ಹೆದರುತ್ತಿದೆ ವಿದ್ಯಾರ್ಥಿಗಳು ಹಾಗೂ ಭಾರತದ ಅತ್ಯಂತ ನಿಪುಣ ಇತಿಹಾಸಕಾರರಿಗೆ
ಹೆದರುತ್ತಿದೆ” ಎಂದು ಹೇಳಿದ್ದಾರೆ. "ರಾಮ್ ಗುಹಾ ಬಂಧನವನ್ನು ನಾನು ಖಂಡಿಸುತ್ತೇನೆ. ಬಂಧನಕ್ಕೊಳಗಾಗಿರುವ
ಎಲ್ಲರಿಗೂ ನಮ್ಮ ಬೆಂಬಲವಿದೆ” ಎಂದು ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ ಸಿ ಕುರಿತು
ಮಾಧ್ಯಮಗಳೊಂದಿಗೆ ಮಾತನಾಡಿದ್ದಕ್ಕಾಗಿ ಹಾಗೂ, ಗಾಂಧೀಜಿಯ ಪೋಸ್ಟರ್ ಅನ್ನು ಹಿಡಿದು ಟೌನ್ ಹಾಲ್ ಬಳಿ
ಪ್ರತಿಭಟನೆ ನಡೆಸಿದ ರಾಮಚಂದ್ರ ಗುಹ ಹಾಗೂ ಇತರ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.