ಅಮಿತ್ ಶಾಗೆ ಟಾಂಗ್ ನೀಡಿದ ಮಮತಾ


ಕೋಲ್ಕತಾ 11: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ನಗರದಲ್ಲಿ ನಡೆಸಿದ ರ್ಯಾಲಿ ಒಂದು ದೊಡ್ಡ 'ಫ್ಲಾಪ್ ಶೋ' ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದೆ. 

ನಮ್ಮ ರ್ಯಾಲಿಯನ್ನು ಜನರು ನೋಡದಂತೆ ಮಾಡಲು ಎಲ್ಲ ಬೆಂಗಾಲಿ ಚಾನೆಲ್ಗಳ ಸಿಗ್ನಲ್ಗಳನ್ನು ದುರ್ಬಲಗೊಳಿಸಲಾಗಿದೆ ಎಂಬ ಅಮಿತ್ ಶಾ ಆರೋಪವನ್ನು ಸ್ಪಷ್ಟವಾಗಿ ತಳಿಹಾಕಿದ ಟಿಎಂಸಿ, ಮಾಧ್ಯಮಗಳಿಗೆ ಅವಮಾನ ಮಾಡಬೇಡಿ. ಅವರು ಎಲ್ಲವನ್ನೂ ತೋರಿಸಿದ್ದಾರೆ ಎಂದು ಟಾಂಗ್ 

ನೀಡಿದೆ. 

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮತ್ತೊಂದು ಫ್ಲಾಪ್ ಶೋ ಈಗಷ್ಟೇ ಮುಕ್ತಾಯವಾಗಿದೆ. ಫ್ಲಾಪ್ ಶೋ ನಂತರ ಈಗ ಅದಕ್ಕೆ ಕಾರಣಗಳನ್ನು ಹುಡುಕುತ್ತಿದ್ದಾರೆ ಎಂದು ಟಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ. 

ಕೋಲ್ಕತಾದ ಮಯೋ ರಸ್ತೆಯಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೆ  

ನಮ್ಮ ರ್ಯಾಲಿಯನ್ನು ಜನರು ನೋಡದಂತೆ ಮಾಡಲು ಎಲ್ಲ ಬೆಂಗಾಲಿ ಚಾನೆಲ್ಗಳ ಸಿಗ್ನಲ್ಗಳನ್ನು ದುರ್ಬಲಗೊಳಿಸಲಾಗಿದೆ. ಈ ಮೂಲಕ ನಮ್ಮ ದನಿಯನ್ನು ಅಡಗಿಸಲು ಯತ್ನಿಸಲಾಗುತ್ತಿದೆ. ಆದರೆ ಪ್ರತಿ ಜಿಲ್ಲೆಗೂ ತೆರಳಿ ಟಿಎಂಸಿಯನ್ನು ಕಿತ್ತು ಹಾಕುತ್ತೇವೆ ಎಂದು ಅಮಿತ್ ಶಾ ಗುಡುಗಿದ್ದರು.