ಡಾರ್ಜಿಲಿಂಗ್ ನಲ್ಲಿ ಸಿಎಎ ಪ್ರತಿಭಟನೆಗೆ ಮಮತಾ ನೇತೃತ್ವ

ಕೋಲ್ಕತಾ, ಜ 22 :      ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ವಿರೋಧಿಸಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ನಡೆಯಲಿರುವ ಪ್ರತಿಭಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ ವಹಿಸಲಿದ್ದಾರೆ. 

ಕಳೆದ ಕೆಲ ವಾರಗಳಿಂದ ಮಮತಾ ಬ್ಯಾನರ್ಜಿ ಅವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಕೋಲ್ಕತಾದಲ್ಲಿ ಅವರ ನೇತೃತ್ವದ ಹಲವು ಪ್ರತಿಭಟನೆಗಳೂ ನಡೆದಿವೆ. 

ತೃಣಮೂಲ ಚಾತ್ರ ಪರಿಷತ್ ಹಾಗೂ ತೃಣಮೂಲ ಮಹಿಳಾ ಕಾಂಗ್ರೆಸ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. 

ಪಶ್ಚಿಮ ಬಂಗಾಳ ಕೇಂದ್ರ ಸರ್ಕಾರ ಕರೆದಿದ್ದ ಎನ್ ಪಿಆರ್ ಕುರಿತ ಸಭೆಯನ್ನು ಬಹಿಷ್ಕರಿಸುವ ಏಕೈಕ ರಾಜ್ಯವಾಗಿದೆ. 

ಇತ್ತೀಚೆಗೆ ಉತ್ತರಬಂಗ ಉತ್ಸವದ ಉದ್ಘಾಟನೆ ಸಂದರ್ಭದಲ್ಲಿ ಮಮತಾ, ಬಂಗಾಳದಲ್ಲಿ ಎನ್ ಪಿ ಆರ್ ಅಥವಾ ಸಿಎಎ ಜಾರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ದೇಶದ 365 ದಿನಗಳ ಕಾಲವೂ ರಾಜ್ಯದ ಜನತೆಯನ್ನು ರಕ್ಷಿಸುವ ಭರವಸೆಯನ್ನು ಮಮತಾ ನೀಡಿದ್ದಾರೆ.